ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಯಸ್ಸಿಗಿಲ್ಲ ತಡೆಗೋಡೆ': 100 ರಲ್ಲಿ 84 ಅಂಕ ಪಡೆದ 104 ವರ್ಷದ ಕುಟ್ಟಿಯಮ್ಮ

|
Google Oneindia Kannada News

ಕೊಟ್ಟಾಯಂ, ನವೆಂಬರ್‌ 15: ನಮ್ಮಲ್ಲಿ ಉತ್ಸಾಹ ಇದ್ದರೆ, ಏನನು ಬೇಕಾದರೂ ಸಾಧನೆ ಮಾಡಬಹುದು ಎಂಬುವುದನ್ನು ಕೇರಳದ 104 ವರ್ಷದ ಅಜ್ಜಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ವಯಸ್ಸು ಬರೀ ಒಂದು ಸಂಖ್ಯೆ ಎಂಬುವುದನ್ನು ಸಾಬೀತು ಮಾಡಿರುವ ಈ ಕೇರಳದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ ನೂರರಲ್ಲಿ 89 ಅಂಕವನ್ನು ಪಡೆದಿದ್ದಾರೆ.

ತನ್ನ 104 ವರ್ಷದಲ್ಲಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕದೊಂದಿಗೆ ಕುಟ್ಟಿಯಮ್ಮ ತೇರ್ಗಡೆ ಹೊಂದಿರುವ ಬಗ್ಗೆ ಮಾಹಿತಿಯನ್ನು ಕೇರಳ ಶಿಕ್ಷಣ ಸಚಿವ ವಸುದೇವನ್‌ ಶಿವಕುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ" ಎಂದು ಕೇರಳ ಶಿಕ್ಷಣ ಸಚಿವರು ಉಲ್ಲೇಖ ಮಾಡಿದ್ದಾರೆ.

ಆಗ ಸೆಕ್ಯುರಿಟಿ ಗಾರ್ಡ್ ಈಗ ಐಐಎಂ ಪ್ರೊಫೆಸರ್: ಕಾಸರಗೋಡಿನ ರಂಜಿತ್ ಸ್ಫೂರ್ತಿದಾಯಕ ಕಥೆಆಗ ಸೆಕ್ಯುರಿಟಿ ಗಾರ್ಡ್ ಈಗ ಐಐಎಂ ಪ್ರೊಫೆಸರ್: ಕಾಸರಗೋಡಿನ ರಂಜಿತ್ ಸ್ಫೂರ್ತಿದಾಯಕ ಕಥೆ

"ಕೊಟ್ಟಾಯಂನ 104 ವರ್ಷದ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ 100 ರಲ್ಲಿ 89 ಅಂಕವನ್ನು ಪಡೆದಿದ್ದಾರೆ. ಜ್ಞಾನದ ಲೋಕಕ್ಕೆ ಪ್ರವೇಶ ಪಡೆಯಲು ವಯಸ್ಸು ಯಾವುದೇ ಅಡೆತಡೆಯಾಗುವುದಿಲ್ಲ. ಅತ್ಯಂತ ಗೌರವ ಮತ್ತು ಪ್ರೀತಿಯಿಂದ, ಕುಟ್ಟಿಯಮ್ಮ ಮತ್ತು ಇತರ ಎಲ್ಲಾ ಹೊಸ ಕಲಿಕೆದಾರರಿಗೆ ನಾನು ಶುಭ ಹಾರೈಸುತ್ತೇನೆ," ಎಂದು ಕೇರಳ ಶಿಕ್ಷಣ ಸಚಿವ ವಸುದೇವನ್‌ ಶಿವಕುಟ್ಟಿ ಟ್ವೀಟ್‌ ಮಾಡಿದ್ದಾರೆ.

104-Year-Old Woman Has Scored 89/100 in Literacy Exam In Kerala

ಮಾಧ್ಯಮಗಳ ಪ್ರಕಾರ ಕೊಟ್ಟಾಯಂನ ಅಯರ್‌ಕುನ್ನಮ್‌ ಪಂಚಾಯತ್‌ನಲ್ಲಿ ಸಾಕ್ಷರತಾ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿದ್ದು, ಸಾಕ್ಷರತಾ ಪರೀಕ್ಷೆಯಲ್ಲಿ 104 ವರ್ಷದ ಕುಟ್ಟಿಯಮ್ಮ ಕೂಡಾ ಭಾಗಿಯಾಗಿದ್ದರು. ಕುಟ್ಟಿಯಮ್ಮ ತನ್ನ ಬಾಲ್ಯದಲ್ಲಿ ಯಾವುದೇ ಶಿಕ್ಷಣವನ್ನು ಪಡೆದಿರಲಿಲ್ಲ. ಜೀವನದಲ್ಲಿ ಒಂದು ಬಾರಿಯೂ ಕುಟ್ಟಿಯಮ್ಮ ಶಾಲೆಗೆ ಹೋದವರೇ ಅಲ್ಲ ಎಂದು ವರದಿಯು ತಿಳಿಸಿದೆ.

ಆದರೆ ಸಾಕ್ಷರತಾ ಪ್ರೇರಕ ಕಾರ್ಯಕ್ರಮದ ಮೂಲಕ ಶಿಕ್ಷಣದ ಆಸಕ್ತಿ ಪಡೆದ 104 ವರ್ಷದ ಕುಟ್ಟಿಯಮ್ಮ ಎಲ್ಲಾ ತರಗತಿಗೆ ಹಾಜರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ತನ್ನ ಮನೆಯಲ್ಲೇ ಸಾಕ್ಷರತಾ ಪ್ರೇರಕ ಕಾರ್ಯಕ್ರಮದಲ್ಲಿ ಭಾಗಿಯಾದ ಕುಟ್ಟಿಯಮ್ಮ ಓದುವುದು ಹಾಗೂ ಬರೆಯುವುದನ್ನು ಕಲಿತಿದ್ದಾರೆ. ಈ ತರಗತಿಗಳಿಗೆ ನಿರಂತರವಾಗಿ ಹಾಜರಾದ ಬಳಿಕ ಕುಟ್ಟಿಯಮ್ಮ ನಾಲ್ಕನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅರ್ಹರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತ

104 ವರ್ಷದ ಕುಟ್ಟಿಯಮ್ಮರಿಗೆ ತನ್ನ ವಯೋ ಸಹಜವಾಗಿ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಆದ್ದರಿಂದ ಕುಟ್ಟಿಯಮ್ಮ ಪರಿವೀಕ್ಷಕರ ಬಳಿ ಜೋರಾಗಿ ಮಾತನಾಡುವಂತೆಯೂ ಹೇಳುತ್ತಿದ್ದರು ಎಂದು ವರದಿಯು ತಿಳಿಸಿದೆ. ಇನ್ನು ಈ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯನ್ನು ಬರೆದು ಕುಟ್ಟಿಯಮ್ಮ ನೂರರಲ್ಲಿ 89 ಅಂಕವನ್ನು ಪಡೆದಿದ್ದಾರೆ ಎಂಬ ಸುದ್ದಿ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕುಟ್ಟಿಯಮ್ಮ ವೈರಲ್‌ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಕುಟ್ಟಿಯಮ್ಮರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಕುಟ್ಟಿಯಮ್ಮರಲ್ಲಿ ಇರುವ ಏಕಾಗ್ರತೆಗೆ ನಮಿಸಿದ್ದಾರೆ. "ಇದು ಬೇರೆ ಹಲವಾರು ಮಂದಿಗೆ ಸ್ಪೂರ್ತಿ ನೀಡಲಿದೆ," ಎಂದು ಟ್ವಿಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವಯಸ್ಸು ಏನು ದೊಡ್ಡ ಅಡೆತಡೆಯೇ ಅಲ್ಲ ಎಂಬುವುದನ್ನು ಕುಟ್ಟಿಯಮ್ಮ ಸಾಬೀತು ಮಾಡಿದ್ದಾರೆ," ಎಂದು ಸಮೀನ್‌ ಮಲಕ್ಕಾರ್‌ ಎಂಬವರು ಹೇಳಿದ್ದಾರೆ. "ನಾನು ಕೂಡಾ ಇನ್ನು ಹೆಚ್ಚಿನ ಶಿಕ್ಷಣವನ್ನು ಪಡೆಯಲು ಸ್ಪೂರ್ತಿ ನೀಡಿದ ನಿಮಗೆ ಧನ್ಯವಾದ," ಎಂದು ಮೊಹಮ್ಮದ್‌ ಹಾರಿಸ್‌ ಎಂಬವರು ತಿಳಿಸಿದ್ದಾರೆ. "ಕಲಿಯಲು ಯಾವುದೇ ವಯಸ್ಸು ಅಡೆತಡೆ ಆಗಲಾರದು," ಎಂದು ಮಣಿಕಾರ್ಣಿಕ ಎಂಬವರು ಅಭಿಪ್ರಾಯಿಸಿದ್ದಾರೆ. "ಕುಟ್ಟಿಯಮ್ಮ ಬಹಳ ಅದ್ಬುತವಾದ ವ್ಯಕ್ತಿ. ದಯವಿಟ್ಟು ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಕುಟ್ಟಿಯಮ್ಮರ ಚಿತ್ರವನ್ನು ಹಾಕಬೇಕು. ಕುಟ್ಟಿಯಮ್ಮ ಸ್ಪೂರ್ತಿದಾಯಕ ವ್ಯಕ್ತಿ," ಎಂದು ವಿಜಯ್‌ ಸರ್ಡಾನಾ ಬರೆದುಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
104-Year-Old Woman Has Scored 89/100 in Literacy Exam In Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X