ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

105ನೇ ವಯಸ್ಸಿನಲ್ಲಿ 4ನೇ ತರಗತಿ ಪರೀಕ್ಷೆಗೆ ಅಜ್ಜಿ ಹಾಜರ್!

|
Google Oneindia Kannada News

ತಿರುವನಂತಪುರಂ, ನವೆಂಬರ್.20: ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆ ಈಡೇರಲಿಲ್ಲ. ಕುಟುಂಬದ ಜವಾಬ್ದಾರಿ ಹೊತ್ತು, ಶಿಕ್ಷಣವನ್ನೇ ಮೊಟಕುಗೊಳಿಸಿದ ಹಿರಿಯ ಜೀವವೊಂದು ಇದೀಗ ಹೊಸ ದಾಖಲೆ ಬರೆದಿದೆ.

ಕೇರಳದಲ್ಲಿ 105ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಅಜ್ಜಿಯೊಬ್ಬರು ಹೊಸ ದಾಖಲೆ ಬರೆದಿದ್ದಾರೆ. ಕೊಲ್ಲಂನಲ್ಲಿ ನಾಲ್ಕನೇ ತರಗತಿ ಪರೀಕ್ಷೆಗೆ ಭಗೀರಥಿ ಅಮ್ಮ ಹಾಜರಾಗಿದ್ದು, ಇದೀಗ ದೇಶಾದ್ಯಂತ ಸುದ್ದಿಯಾಗಿದೆ.

ಭಗೀರಥಿ ಅಮ್ಮನವರಿಗೆ ಆರು ಮಕ್ಕಳು ಹಾಗೂ 16 ಮೊಮ್ಮಕ್ಕಳನ್ನು ಹೊಂದಿದ್ದು, ತಮ್ಮ 105ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಎಂಥವರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ.

ಚಿತ್ರಕೃಪೆ: ANI

ನಾಲ್ಕನೇ ತರಗತಿಯ ಎಲ್ಲ ವಿಷಯಗಳ ಪರೀಕ್ಷೆಗೂ ಭಗೀರಥಿ ಅಮ್ಮ ಹಾಜರಾಗಿ ಬರೆದಿದ್ದಾರೆ. ಇದು ಈಗಿನ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿದೆ ಎಂದು ರಾಜ್ಯ ಸಾಕ್ಷರತಾ ನಿಯೋಗದ ಜಿಲ್ಲಾ ಉಸ್ತುವಾರಿ ಸಿ.ಕೆ.ಪ್ರದೀಪ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಕೇರಳ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಸಾಕ್ಷರತಾ ನಿಯೋಗ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ವೃದ್ಧಿಗೆ ಶ್ರಮಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ತೊರೆದ ಜನರನ್ನು ಗುರುತಿಸಿ, ಅಂಥವರ ಶಿಕ್ಷಣದ ಕನಸನ್ನು ನನಸು ಮಾಡುವತ್ತ ಲಕ್ಷ್ಯ ವಹಿಸಿದೆ.

English summary
105 Years Old Women Bhagirathi Amma Appeared For 4th Standard Examination Conducted Under Kerala State Litercy Mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X