ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ತುಲಾಭಾರಕ್ಕೆ 112 ಕೆ.ಜಿ ತಾವರೆ ಪೂರೈಸಿದ್ದು ಮುಸ್ಲಿಂ ಕುಟುಂಬ

|
Google Oneindia Kannada News

ತಿರುವನಂತಪುರಂ, ಜೂನ್ 08: ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಎರಡನೇ ಬಾರಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಇಂದು ಕೇರಳದ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದ್ದರು.

ತಾವರೆಯಿಂದ ತುಲಾಭಾರ ಮಾಡುವುದರ ಹಿಂದಿರುವ ಉದ್ದೇಶವೇನು? ತಾವರೆಯಿಂದ ತುಲಾಭಾರ ಮಾಡುವುದರ ಹಿಂದಿರುವ ಉದ್ದೇಶವೇನು?

ನರೇಂದ್ರ ಮೋದಿ ಅವರು ಗುರುವಾಯೂರ್ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಆ ನಂತರ ಅವರನ್ನು ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಆ ಹೂವನ್ನು ಕೃಷ್ಣನ ಪೂಜೆಗೆ ಬಳಸಲಾಯಿತು.

ನರೇಂದ್ರ ಮೋದಿ ಅವರ ತುಲಾಭಾರಕ್ಕೆ ಹಾಗೂ ಮೋದಿ ಅವರ ವಿಶೇಷ ಪೂಜೆಗಳಿಗೆಂದು ಬರೋಬ್ಬರಿ 112 ಕೆ.ಜಿ ಕಮಲದ ಹೂವು ತರಿಸಲಾಗಿತ್ತು ಎಂದು ಗುರುವಾಯೂರ್ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರ ದೇಶದೆಲ್ಲೆಡೆ ಕಮಲ ಅರಳಿಸಿದ ಮೋದಿಗೆ ತಾವರೆಯ ತುಲಾಭಾರ

ಮೋದಿ ಅವರ ತುಲಾಭಾರ ಮಾಡಲು ಬಳಸಿದ್ದ ಕಮಲವನ್ನು ಮುಸ್ಲಿಂ ಸಮುದಾಯದ ಕುಟುಂಬವೊಂದು ಪೂರೈಕೆ ಮಾಡಿದ್ದು ವಿಶೇಷ. ಜೊತೆಗೆ ಹೆಚ್ಚಿನ ಹೂವನ್ನು ತಮಿಳುನಾಡಿನಿಂದಲೂ ತರಿಸಲಾಗಿತ್ತು.

ಮುಸ್ಲಿಂ ಕುಟುಂಬವೊಂದು ಪೂರೈಸಿದ ಕಮಲ

ಮುಸ್ಲಿಂ ಕುಟುಂಬವೊಂದು ಪೂರೈಸಿದ ಕಮಲ

ಗುರುವಾಯೂರ್ ಸಮೀಪದಲ್ಲಿ ಕಮಲದ ಕೃಷಿಯನ್ನು ಪ್ರತಿಷ್ಠಿತ ಮುಸ್ಲಿಂ ಕುಟುಂಬವೊಂದು ಮಾಡುತ್ತಿದ್ದು, ಅವರೂ ಸೇರಿದಂತೆ ಬಹುತೇಕ ಮುಸ್ಲಿಂ ಕುಟುಂಬಗಳೇ ಆ ಪ್ರದೇಶದಲ್ಲಿ ಕಮಲವನ್ನು ಬೆಳೆಯುತ್ತಾರೆ ಮತ್ತು ದೇವಸ್ಥಾನಗಳಿಗೆ ಪೂರೈಸುತ್ತಾರೆ.

ಸ್ಥಳೀಯ ದೇವಸ್ಥಾನಗಳಿಗೆ ಕಮಲ ಪೂರೈಸುವ ಮುಸ್ಲೀಮರು

ಸ್ಥಳೀಯ ದೇವಸ್ಥಾನಗಳಿಗೆ ಕಮಲ ಪೂರೈಸುವ ಮುಸ್ಲೀಮರು

ದಿನವೊಂದಕ್ಕೆ ಸುಮಾರು 2000 ಕೆ.ಜಿಗಳಷ್ಟು ಕಮಲದ ಹೂವನ್ನು ಗುರುವಾಯೂರ್ ಸೇರಿದಂತೆ ಹಲವು ಸ್ಥಳೀಯ ದೇವಾಲಯಗಳಿಗೆ ಪೂರೈಕೆ ಮಾಡಲಾಗುತ್ತದೆ. ವಿಶೇಷವೆಂದರೆ ಬಹುಪಾಲು ಕಮಲ ಕೃಷಿಕರು ಮುಸ್ಲಿಂ ಸಮುದಾಯದವರೇ ಆಗಿದ್ದಾರೆ.

ನಮ್ಮನ್ನು ಗೆಲ್ಲಿಸದವರೂ ನಮ್ಮವರೇ: ಕೇರಳದಲ್ಲಿ ಮೋದಿ ಮಾತು ನಮ್ಮನ್ನು ಗೆಲ್ಲಿಸದವರೂ ನಮ್ಮವರೇ: ಕೇರಳದಲ್ಲಿ ಮೋದಿ ಮಾತು

ಗೆಲ್ಲಿಸದವರೂ ನಮ್ಮವರೇ: ಮೋದಿ

ಗೆಲ್ಲಿಸದವರೂ ನಮ್ಮವರೇ: ಮೋದಿ

ಪೂಜೆಯ ಬಳಿಕ ಮೋದಿ ಅವರು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿಯನ್ನು ಗೆಲ್ಲಿಸದವರೂ ಸಹ ನಮ್ಮವರೇ ಎಂದು ಮೋದಿ ಅವರು ಕೇರಳದ ಜನರಿಗೆ ಭರವಸೆ ನೀಡಿದರು.

ಮಾಲ್ಡಿವ್ಸ್‌ಗೆ ತೆರಳಿದ ಮೋದಿ

ಮಾಲ್ಡಿವ್ಸ್‌ಗೆ ತೆರಳಿದ ಮೋದಿ

ಕೇರಳದ ಭೇಟಿಯ ನಂತರ ಮೋದಿ ಅವರು ದ್ವಿರಾಷ್ಟ್ರ ಪ್ರವಾಸಕ್ಕೆ ಮಾಲ್ಡಿವ್ಸ್‌ಗೆ ತೆರಳಿದರು. ಮಾಲ್ಡಿವ್ಸ್‌ನಲ್ಲಿ ಎರಡು ದಿನ ಕಳೆಯಲಿರುವ ಮೋದಿ ಅವರು ಆ ನಂತರ ಶ್ರೀಲಂಕಾಕ್ಕೆ ತೆರಳಿ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

English summary
Narendra Modi visited Krishna temple Guruvayur in Kerala and performed special pooja. Narendra Modi did Tulabara ritual with lotus flower in the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X