ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದ ಸಮುದ್ರದಲ್ಲಿ ಸರ್ಫಿಂಗ್‌ಗೆ ಹೋದ ವ್ಯಕ್ತಿಯನ್ನು ತಿಂದ ಶಾರ್ಕ್ ಮೀನು

|
Google Oneindia Kannada News

ಮೆಲ್ಬರ್ನ್, ಜೂನ್ 7: ನ್ಯೂ ಸೌತ್ ವೇಲ್ಸ್‌ನ ಸಮುದ್ರದಲ್ಲಿ ಸರ್ಫಿಂಗ್‌ಗೆ ಇಳಿದ ವ್ಯಕ್ತಿಯೊಬ್ಬ ಮೂರು ಮೀಟರ್ ಉದ್ದದ ಶಾರ್ಕ್ ಮೀನು ದಾಳಿಗೆ ಒಳಗಾಗಿದ್ದಾರೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ 60 ವರ್ಷದ ಈ ವ್ಯಕ್ತಿಯ ಮೇಲೆ ಬೆಳಗ್ಗೆ 10 ಗಂಟೆಯ ವೇಳೆ 10 ಅಡಿ ಉದ್ದದ ಶಾರ್ಕ್ ಮೀನು ಎರಗಿ ಕಾಲನ್ನು ಕತ್ತರಿಸಿತ್ತು ಎಂದು ನ್ಯೂಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾರೆ.

 ಉಡುಪಿಯಲ್ಲಿ ಮೂವತ್ತು ವರ್ಷಗಳಲ್ಲೇ ಕಂಡೂ ಕೇಳರಿಯದ ಮತ್ಸ್ಯಕ್ಷಾಮ ಉಡುಪಿಯಲ್ಲಿ ಮೂವತ್ತು ವರ್ಷಗಳಲ್ಲೇ ಕಂಡೂ ಕೇಳರಿಯದ ಮತ್ಸ್ಯಕ್ಷಾಮ

ವ್ಯಕ್ತಿಯ ಬಲಗಾಲಿಗೆ ತೀವ್ರ ಗಾಯವಾಗಿತ್ತು. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಸಿಡ್ನಿಯ ಉತ್ತರ ಭಾಗದ ಕಿಂಗ್ಸ್ ಕ್ಲಿಫ್‌ನಿಂದ ಸುಮಾರು 800 ಕಿ.ಮೀ ದೂರದ ಸಾಲ್ಟ್‌ ಬೀಚ್‌ನಲ್ಲಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯು ಇತರ ಸರ್ಫರ್‌ ಗಳ ಜೊತೆ ಸಮುದ್ರಕ್ಕೆ ಇಳಿದಿದ್ದರು. ದಾಳಿ ಮಾಡಿದ ಶಾರ್ಕ್ ವ್ಯಕ್ತಿಯನ್ನು ಎಳೆದುಕೊಂಡು ಹೋಗುತ್ತಿದ್ದಂತೆಯೇ ಇತರರು ಸಹಾಯಕ್ಕೆ ಆಗಮಿಸಿದ್ದರು.

Man Dies After Shark Bites Off Leg At A Popular Beach In Australia

ಹೇಗ್ಹೇಗೋ ಸಾಹಸಗಳನ್ನು ಮಾಡಿ ಕೊನೆಗೂ ಯಮಸ್ವರೂಪಿ ಶಾರ್ಕ್ ಬಾಯಿಂದ ಅವರನ್ನು ಬಿಡಿಸಿಕೊಂಡು ಬರಲಾಯಿತಾದರೂ ಬದುಕುಳಿಯಲಿಲ್ಲ.

ಜಲಚರ ಮತ್ತು ಪ್ರಾಣಿ ಸಂರಕ್ಷಣಾ ಸೊಸೈಟಿ ತರೊಂಗಾ ಕಲೆ ಹಾಕಿರುವ ಮಾಹಿತಿಗಳ ಪ್ರಕಾರ ಈವರೆಗೆ ಕೇವಲ ಇಬ್ಬರು ಮಾತ್ರ ಶಾರ್ಕ್ ದಾಳಿಗೆ ಒಳಗಾಗಿದ್ದರು. ಭಾನುವಾರದ ಪ್ರಕರಣ ಮೂರನೆಯದಾಗಿದೆ.

ಘಟನೆ ಸಂಭವಿಸಿದ ಕಿಂಗ್ಸ್‌ಕ್ಲಿಫ್ ಮತ್ತು ಕ್ಯಾಬರಿತಾ ನಡುವಿನ ಸಮುದ್ರ ಕಿನಾರೆಯಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಮರೈನ್ ಏರಿಯಾ ಕಮಾಂಡ್ ಪಡೆಯವರು ಮತ್ತು ಸ್ಥಳೀಯ ಸರ್ಫರ್‌ಗಳ ಜೀವರರಕ್ಷಕರು ಅಲ್ಲಿಯೇ ಇದ್ದಾರೆ.

English summary
Man Dies After Shark Bites Off Leg At A Popular Beach In Australia ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X