ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು?

|
Google Oneindia Kannada News

Recommended Video

sabarimala verdict : ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು? | Oneindia Kannada

ತಿರುವನಂತಪುರಂ, ಜನವರಿ 11: ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳಿ ಇತಿಹಾಸ ನಿರ್ಮಿಸಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು?

ಜನವರಿ 2 ರಂದು ನಸುಕಿನಲ್ಲಿ ಕನಕದುರ್ಗಾ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯ ಜೊತೆ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತೆರಳಿದ್ದರು.

ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳುಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು

2 Women who entered Sabarimala temple unable to go home after threats

ಈ ಘಟನೆಯ ನಂತರ ಈ ಇಬ್ಬರು ಮಹಿಳೆಯರೂ ಮನೆಗೆ ತೆರಳಿಲ್ಲ. ಪ್ರತಿಭಟನಕಾರರ ಭಯದಿಂದಾಗಿ ಅವರಿಬ್ಬರೂ ಕೊಚ್ಚಿ ಹೊರವಲಯದ ಸ್ಥಳವೊಂದರಲ್ಲಿ ಅಡಗಿಕುಳಿತಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ದೇವಾಲಯ ಪ್ರವೇಶದ ಘಟನೆಯ ನಂತರ ಇಬ್ಬರು ಮಹಿಳೆಯರಿಗೂ ಪ್ರತಿಭಟನಕಾರರಿಂದ ಬೆದರಿಕೆಗಳು ಬರುತ್ತಿದ್ದು ಬೇರೆ ದಾರಿ ಕಾಣದೆ ಅವರು ಅಡಗಿ ಕುಳಿತಿದ್ದಾರೆ.

ವೇಷ ಬದಲಿಸಿಕೊಂಡು ಅಯ್ಯಪ್ಪ ದರ್ಶನ ಪಡೆದ ಕೇರಳ ಮಹಿಳೆವೇಷ ಬದಲಿಸಿಕೊಂಡು ಅಯ್ಯಪ್ಪ ದರ್ಶನ ಪಡೆದ ಕೇರಳ ಮಹಿಳೆ

40 ವರ್ಷ ವಯಸ್ಸಿನ ಬಿಂದು ಅಮ್ಮಿಣಿ ಎಂಬ ಕೇರಳದ ಕಣ್ಣೂರು ವಿವಿಯ ಕಾನೂನು ಉಪನ್ಯಾಸಕಿ ಮತ್ತು 39 ವರ್ಷ ವಯಸ್ಸಿನ ಕನಕದುರ್ಗಾ ಎಂಬ ಮಹಿಳೆಯರಿಬ್ಬರು ಜನವರಿ 2 ರಂದು ಬೆಳಿಗ್ಗೆ ಸುಮಾರು 3:45 ರ ಸುಮಾರಿಗೆ ದೇವಾಲಯ ಪ್ರವೇಶಿಸಿದ್ದರು.

ಈ ಘಟನೆಯ ನಂತರ ಹಲವು ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತಷ್ಟು ಜನ ಇದನ್ನು ಕ್ರಾಂತಿ ಎಂದು ಬಣ್ಣಿಸಿದ್ದರು.

ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರುಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರು

10 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.

English summary
Two women who made history by becoming the first in centuries to enter the Sabarimala hill temple in Kerala are in hiding after threats by protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X