ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರು

|
Google Oneindia Kannada News

ತಿರುವನಂತಪುರಂ, ಜನವರಿ 02: ಎಂಟುನೂರು ವರ್ಷಗಳ ಇತಿಹಾಸವನ್ನು ಬದಲಿಸುವ ಘಟನೆ ಶಬರಿಮಲೆಯಲ್ಲಿ ನಡೆದಿದೆ. ಬಹುಕಾಲದ ವಿವಾದ ನಂತರ ಇಂದು ಬೆಳಿಗ್ಗೆ ಸುಮಾರು 3 :45 ರ ಸಮಯಕ್ಕೆ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದಾರೆ.

ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ ನಲ್ಲಿ ನತೆರವುಗೊಳಿಸಿತ್ತು.

2 women enters Sabarimala Ayyappa temple in Kerala

ಅಯ್ಯಪ್ಪನ ದರ್ಶನ ಮಾಡದೆ ಹಿಂದಿರುಗಲ್ಲ : ಇಬ್ಬರು ಮಹಿಳೆಯರ ಸವಾಲುಅಯ್ಯಪ್ಪನ ದರ್ಶನ ಮಾಡದೆ ಹಿಂದಿರುಗಲ್ಲ : ಇಬ್ಬರು ಮಹಿಳೆಯರ ಸವಾಲು

ತಾವು ಬೆಳಿಗ್ಗಿನ ಜಾವ 3:45 ರ ಸುಮಾರಿಗೆ ಅಯ್ಯಪ್ಪನ ಸನ್ನಿಧಿಗೆ ಪ್ರವೇಶಿಸಿದ್ದಾಗಿ ಈ ಇಬ್ಬರು ಮಹಿಳೆಯರೇ ಹೇಳಿಕೊಂಡಿದ್ದಾರೆ.

ಡಿಸೆಂಬರ್ 18 ರಂದೇ ದೇವಾಲಯ ಪ್ರವೇಶಕ್ಕೆ ಈ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಪೊಲೀಸ್ ಭದ್ರತೆಯೊಂದಿಗೆ ಅವರು ದೇವಾಲಯ ಪ್ರವೇಶಿಸಿದ್ದು, ಅವರ ದೇವಾಲಯ ಪ್ರವೇಶವನ್ನು ಪೊಲೀಸರೇ ಖಚಿತಪಡಿಸಿದ್ದಾರೆ.

ಶಬರಿಮಲೆಗೆ ಪ್ರವೇಶಿಸುವಾಗ ಭಕ್ತರು ಯಾವುದೇ ಬೇಸರವಿಲ್ಲದೆ ನಮ್ಮನ್ನು ಸ್ವಾಗತಿಸಿದರು ಎಂದು ಬಿಂದು ಪತ್ರಕರ್ತರಿಗೆ ಹೇಳಿದರು.

ಈ ಘಟನೆಯ ನಂತರ ಬಿಂದು ಮತ್ತು ಕನಕದುರ್ಗ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ವರದಿಯಾಗಿದೆ.

ಪಂಬಾದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ, ಮಹಿಳೆಯರ ಪ್ರವೇಶಕ್ಕೆ ವಿರೋಧಪಂಬಾದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ, ಮಹಿಳೆಯರ ಪ್ರವೇಶಕ್ಕೆ ವಿರೋಧ

ಇಬ್ಬರು ಮಹಿಳೆಯರನ್ನು ಬಿಂದು ಮತ್ತು ಕನಕದುರ್ಗಾ ಎಂದು ಗುರುತಿಸಲಾಗಿದೆ. 3:45 ರ ಸುಮಾರಿಗೆ ಅಯ್ಯಪ್ಪನ ಸನ್ನಿಧಿಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಪ್ರವೇಶಿಸಿದ್ದು ಸತ್ಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರ ಮನೆಗೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.

ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್

ಮಂಗಳವಾರವಷ್ಟೇ 620 ಕಿ.ಮೀ. ಉದ್ದದ ಗೋಡೆ ನಿರ್ಮಿಸಿದ್ದ ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಬೆಂಬಲಿಸಿದ್ದರು.

English summary
2 women enter Sabarimala Ayyappa temple in Kerala on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X