ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 27 : ವಿದೇಶದಲ್ಲಿ ಸಿಲುಕಿರುವ ರಾಜ್ಯದ ಪ್ರಜೆಗಳನ್ನು ವಾಪಸ್ ಕರೆತರಲು ಕೇರಳ ಸರ್ಕಾರ ಆನ್‌ಲೈನ್ ಮೂಲಕ ನೋಂದಣಿ ಆರಂಭಿಸಿದೆ. ಕೇವಲ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಹೆಸರು ನೋಂದಾಯಿಸಿದ್ದಾರೆ.

Recommended Video

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

ಕೇರಳ ಸರ್ಕಾರ ಸೋಮವಾರ ವಿದೇಶದಲ್ಲಿ ಸಿಲುಕಿದವರನ್ನು ರಾಜ್ಯಕ್ಕೆ ಕರೆತರಲು ಆನ್‌ಲೈನ್ ಮೂಲಕ ನೋಂದಣಿ ಆರಂಭಿಸಿತು. 1 ಲಕ್ಷಕ್ಕೂ ಅಧಿಕ ಜನರು ಕೇರಳಕ್ಕೆ ವಾಪಸ್ ಬರಲು ಹೆಸರು ನೋಂದಣಿ ಮಾಡಿದರು.

ದುಬೈನಲ್ಲಿರುವ 40 ಸಾವಿರ ಜನರು ಕೇರಳಕ್ಕೆ ವಾಪಸ್ ಆಗಲು ಬಯಸಿದ್ದಾರೆ. ಯುಎಇನಲ್ಲಿ 15 ಲಕ್ಷಕ್ಕೂ ಅಧಿಕ ಮಲೆಯಾಳಿಗಳು ಇದ್ದಾರೆ ಎಂದು ನಾನ್‌ ರೆಸಿಡೆಂಟ್‌ ಕೇರಳೈಟ್ಸ್ ಅಫೈರ್ಸ್‌ (ನೋರ್ಕಾ) ಹೇಳಿದೆ. ಆನ್‌ಲೈನ್ ನೋಂದಣಿ ಜವಾವ್ದಾರಿಯನ್ನು ಇದೇ ನೋಡಿಕೊಳ್ಳುತ್ತಿದೆ.

1 Lakh NRIs From Kerala Register To Return Home

ವಿದೇಶದಿಂದ ಕೇರಳಕ್ಕೆ ವಾಪಸ್ ಆಗಲು ಬಯಸುವವರು ನೋರ್ಕಾದಲ್ಲಿ ಹೆಸರನ್ನು ನೋಂದಾಯಿಸಬೇಕು ಎಂದು ಕೇರಳ ಸರ್ಕಾರ ಆದೇಶ ನೀಡಿತ್ತು. ಇದರ ಅನ್ವಯ ಸೋಮವಾರ ನೋಂದಣಿ ಆರಂಭಿಸಲಾಗಿದೆ.

ವೆಬ್‌ಸೈಟ್‌ಗೆ ಭೇಟಿ ನೀಡುವ ಜನರು ಅಲ್ಲಿರುವ ಅರ್ಜಿಯನ್ನು ಭರ್ತಿ ಮಾಡಬೇಕು. ಹೆಸರು, ವಯಸ್ಸು, ಲಿಂಗ, ಪಾರ್ಸ್‌ ಪೋರ್ಟ್ ನಂಬರ್, ಈಗಿರುವ ದೇಶದ ಹೆಸರು, ಕೇರಳದಲ್ಲಿನ ಖಾಯಂ ವಿಳಾಸ, ಈ ಮೇಲ್, ಮೊಬೈಲ್ ನಂಬರ್ ಭರ್ತಿ ಮಾಡಬೇಕಿದೆ.

ಜನರನ್ನು ವಾಪಸ್ ಕರೆತರುವಾಗ ತುರ್ತು ಸಹಾಯ ಅಗತ್ಯ ಇರುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ. ಇದನ್ನು ಕೇಂದ್ರ ಸರ್ಕಾರಕ್ಕೂ ತಿಳಿಸಲಾಗಿದೆ. ಗರ್ಭಿಣಿಯರು, ವಿದ್ಯಾರ್ಥಿಗಳು, ವೃದ್ಧರು, ಅನಾರೋಗ್ಯ ಪೀಡಿತರನ್ನು ಮೊದಲು ಕರೆತರಲಾಗುತ್ತದೆ.

ಮೇ 3ರ ಬಳಿಕ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಖಚಿತವಾದ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.

ವಿದೇಶದಿಂದ ಬಂದವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಯಾರೂ ಬರುವಂತಿಲ್ಲ ಎಂದು ಕೇರಳ ಆದೇಶ ಹೊರಡಿಸಿದೆ. ವಿದೇಶದಿಂದ ಬಂದವರನ್ನು ಮೊದಲು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ.

English summary
Kerala government opened online registrations to bring back Keralites stuck abroad. Over 1 lakh people have already registered on the site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X