ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶ

|
Google Oneindia Kannada News

ಕ್ಯಾನ್‌ಬೆರಾ, ಜನವರಿ 6: ಆಸ್ಟ್ರೇಲಿಯಾದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಕಾಡ್ಗಿಚ್ಚಿನಿಂದಾಗಿ ಉಷ್ಣಾಂಶ ಕೂಡ ಹೆಚ್ಚಳವಾಗಿದೆ.

ಆಸ್ಟ್ರೇಲಿಯಾದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಭಾರಿ ಕಾಡ್ಗಿಚ್ಚಿನ ರೌದ್ರಾವತಾರ ಮುಂದುವರೆದಿದೆ.ಸಿಡ್ನಿ ಹೊರವಲಯದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಕಾಡು ನಾಶವಾಗಿದ್ದು, ಭಾನುವಾರ 48.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: ಏಳು ಸಾವು ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: ಏಳು ಸಾವು

ಇದು ಭಾನುವಾರ ವಿಶ್ವದ ಯಾವುದೇ ಪ್ರದೇಶದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ಕಾಡ್ಗಿಚ್ಚಿನ ಬೆಂಕಿಯ ಕೆನ್ನಾಲಿಗೆಗಳು ಇದುವರೆಗೆ 45 ಲಕ್ಷ ಹೆಕ್ಟೇರ್ ಅರಣ್ಯವನ್ನು ಸುಟ್ಟು ಕರಕಲು ಮಾಡಿದೆ.

Sydney Temperatures Are The Highest In The World

ಬೆಂಕಿಗೆ 25 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಪ್ರಾಣಿ, ಪಕ್ಷಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ 200ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಭಸ್ಮವಾಗಿವೆ.

ಆಸ್ಟ್ರೇಲಿಯಾದ ಆರು ರಾಜ್ಯಗಳಲ್ಲಿ 290ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಾಡ್ಗಿಚ್ಚು ಹಬ್ಬಿದ್ದು,ಸಾವಿರಾರು ಅಗ್ನಿ ಶಾಮಕ ಸಿಬ್ಬಂದಿ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಹಗಲಿರುಳು ಶ್ರಮಿಸುತ್ತಿದ್ದರೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.

English summary
The mercury has climbed to a record 48.9C in the outer western Sydney suburb of Penrith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X