ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿ

|
Google Oneindia Kannada News

ಮೆಲ್ಬರ್ನ್, ಜುಲೈ 16: ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಇದೀಗ ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್‌ನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ 31,400 ಸೋಂಕು ಪ್ರಕರಣಗಳು ದಾಖಲಾಗಿದ್ದು, 912 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

'ದಯವಿಟ್ಟು ಮನೆಯಿಂದ ಹೊರ ಬರಬೇಡಿ': ಸಿಡ್ನಿಯಲ್ಲಿ ಇದೆಂಥಾ ಪರಿಸ್ಥಿತಿ?'ದಯವಿಟ್ಟು ಮನೆಯಿಂದ ಹೊರ ಬರಬೇಡಿ': ಸಿಡ್ನಿಯಲ್ಲಿ ಇದೆಂಥಾ ಪರಿಸ್ಥಿತಿ?

ಹೀಗಾಗಿ ಈಗಾಗಲೇ ಸಿಡ್ನಿಯಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಇದರ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಕೂಡ ಲಾಕ್ಡೌನ್ ಜಾರಿ ಮಾಡಲಾಗಿದೆ. ಮೆಲ್ಬರ್ನ್ ನಗರದ ಸುಮಾರು 1.2 ಕೋಟಿ ಜನರಿಗೆ ಮನೆ ಬಿಟ್ಟು ಹೊರಬರದಂತೆ ಆದೇಶ ಹೊರಡಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಗಣನೀಯ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಪರಿಣಾಮ ಕ್ರಮೇಣ ಆಸ್ಟ್ರೇಲಿಯಾ ಲಾಕ್ ಡೌನ್ ಮುಷ್ಟಿಗೆ ಸಿಲುಕುತ್ತಿದೆ. ಕೋವಿಡ್-19ರ ಡೆಲ್ಟಾ ರೂಪಾಂತರ ತಳಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 ವಿಕ್ಟೋರಿಯಾದಲ್ಲಿ ಎಷ್ಟು ಪ್ರಕರಣಗಳಿವೆ?

ವಿಕ್ಟೋರಿಯಾದಲ್ಲಿ ಎಷ್ಟು ಪ್ರಕರಣಗಳಿವೆ?

ವಿಕ್ಟೋರಿಯಾದಲ್ಲಿ ಕೂಡ 18 ಸೋಂಕು ಪ್ರಕರಣ ದೃಢಪಟ್ಟ ಬೆನ್ನಲ್ಲೇ ಲಾಕ್‌ ಡೌನ್ ಘೋಷಿಸುವ ಕಠಿಣ ನಿರ್ಧಾರ ಕೈಗೊಂಡಿದ್ದೇವೆ. ಹೆಚ್ಚು ಕಾಯದೇ ಈಗಲೇ ಲಾಕ್ಡೌನ್ ಹೇರುವುದು ಸೂಕ್ತ. ಇದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಡ್ಯಾನ್ ಆಂಡ್ರೂಸ್ ತಿಳಿಸಿದ್ದಾರೆ.

 ಆಸ್ಟ್ರೇಲಿಯಾದಲ್ಲಿ ಕೋವಿಡ್ ಶೂನ್ಯತೆ ನೀತಿ

ಆಸ್ಟ್ರೇಲಿಯಾದಲ್ಲಿ ಕೋವಿಡ್ ಶೂನ್ಯತೆ ನೀತಿ

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದರಲ್ಲಿ ಆಸ್ಟ್ರೇಲಿಯಾ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದ್ದು, 'ಕೋವಿಡ್ ಶೂನ್ಯ ನೀತಿ'ಯನ್ನು ಅತ್ಯಂತ ಪರಿಣಾಮಕಾರಿಯಾಗಿ ಆಳವಡಿಸಿಕೊಂಡಿದೆ.

 ಸಿಡ್ನಿಯಲ್ಲಿ ನಾಲ್ಕನೇ ವಾರಕ್ಕೆ ಕಾಲಿಟ್ಟ ಲಾಕ್‌ಡೌನ್

ಸಿಡ್ನಿಯಲ್ಲಿ ನಾಲ್ಕನೇ ವಾರಕ್ಕೆ ಕಾಲಿಟ್ಟ ಲಾಕ್‌ಡೌನ್

ಆಸ್ಟ್ರೇಲಿಯಾದ ಅತಿ ದೊಡ್ಡ ನಗರ ಸಿಡ್ನಿಯಲ್ಲಿ ಲಾಕ್‌ಡೌನ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ ಸಿಡ್ನಿಯಲ್ಲಿ 65 ಹೊಸ ಪ್ರಕರಣಗಳು ದಾಖಲಾಗಿವೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ಮುಂದಿನ ಎರಡು ವಾರಗಳವರೆಗೂ ಮುಂದುವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.

 ನ್ಯೂ ಸೌತ್‌ವೇಲ್ಸ್‌ನಲ್ಲಿರುವ ಕೊರೊನಾ ಪ್ರಕರಣಗಳೆಷ್ಟು?

ನ್ಯೂ ಸೌತ್‌ವೇಲ್ಸ್‌ನಲ್ಲಿರುವ ಕೊರೊನಾ ಪ್ರಕರಣಗಳೆಷ್ಟು?

ನ್ಯೂಸೌತ್ ವೇಲ್ಸ್ ನಲ್ಲಿ ಈವರೆಗೂ 900ಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 73 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

English summary
The Australian state of Victoria was ordered into a five-day lockdown on Thursday following a spike in COVID-19 infections, joining Sydney as the country's two main population hubs battle an outbreak of the highly contagious Delta variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X