ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

105 ನೇ ವಯಸ್ಸಿನಲ್ಲಿ ಶಾಲಾ ಪರೀಕ್ಷೆ ಪಾಸಾದ ಅಜ್ಜಿ..!

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 6: ಕೇರಳದ 105 ವಯಸ್ಸಿನ ಅಜ್ಜಿಯೊಬ್ಬರು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಕೇರಳದ ನಾಲ್ಕನೇ ತರಗತಿಯ ಪರೀಕ್ಷೆಯಲ್ಲಿ ಪಾಸಾಗಿ ಅಚ್ಚರಿ ಮೂಡಿಸಿದ್ದಾರೆ.

ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ಕಳೆದ ವರ್ಷ ಅನಕ್ಷರಸ್ಥ ವಯೋವೃದ್ಧರಿಗೆ ಪರೀಕ್ಷೆ ನಡೆಸಿತ್ತು. ಕೊಲ್ಲಂನ ಭಾಗೀರಥಿ ಎನ್ನುವರು ತಮ್ಮ 105 ನೇ ವಯಸ್ಸಿನಲ್ಲೂ ನಾಲ್ಕನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಭಾಗೀರಥಿ ಅಜ್ಜಿ ದೇಶದ ಅತ್ಯಂತ ಹಿರಿಯ ವಯಸ್ಸಿನ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇರಳದ ಈ ಊರಿನ ಆ ಫ್ಲಾಟಿನ ನಲ್ಲಿಯಲ್ಲಿ ನೊರೆ ನೊರೆ ಮದ್ಯ! ಕೇರಳದ ಈ ಊರಿನ ಆ ಫ್ಲಾಟಿನ ನಲ್ಲಿಯಲ್ಲಿ ನೊರೆ ನೊರೆ ಮದ್ಯ!

ಭಾಗೀರಥಿ ಅಜ್ಜಿಗೆ ಚಿಕ್ಕ ವಯಸ್ಸಿನಲ್ಲಿ ತಮ್ಮ ತಾಯಿ ಸಾವಿನಿಂದಾಗಿ ಶಿಕ್ಷಣ ಪಡೆದುಕೊಳ್ಳುವ ಕನಸು ನನಸಾಗಿರಲಿಲ್ಲ. ಮೂರನೇ ತರಗತಿಗೇ ಅವರು ಶಿಕ್ಷಣ ಮೊಟಕುಗೊಳಿಸಿದ್ದರಂತೆ. ಜೊತೆಗೆ, 30ನೇ ವಯಸ್ಸಿನಲ್ಲೇ ವಿಧವೆಯಾಗಿದ್ದರು. ಇವರ ಮೇಲೆ ಆರು ಮಕ್ಕಳ ಜವಾಬ್ದಾರಿಯೂ ಬಿದ್ದಿತ್ತು.

105 Year Old Women Passed Kerala 4th Standard School Exam

ಪರಿಸರ, ಗಣಿತ ಹಾಗೂ ಮಲಯಾಳ ಪ್ರಶ್ನೆಪತ್ರಿಕೆ ಪೂರ್ಣಗೊ ಳಿಸಲು ಅವರು ಮೂರು ದಿನ ತೆಗೆದುಕೊಂಡರು. ಗಣಿತದಲ್ಲಿ ನೂರಕ್ಕೆ ನೂರು ಅಂಕ ಹಾಗೂ ಒಟ್ಟಾರೆ 275 ಅಂಕ ಕ್ಕೆ 205 ಅಂಕ ಪಡೆದುಕೊಂಡಿದ್ದು, ಈಗ 10ನೇ ತರಗತಿಗೆ ಪರೀಕ್ಷೆ ಬರೆಯುವ ಉತ್ಸುಕತೆ ತೋರಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

English summary
105 Year Old Women Passed Kerala 4th Standard School Exam. Kerala Kollam 105 year Old women Bhagirathi passed the exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X