ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ; 2001ರ ಬಳಿಕ ಹೆಚ್ಚು ಮಹಿಳಾ ಅಭ್ಯರ್ಥಿಗಳು ಆಯ್ಕೆ

|
Google Oneindia Kannada News

ತಿರುವನಂತಪುರಂ, ಮೇ 04; ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಎಲ್‌ಡಿಎಫ್ 94 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ. ಈ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ.

2001ರ ಬಳಿಕ ಇದೇ ಮೊದಲ ಬಾರಿಗೆ ಕೇರಳ ವಿಧಾನಸಭೆಯಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ ಎರಡು ಅಂಕಿಗೆ ಬಂದಿದೆ. 140 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್ 6ರಂದು ನಡೆದ ಚುನಾವಣೆಯಲ್ಲಿ 11 ಶಾಸಕಿಯರು ಆಯ್ಕೆಯಾಗಿದ್ದಾರೆ.

ಚುನಾವಣೆ ಗೆಲುವಿನಲ್ಲೂ ಇತಿಹಾಸ ನಿರ್ಮಿಸಿದ ಕೆಕೆ ಶೈಲಜಾಚುನಾವಣೆ ಗೆಲುವಿನಲ್ಲೂ ಇತಿಹಾಸ ನಿರ್ಮಿಸಿದ ಕೆಕೆ ಶೈಲಜಾ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2021ರ ಚುನಾವಣೆಯಲ್ಲಿ 103 ಮಹಿಳಾ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದರು. ಇವರಲ್ಲಿ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಕೇರಳ: ಎಕ್ಸಿಟ್ ಪೋಲ್ Vs ಅಂತಿಮ ಫಲಿತಾಂಶ ಸಮಗ್ರ ವಿವರಕೇರಳ: ಎಕ್ಸಿಟ್ ಪೋಲ್ Vs ಅಂತಿಮ ಫಲಿತಾಂಶ ಸಮಗ್ರ ವಿವರ

 11 Women Candidates Enter Kerala Assembly After 2001

1996ರಲ್ಲಿ ವಿಧಾನಸಭೆಯಲ್ಲಿ 13 ಮಹಿಳಾ ಶಾಸಕಿಯರು ಇದ್ದರು. 2016ರಲ್ಲಿ ಈ ಸಂಖ್ಯೆ 8ಕ್ಕೆ ಇಳಿಕೆಯಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಎಲ್‌ಡಿಎಫ್‌ನ 10 ಮಹಿಳೆಯರು, ಯುಡಿಎಫ್‌ನಿಂದ ಒಬ್ಬರು ಆಯ್ಕೆಯಾಗಿದ್ದಾರೆ.

 ಕೇರಳ; ಇದೇ ಮೊದಲ ಬಾರಿ ಆಡಳಿತದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಮಾವ-ಅಳಿಯ ಕೇರಳ; ಇದೇ ಮೊದಲ ಬಾರಿ ಆಡಳಿತದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಮಾವ-ಅಳಿಯ

ರಾಜ್ಯದ ಆರೋಗ್ಯ ಸಚಿವೆಯಾದ ಕೆಕೆ ಶೈಲಜಾ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಿಂದ ದಾಖಲೆಯ 60,963 ಮತಗಳ ಅಂತರದಿಂದ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.

ವೀಣಾ ಜಾರ್ಜ್‌, ಸಿ. ಕೆ. ಆಶಾ ಮತ್ತು ಯು. ಪ್ರತಿಭಾ ಅವರು ಸಹ 2ನೇ ಬಾರಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನ ಪಿ. ಕೆ. ಜಯಲಕ್ಷ್ಮೀ, ಉಸ್ಮಾನ್, ಬಿಂದು ಕೃಷ್ಣಾ, ಬಿಜೆಪಿಯ ಶೋಭಾ ಸುರೇಂದ್ರನ್ ಸೋಲು ಕಂಡಿದ್ದಾರೆ.

Recommended Video

RCB ಅಭಿಮಾನಿಗಳಿಗೆ ಎರೆಡು ವಿಚಾರಕ್ಕೆ ಬೇಜಾರು | Oneindia Kannada

ಎನ್‌ಡಿಎ ಮೈತ್ರಿಕೂಟ ಕೇರಳ ವಿಧಾನಸಭೆಗೆ ದಾಖಲೆಯ ಅಂದರೆ 20 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೂ ಸ್ಥಾನದಲ್ಲಿ ಗೆದ್ದಿಲ್ಲ.

English summary
130 women candidates contested for Kerala Assembly Election 2021. 10 from LDF and 1 form UDF elected in April 6th election. After 2001 there will be double digit representation of women in the Kerala assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X