ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸ ಪುಟ ಸೇರಿದ ಜಗತ್ತಿನ ಅತಿ ದೊಡ್ಡ ಗುಲಾಬಿ ವಜ್ರದ ಗಣಿ

|
Google Oneindia Kannada News

ಸಿಡ್ನಿ, ನವೆಂಬರ್ 3: ಅತಿ ದುಬಾರಿ ಬೆಲೆಯ ಅತ್ಯಮೂಲ್ಯ ವಜ್ರಗಳನ್ನು ನೀಡಿದ್ದ ಜಗತ್ತಿನ ಅತಿ ದೊಡ್ಡ ಗುಲಾಬಿ ವಜ್ರದ (ಪಿಂಕ್ ಡೈಮಂಡ್) ಗಣಿಯನ್ನು ಮುಚ್ಚುತ್ತಿರುವುದಾಗಿ ಜಾಗತಿಕ ಗಣಿ ದಿಗ್ಗಜ ಸಂಸ್ಥೆ ರಿಯೊ ಟಿಂಟೋ ತಿಳಿಸಿದೆ.

ವಜ್ರದ ನಿಕ್ಷೇಪಗಳು ಖಾಲಿಯಾದ ಹಿನ್ನೆಲೆಯಲ್ಲಿ ಗಣಿಯನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ ಎಂದು ಕಂಪೆನಿ ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದ ಒಳಭಾಗದಲ್ಲಿರುವ ಆರ್ಗೈಲ್ ಗಣಿಯಿಂದ ಜಗತ್ತಿನ ಶೇ 90ರಷ್ಟು ಗುಲಾಬಿ ವಜ್ರಗಳನ್ನು ಹೊರತೆಗೆಯಲಾಗಿತ್ತು.

ಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್‍ಲೈನ್‍ನಲ್ಲಿ ಹರಾಜು ಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್‍ಲೈನ್‍ನಲ್ಲಿ ಹರಾಜು

1979ರಲ್ಲಿ ಮೊದಲ ಬಾರಿಗೆ ಇಲ್ಲಿ ವಜ್ರದ ನಿಕ್ಷೇಪ ಪತ್ತೆಯಾಗಿತ್ತು. ಆಂಗ್ಲೋ ಆಸ್ಟ್ರೇಲಿಯನ್ ಸಂಸ್ಥೆ ರಿಯೋ ಟಿಂಟೋ ನಾಲ್ಕು ವರ್ಷಗಳ ಬಳಿಕ ಗಣಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಂಸ್ಥೆಯು ಸಣ್ಣ ಪ್ರಮಾಣದ್ದು ಸೇರಿದಂತೆ ಸುಮಾರು 37 ವರ್ಷಗಳಲ್ಲಿ 865 ಮಿಲಿಯನ್ ಕ್ಯಾರೆಟ್‌ಗಳಷ್ಟು ಅತ್ಯಮೂಲ್ಯ ಗುಲಾಬಿ ಬಣ್ಣದ ಕಚ್ಚಾ ವಜ್ರಗಳನ್ನು ಉತ್ಪಾದಿಸಿದೆ.

 Worlds Biggest Pink Diamond Mine Rio Tintos Argyle Stops Production After 37 Years

ರಿಯೋ ಟಿಂಟೋ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಗೈಲ್ ನೌಕರರು ಮತ್ತು ಸ್ಥಳೀಯ ಭೂ ಮಾಲೀಕರು ಹಾಜರಿದ್ದರು. ಗಣಿಗಾರಿಕೆ ನಡೆಸಿದ್ದ ಪ್ರದೇಶವನ್ನು ಮೂಲ ವಾರಸುದಾರರಿಗೆ ಮರಳಿಸಲಾಗುತ್ತದೆ. ಅಲ್ಲಿ ಗಣಿ ಚಟುವಟಿಕೆಗಳಿಗೆ ಬಳಸಿದ್ದ ಸಾಧನ, ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಐದು ವರ್ಷ ಬೇಕಾಗಬಹುದು ಎಂದು ಕಂಪೆನಿ ತಿಳಿಸಿದೆ.

ವಿಶ್ವದಲ್ಲೇ ಅತ್ಯಂತ ದುಬಾರಿ ಮಾಸ್ಕ್‌: ಬೆಲೆ 11 ಕೋಟಿ ರೂಪಾಯಿವಿಶ್ವದಲ್ಲೇ ಅತ್ಯಂತ ದುಬಾರಿ ಮಾಸ್ಕ್‌: ಬೆಲೆ 11 ಕೋಟಿ ರೂಪಾಯಿ

ಕಳೆದ ಎರಡು ದಶಕಗಳಲ್ಲಿ ಗುಲಾಬಿ ವಜ್ರದ ಬೆಲೆಯು ಶೇ 500ಪಟ್ಟು ಹೆಚ್ಚಾಗಿತ್ತು. ಈಗ ಆರ್ಗೈಲ್‌ನ ಗಣಿ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಈ ವಜ್ರಗಳ ಬೆಲೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ. ಪ್ರಸ್ತುತ ಒಂದು ಕ್ಯಾರಟ್ ಪಿಂಕ್ ಡೈಮಂಡ್ ಬೆಲೆ 3 ಮಿಲಿಯನ್ ಡಾಲರ್‌ವರೆಗೂ ಇದೆ.

English summary
World's biggest Pink Diamond mine Rio Tinto firm stops production in Argyle mine after 37 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X