• search
  • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೆಲ್ಟಾ ಪ್ರಕರಣ ಹೆಚ್ಚಳ:ಸಿಡ್ನಿಯಲ್ಲಿ 1 ತಿಂಗಳ ಕಾಲ ಲಾಕ್‌ಡೌನ್ ವಿಸ್ತರಣೆ

|
Google Oneindia Kannada News

ಸಿಡ್ನಿ, ಜುಲೈ 28: ಸಿಡ್ನಿಯಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 1 ತಿಂಗಳ ಕಾಲ್ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

12 ಪ್ರಕರಣಗಳು ಪತ್ತೆಯಾದ ಬಳಿಕ ಜೂನ್ 26ರಿಂದ ಲಾಕ್‌ಡೌನ್ ವಿಧಿಸಲಾಗಿತ್ತು, ಅದು ಇದೀಗ ಆಗಸ್ಟ್ 28ರವರೆಗೂ ಮುಂದುವರೆಯಲಿದೆ. ಇದೀಗ ಹೊಸದಾಗಿ 177 ಪ್ರಕರಣಗಳು ಪತ್ತೆಯಾಗಿವೆ.

ಸಿಡ್ನಿಯ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ, ವಿಕ್ಟೋರಿಯಾದ ಪ್ರೀಮಿಯರ್ ಡ್ಯಾನ್ ಆ್ಯಂಡ್ರೀವ್ಸ್ , ನಗರದ ಒಳಗೆ ಹೋಗುವ ಮತ್ತು ಬರುವ ಪ್ರಯಾಣವನ್ನು ನಿಷೇಧಿಸಲಾಗಿದೆ. ನ್ಯೂಜಿಲೆಂಡ್ ಪ್ರಧಾನಿ ಜೆಸಿಕಾ ಅಂಡ್ರೆನ್ , ಕನಿಷ್ಟ ಎಂಟು ವಾರಗಳ ವರೆಗೆ ಎರಡೂ ದೇಶಗಳ ನಡುವಿನ ಪ್ರಯಾಣವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕೊರೊನಾ ಹೆಚ್ಚಳ: ಪ್ರಜೆಗಳ ಬಳಿ ಕ್ಷಮೆ ಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿಕೊರೊನಾ ಹೆಚ್ಚಳ: ಪ್ರಜೆಗಳ ಬಳಿ ಕ್ಷಮೆ ಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

ಆಸ್ಟ್ರೇಲಿಯಾದವರಿಗೆ ಇನ್ನು ಮುಂದೆ ನ್ಯೂಜಿಲ್ಯಾಂಡ್‌ಗೆ ಕ್ವಾರಂಟೈನ್ ಮುಕ್ತ ಪ್ರವೇಶ ಇರುವುದಿಲ್ಲ, ಆದರೆ ನ್ಯೂಜಿಲ್ಯಾಂಡ್‍ನವರಿಗೆ ತಮ್ಮ ದೇಶಕ್ಕೆ ಮರಳಲು ಆಸ್ಟ್ರೇಲಿಯಾದಿಂದ ವಿಮಾನದ ಏರ್ಪಾಡು ಮಾಡಲಾಗುವುದು.

ಒಂದು ವರ್ಷಕ್ಕೂ ಹೆಚ್ಚು ಕಾಲದ ಗಡಿ ನಿರ್ಭಂದದ ಬಳಿಕ, ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಪ್ರಯಾಣ ಮರು ಆರಂಭ ಮಾಡಲಾಗಿತ್ತು.

 ಡೆಲ್ಟಾ ಸೋಂಕು ಹೆಚ್ಚಳ

ಡೆಲ್ಟಾ ಸೋಂಕು ಹೆಚ್ಚಳ

ಆಸ್ಟ್ರೇಲಿಯಾದಲ್ಲಿ ಕೋವಿಡ್​ ಡೆಲ್ಟಾ ಸೋಂಕು ಹೆಚ್ಚಾಗುತ್ತಿದ್ದು, ಆತಂಕದ ವಾತವಾರಣ ನಿರ್ಮಾಣವಾಗಿದೆ. ಕೇವಲ ಶೇ. 12 ಆಸ್ಟ್ರೇಲಿಯನ್ನರಿಗೆ ಮಾತ್ರ ಸಂಪೂರ್ಣ ಲಸಿಕೆ ನೀಡಲಾಗಿದೆ ಫೈಜರ್ ಲಸಿಕೆ ಸರಬರಾಜಿನ ಸಮಸ್ಯೆಗಳು ಮತ್ತು ಆಸ್ಟ್ರಾಜೆನೆಕಾ ಲಸಿಕೆಯ ಸುರಕ್ಷತೆ ಬಗ್ಗೆ ಸಂದೇಹಗಳೇ ಇದಕ್ಕೆ ಕಾರಣ.

 ಸಿಡ್ನಿಯಲ್ಲಿ ತುರ್ತು ಪರಿಸ್ಥಿತಿ

ಸಿಡ್ನಿಯಲ್ಲಿ ತುರ್ತು ಪರಿಸ್ಥಿತಿ

ಸಿಡ್ನಿಯಲ್ಲಿ ವೇಗದಿಂದ ಹರಡುತ್ತಿರುವ ಕೊರೊನಾ ವೈರಸ್ ಒಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಆಗಿ ಬದಲಾಗಿದೆ ಎಂದು ರಾಜ್ಯ ನಾಯಕರು ಹೇಳಿದ್ದಾರೆ. ಆಸ್ಟ್ರೇಲಿಯಾದ ಈ ಅತ್ಯಂತ ದೊಡ್ಡ ನಗರದಲ್ಲಿ ಹೊಸ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ವರದಿ ಆಗಿದೆ.

 ರೂಪಾಂತರಿ ತಡೆಯುವಲ್ಲಿ ವಿಫಲ

ರೂಪಾಂತರಿ ತಡೆಯುವಲ್ಲಿ ವಿಫಲ

ಒಂದು ತಿಂಗಳ ಲಾಕ್‌ಡೌನ್ ಡೆಲ್ಟಾ ವೈರಸ್ -ರೂಪಾಂತರವನ್ನು ತಡೆಯಲು ವಿಫಲವಾಗಿರುವುದನ್ನು ಒಪ್ಪಿಕೊಂಡಿರುವ ನ್ಯೂ ಸೌತ್‌ವೇಲ್ಸ್ ರಾಜ್ಯವು, ತುರ್ತಾಗಿ ಹೆಚ್ಚಿನ ಲಸಿಕೆಗಳು ಮತ್ತು ಸಂಪನ್ಮೂಲಗಳನ್ನು ಕಳಿಸುವಂತೆ ಕ್ಯಾನ್‍ಬೆರಾಗೆ ಮನವಿ ಮಾಡಿದೆ.

 ಸ್ಕಾಟ್ ಮಾರಿಸನ್

ಸ್ಕಾಟ್ ಮಾರಿಸನ್

ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಲಸಿಕೆ ವಿತರಣೆ ಪ್ರಮಾಣ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಕೊರೊನಾ ಲಸಿಕೆ ವಿತರಣೆ ಪ್ರಮಾಣ ಹೆಚ್ಚು ಮಾಡಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೇಳಿದ್ದಾರೆ.
ಲಸಿಕಾ ದರ ಶೇ.11ರಷ್ಟಿದೆ ಇದು ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ್ದಾಗಿದೆ. ಈ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ವಿತರಣೆ ಕುರಿತು ಹೊಂದಿದ್ದ ಗುರಿಯನ್ನು ತಲುಪಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಕೇಳಿದ್ದಾರೆ.

English summary
Sydney's month-long lockdown will be extended by at least another four weeks, with Australian authorities failing to flatten an outbreak of daily Covid-19 cases that on Wednesday surged to another record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X