ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಫ್ ಎಂದುಕೊಂಡಿದ್ದ ಕೇರಳಕ್ಕೆ ಮತ್ತೆ ಆಘಾತ ನೀಡಿದ ಕೊರೊನಾ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 22: ಕೊರೊನಾ ವೈರಸ್ ವಿಚಾರದಲ್ಲಿ ಕೇರಳ ಸರ್ಕಾರದ ಶ್ರಮ ಮತ್ತು ವೈದ್ಯಕೀಯ ತಂಡದ ಶ್ರಮ ಮೆಚ್ಚುವಂತಹದ್ದು. ಕಳೆದ ಹತ್ತು ದಿನಗಳ ಅಂಕಿ ಅಂಶ ನೋಡಿದ್ರೆ, ಕೇರಳದಲ್ಲಿ ಕೊವಿಡ್ ಒಂದು ಹಂತಕ್ಕೆ ನಿಯಂತ್ರಣದಲ್ಲಿದೆ.

ಬೇರೆ ರಾಜ್ಯದಲ್ಲಿ ದಿನಕ್ಕೆ 50, 100, 200 ಕೇಸ್‌ಗಳು ವರದಿಯಾಗುತ್ತಿದೆ. ಆದರೆ, ಕೇರಳದಲ್ಲಿ ದಿನಕ್ಕೆ 3, 4, 7 ಹೀಗೆ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇನ್ನು ಚೇತರಿಕೆ ಕಾಣುತ್ತಿರುವವರ ಪೈಕಿಯೂ ಶೇಕಡಾವಾರು ಗಮನಿಸಿದರೆ ಕೇರಳ ಮೊದಲ ಸ್ಥಾನದಲ್ಲಿದೆ.

ಕೇರಳದಲ್ಲಿ ಕೊರೊನಾ ಗೆದ್ದ ಇಟಲಿ ಪ್ರಜೆ, ಸರ್ಕಾರದಿಂದ ಸನ್ಮಾನಕೇರಳದಲ್ಲಿ ಕೊರೊನಾ ಗೆದ್ದ ಇಟಲಿ ಪ್ರಜೆ, ಸರ್ಕಾರದಿಂದ ಸನ್ಮಾನ

ಹೊಸ ಸೋಂಕು ಪತ್ತೆ, ಸಾವಿನ ಅಂಕಿ ಅಂಶ, ಚೇತರಿಕೆ ಶೇಕಡಾವಾರು ಎಲ್ಲವೂ ಕೇರಳ ಸೇಫ್ ಎಂದು ಹೇಳುವಂತಿದೆ. ಆದರೆ, ನಿನ್ನೆಯ ಅಂಕಿ-ಅಂಶ ಕೇರಳ ಸರ್ಕಾರಕ್ಕೆ ಮತ್ತೆ ತಲೆಬಿಸಿ ಮಾಡಿದೆ. ಮುಂದೆ ಓದಿ...

ಒಂದೇ ದಿನ 19 ಹೊಸ ಕೇಸ್

ಒಂದೇ ದಿನ 19 ಹೊಸ ಕೇಸ್

ಕಳೆದ ಎರಡು ವಾರಗಳಿಗೆ ಹೋಲಿಸಿಕೊಂಡರೆ ನಿನ್ನೆ ಒಂದೇ ದಿನ ಕೇರಳದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿದೆ. 19 ಹೊಸ ಸೋಂಕು ವರದಿಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದು, ಇದು ಸಹಜವಾಗಿ ಕೇರಳ ಸರ್ಕಾರಕ್ಕೆ ಆತಂಕ ಹೆಚ್ಚಿಸಿದೆ.

ಪರಿಸ್ಥಿತಿ ಅನಿರೀಕ್ಷಿತವಾಗಿದೆ

ಪರಿಸ್ಥಿತಿ ಅನಿರೀಕ್ಷಿತವಾಗಿದೆ

ಕೊರೊನಾ ವೈರಸ್‌ ವಿಚಾರದಲ್ಲಿ ಯಾವುದನ್ನು ನಿರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಅನಿರೀಕ್ಷಿತವಾಗಿದೆ. ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಇದ್ದರೂ ಸರಕು ಸಾಗಣಿಕೆ ಉದ್ದೇಶದಿಂದ ಸಾಕಷ್ಟು ಜನರು ಹೊರಗೆ ಬಂದರು. ನಾವು ಜಾಗರೂಕವಾಗಿರಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ ರೆಸ್ಟೋರೆಂಟ್ ಓಪನ್: ಗೃಹ ಸಚಿವಾಲಯ ಕೆಂಡಾಮಂಡಲಕೇರಳದಲ್ಲಿ ರೆಸ್ಟೋರೆಂಟ್ ಓಪನ್: ಗೃಹ ಸಚಿವಾಲಯ ಕೆಂಡಾಮಂಡಲ

ಒಟ್ಟು ಸೋಂಕಿತರ ಸಂಖ್ಯೆ 426ಕ್ಕೆ ಏರಿಕೆ

ಒಟ್ಟು ಸೋಂಕಿತರ ಸಂಖ್ಯೆ 426ಕ್ಕೆ ಏರಿಕೆ

ಕಳೆದ ಹತ್ತು ದಿನದ ಅಂಕಿ ಅಂಶ ನೋಡಿದ್ರೆ ಕೇರಳದಲ್ಲಿ ದಿನಕ್ಕೆ ದಾಖಲಾಗಿರುವುದು ಸರಾಸರಿ 3 ಸೋಂಕಿತರು. ಆದರೆ, ಒಂದೇ ದಿನ 19 ಸೋಂಕು ವರದಿಯಾಗಿರುವುದು ನಿಟ್ಟುಸಿರು ಬಿಟ್ಟಿದ್ದ ಸರ್ಕಾರಕ್ಕೆ ಮತ್ತೆ ಆತಂಕ ಹೆಚ್ಚಿಸಿದೆ. ಸದ್ಯ ಕೇರಳದಲ್ಲಿ ಸೋಂಕಿತರ ಸಂಖ್ಯೆ 426ಕ್ಕೆ ಏರಿದೆ.

ಮತ್ತೊಂದು ಚಿಂತನೆಯಲ್ಲಿ ಕೇರಳ

ಮತ್ತೊಂದು ಚಿಂತನೆಯಲ್ಲಿ ಕೇರಳ

ಸಾಮಾನ್ಯವಾಗಿ ಕೊರೊನಾ ಸೋಂಕಿಗೆ ಒಳಪಟ್ಟವರು 14 ದಿನದೊಳಗೆ ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತೆ. ಕೆಲವು ಕೇಸ್‌ಗಳಲ್ಲಿ 28 ದಿನವು ಆಗಿದೆ. ಆದರೆ, ಕೇರಳದಲ್ಲಿ ಇತ್ತೀಚಿನ ಒಂದು ಕೇಸ್ ಸೋಂಕು ತಗುಲಿ 45 ದಿನ ಕಳೆದಿದ್ದರೂ ಸೋಂಕು ಹಾಗೆ ಉಳಿದಿದೆ. ಇದು ಪ್ರಸ್ತುತ ವೈದ್ಯರ ತಲೆಕೆಡಿಸುವಂತೆ ಮಾಡಿದೆ.

ಸತತ 19 ಬಾರಿ ಕೊರೊನಾ ಪರೀಕ್ಷೆ ಮಾಡಿದ್ರೂ ಫಲಿತಾಂಶ 'ಪಾಸಿಟಿವ್'ಸತತ 19 ಬಾರಿ ಕೊರೊನಾ ಪರೀಕ್ಷೆ ಮಾಡಿದ್ರೂ ಫಲಿತಾಂಶ 'ಪಾಸಿಟಿವ್'

English summary
19 people tested positive yesterday in kerala. In that 9 are from abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X