ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲಿಸುತ್ತಿದ್ದ ವಿಮಾನದಲ್ಲಿ ನಿದ್ದೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದು ಯಾವಾಗ?

|
Google Oneindia Kannada News

ಕ್ಯಾನ್‌ಬೆರಾ, ನವೆಂಬರ್ 27: ರಸ್ತೆಯಲ್ಲಿ ಸಂಚರಿಸುವಾಗಲೇ ಒಂದೇ ಒಂದು ನಿಮಿಷ ಕಣ್ಮುಚ್ಚಿದ್ದರೂ ಅಪಘಾತ ಕಟ್ಟಿಟ್ಟ ಬುತ್ತಿ, ಹೀಗಿರುವಾಗ ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದಲ್ಲಿ ಪೈಲಟ್ ನಿದ್ದೆ ಮಾಡಿದರೆ ಏನು ಗತಿ.

ಹೀಗೊಂದು ಘಟನೆ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಇತ್ತೀಚೆಗೆ ನಡೆದಿದೆ. ಪೈಲಟ್ ನಿದ್ರೆಗೆ ಜಾರಿದ ಪರಿಣಾಮ ವಿಮಾನವೊಂದು ತನ್ನ ನಿಗದಿತ ಗುರಿ ತಲುಪದೇ 28 ಮೈಲುಗಳು ಅಂದರೆ 46 ಕಿ.ಮೀ ಹೆಚ್ಚಿನ ಹಾರಾಟ ನಡೆಸಿರುವ ಘಟನೆ ವರದಿಯಾಗಿದೆ. ಈ ಘಟನೆ ನವೆಂಬರ್ 8ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ

ಪೈಪರ್​ ಪಿಎ-31 ನವಾಜೊ ಹೆಸರಿನ ವಿಮಾನದಲ್ಲಿ ಪೈಲಟ್​ ಒಬ್ಬನೇ ಪ್ರಯಾಣಿಸುತ್ತಿದ್ದ. ಈ ವಿಮಾನದಲ್ಲಿ ಒಟ್ಟು ಒಂಭತ್ತು ಮಂದಿ ಪ್ರಯಾಣಿಸುತ್ತಿದ್ದರು. ವಿಮಾನವು ಆಸ್ಟ್ರೇಲಿಯಾದ ಡೆವನ್​ಪೋರ್ಟ್​ನಿಂದ ತಾಸ್ಮಾನಿಯಾದ ಕಿಂಗ್​ ಐಲ್ಯಾಂಡ್ ಕಡೆಗೆ ನವೆಂಬರ್​ 8ರಂದು ಪ್ರಯಾಣ ಬೆಳೆಸಿತ್ತು. ಈ ವೇಳೆ ಪೈಲಟ್​​ ನಿದ್ರೆಗೆ ಜಾರಿದ್ದರಿಂದ ವಿಮಾನ ನಿಗದಿತ ಗುರಿಗಿಂತ ಸುಮಾರು 46 ಕಿ.ಮೀ. ಹೆಚ್ಚು ಹಾರಾಟ ನಡೆಸಿದೆ.

Pilot Falls Asleep and Flies Plane Past Destination

ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್ ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್

ಕಳೆದ ವರ್ಷ ಮೆಲ್ಬೋರ್ನ್​ನಿಂದ ಕಿಂಗ್​ ಐಲ್ಯಾಂಡ್​ಗೆ ತೆರಳುತ್ತಿದ್ದ ವಿಮಾನ ಟೇಕ್​ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಐದು ಮಂದಿ ಸಾವಿಗೀಡಾಗಿದ್ದರು. ಸುರಕ್ಷಿತವಾಗಿ ವಿಮಾನ ಲ್ಯಾಂಡ್​ ಆಗಿದ್ದು ಹೇಗೆ, ಪೈಲಟ್ ಎಚ್ಚೆರಗೊಂಡಿದ್ದು ಹೇಗೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ ಆದರೆ ಇಂತಹ ಘಟನೆಯೊಂದು ನಡೆದಿದೆ ಎಂದಷ್ಟೇ ತಿಳಿಸಿದ್ದಾರೆ, ಈ ಘಟನೆ ಕುರಿತು ಸಾರಿಗೆ ಸುರಕ್ಷತಾ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ. ಇದೊಂದು ಅಸಮರ್ಥತೆ ಪ್ರಕರಣ ಎಂದು ವರ್ಗೀಕರಿಸಲಾಗಿದೆ.

English summary
An investigation has been launched after a pilot missed his landing by more than 28 miles (46 kilometers) after falling asleep during a chartered flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X