ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರವರೆಗೆ ಆಸ್ಟ್ರೇಲಿಯಾಗೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅವಕಾಶವಿಲ್ಲ

|
Google Oneindia Kannada News

ಕ್ಯಾನ್‌ಬೆರಾ, ಅಕ್ಟೋಬರ್ 05: ಮುಂದಿನ ವರ್ಷದವರೆಗೆ ಆಸ್ಟ್ರೇಲಿಯಾಗೆ ಪ್ರವೇಶಿಸಲು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅವಕಾಶವಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ. ಇಲ್ಲಿನ ವಲಸಿಗರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ಮಂಗಳವಾರ ಹೇಳಿದ್ದಾರೆ.

ಇಂದು ಆಸ್ಟ್ರೇಲಿಯಾವು ಕೊರೊನಾ ಲಸಿಕೆಯ ಮಾನದಂಡವನ್ನು ತಲುಪುವ ಸಾಧ್ಯತೆ ಇದೆ. 16 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಶೇ.80ರಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳಆಸ್ಟ್ರೇಲಿಯಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ

ಕೊರೊನಾ ನಿರ್ಬಂಧಗಳಿಂದಾಗಿ ಆಸ್ಟ್ರೇಲಿಯಾಗೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಸೋಂಕು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಅದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಮೇಲೆ ಅವಲಂಬಿತವಾಗಿದೆ. ಆಸ್ಟ್ರೇಲಿಯಾ ಗಡಿಯನ್ನು ತೆರೆದರೆ ಮಾತ್ರ ವಿದ್ಯಾರ್ಥಿಗಳು ಬರಲು ಸಾಧ್ಯ.

Untill 2022 Australia Will Not Welcome International Tourists

ಮುಂದಿನ ವರ್ಷದಿಂದ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ಆಸ್ಟ್ರೇಲಿಯಾ ಈಗಾಗಲೇ ಫೈಜರ್​, ಆಸ್ಟ್ರಾಜೆನೆಕಾ, ಮಾಡೆರ್ನಾ ಮತ್ತು ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಲಸಿಕೆಗಳನ್ನು ಮಾನ್ಯ ಮಾಡಿತ್ತು.

ಇದೀಗ ಕೊವಿಶೀಲ್ಡ್​, ಕೊರೊನಾವ್ಯಾಕ್​ಗಳು ಆ ಸಾಲಿಗೆ ಸೇರಿದಂತಾಗಿವೆ. ಕೊವಿಡ್​ 19 ಸ್ಥಿತಿಗತಿಯಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣ ಸ್ಥಗಿತಗೊಂಡಿದ್ದು ಗೊತ್ತೇ ಇದೆ. ಆಸ್ಟ್ರೇಲಿಯಾದ ಹಲವು ಪ್ರಜೆಗಳೂ ಕೂಡ ಭಾರತ ಸೇರಿ ಕೆಲವು ರಾಷ್ಟ್ರಗಳಲ್ಲೇ ಉಳಿದುಕೊಂಡಿದ್ದಾರೆ.

ಅಂಥವರು ತಾವು ಇದ್ದಲ್ಲೇ, ಆಯಾ ದೇಶಗಳ ಕೊವಿಡ್​ 19 ಲಸಿಕೆ ಪಡೆಯುತ್ತಿದ್ದಾರೆ. ಅಂಥವರಿಗೆ ಆಸ್ಟ್ರೇಲಿಯಾ ಈಗ ಕೊವಿಶೀಲ್ಡ್​ ಮತ್ತು ಕೊರೊನಾವ್ಯಾಕ್​ ಲಸಿಕೆಗಳಿಗೂ ಮಾನ್ಯತೆ ನೀಡಿದ್ದರಿಂದ ಅನುಕೂಲವಾಗಲಿದೆ. ಭಾರತದಲ್ಲಿದ್ದು, ಕೊವಿಶೀಲ್ಡ್​ ಲಸಿಕೆ ಪಡೆದವರು ಇದೀಗ ತಮ್ಮ ದೇಶಕ್ಕೆ ಹೋಗಬಹುದು.

ಹಾಗೇ, ಆಸ್ಟ್ರೇಲಿಯಾಕ್ಕೆ ಹೋಗುವ ಅಂತಾರಾಷ್ಟ್ರೀಯ ಪ್ರಯಾಣಿಕರು ತಾವು ಟಿಜಿಎ ಅನುಮೋದಿತ ಕೊರೊನಾ ಲಸಿಕೆಯನ್ನು ಪಡೆದಿದ್ದೇವೆ ಎಂಬುದಕ್ಕೆ ಸಾಕ್ಷಿಯನ್ನು ಆಡಳಿತಕ್ಕೆ ಒಪ್ಪಿಸಬೇಕಾಗುತ್ತದೆ. ಕೊವಿಡ್​ 19 ಸರ್ಟಿಫಿಕೇಟ್​ ಹೊಂದಿರಬೇಕಾಗುತ್ತದೆ ಎಂದು ಆಸ್ಟ್ರೇಲಿಯಾ ಹೈಕಮೀಷನ್​​ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಂದಹಾಗೆ, ಈಗ ಆಸ್ಟ್ರೇಲಿಯಾ ಕೊವಿಶೀಲ್ಡ್ ಲಸಿಕೆಯನ್ನು ಮಾನ್ಯ ಮಾಡಿರುವುದರಿಂದ ಆಸ್ಟ್ರೇಲಿಯಾಕ್ಕೆ ಹೋಗಲಿರುವ ಭಾರತದ ಪ್ರವಾಸಿಗರಿಗೆ ಮತ್ತು ಶಿಕ್ಷಣಕ್ಕಾಗಿ ಹೋಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಯಾಕೆಂದರೆ ಪ್ರಧಾನಿ ಸ್ಕಾಟ್ ಮಾರಿಸನ್​ ಮಾತನಾಡುತ್ತ, ಇದೀಗ ಕೊವಿಶೀಲ್ಡ್​ ಮತ್ತು ಕೊರೊನಾವ್ಯಾಕ್​ ಲಸಿಕೆಗೆ ಮಾನ್ಯತೆ ನೀಡಿರುವುದು ಒಂದು ಮೈಲಿಗಲ್ಲಾಗಿದೆ. ಇದರಿಂದ ಬೇರೆ ರಾಷ್ಟ್ರಗಳಲ್ಲಿ ಸಿಲುಕಿರುವ ಆಸ್ಟ್ರೇಲಿಯನ್ನರು ಆದಷ್ಟು ಬೇಗನೇ ತಮ್ಮ ಕುಟುಂಬ ಸೇರಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಸೀರಂ ಇನ್​ಸ್ಟಿಟ್ಯೂಟ್​ನ ಕೊವಿಶೀಲ್ಡ್​ ಕೊರೊನಾ ಲಸಿಕೆಯನ್ನು ಆಸ್ಟ್ರೇಲಿಯಾ ಮಾನ್ಯ ಮಾಡಿದೆ. ಆನ್​ಲೈನ್​ ಮೂಲಕ ಭಾರತೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಈ ವಿಷಯವನ್ನು ದೃಢಪಡಿಸಿದ್ದಾರೆ.

ಆಸ್ಟ್ರೇಲಿಯಾ ಚಿಕಿತ್ಸಕ ಸರಕು ಆಡಳಿತ ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದೆ. ಆಸ್ಟ್ರೇಲಿಯಾಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸೂಕ್ತ ಕೊರೊನಾ ಲಸಿಕೆ ಪಡೆದಿರಬೇಕು. ಇದೀಗ ಚೀನಾದ ಕೊರೊನಾವ್ಯಾಕ್​ ಮತ್ತು ಭಾರತದ ಕೊವಿಶೀಲ್ಡ್​ ಲಸಿಕೆಗಳನ್ನೂ ಮಾನ್ಯ ಮಾಡುವಂತೆ ಟಿಜಿಎ ಸಲಹೆ ನೀಡಿದೆ ಎಂದು ಮಾರಿಸನ್​ ತಿಳಿಸಿದ್ದಾರೆ.

ಇದೀಗ ಆಸ್ಟ್ರೇಲಿಯಾ ಜನತೆಗೆ ಮತ್ತೆ ಕೊರೊನಾ ಸೋಂಕಿನ ಕುರಿತು ತಂಕ ಶುರುವಾಗಿದೆ. ಕೊರೊನಾ ದೈನಂದಿನ ಪ್ರರಕಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಲಸಿಕೆ ವಿತರಣೆಗೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಕ್ಟೋರಿಯಾದಲ್ಲಿ ಇದುವರೆಗೆ ಶೇ.49ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ವಿಕ್ಟೋರಿಯಾ ರಾಜ್ಯದಲ್ಲಿ ತಿಂಗಳ ಅಂತ್ಯದ ವೇಳೆಗೆ ಲಾಕ್‌ಡೌನ್ ನಿಯಮಗಳನ್ನು ಸಡಿಕಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದ ಕಾರಣ ಜುಲೈ ತಿಂಗಳಲ್ಲಿ ಮೆಲ್ಬರ್ನ್‌ನಲ್ಲಿ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಆಗ 31 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗುತ್ತಿದ್ದವು, ಅದಕ್ಕೆ ಹೋಲಿಸಿದರೆ ಈಗ ಬಹುತೇಕ ಕಡಿಮೆಯಾಗಿದೆ.

English summary
International tourists will not be welcomed back to Australia until next year, with the return of skilled migrants and students given higher priority, the prime minister said on Tuesday (Oct 5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X