• search
  • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ಟ್ರೇಲಿಯಾದಲ್ಲಿ ಭಾರತೀಯ ದಂತವೈದ್ಯೆ ಹತ್ಯೆಗೂ ಮುನ್ನ ನಡೆದಿದ್ದೇನು?

|

ಸಿಡ್ನಿ, ಮಾರ್ಚ್ 07: ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ದಂತ ವೈದ್ಯೆ ಪ್ರೀತಿ ರೆಡ್ಡಿ(32) ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಭಾರೀ ಸವಾಲು ಎದುರಾಗಿದೆ.

ಪ್ರೀತಿ ರೆಡ್ಡಿ ಅವರನ್ನು ಅವರ ಮಾಜಿ ಪ್ರಿಯತಮನೇ ಸಾಯಿಸಿರುವ ಶಂಕೆ ವ್ಯಕ್ತವಾಗಿದೆಯಾದರೂ, ವಿಚಾರಣೆ ಮಾಡಲು ಆಕೆಯ ಮಾಜಿ ಪ್ರಿಯತಮ ಹರ್ಷ್ ನರ್ಡೆ ಬದುಕಿಲ್ಲ! ಪ್ರೀತಿ ರೆಡ್ಡಿ ಸಾವು ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಹರ್ಷ್ ರೆಡ್ಡಿ ಅವರೂ ಕಾರ್ ಅಪಘಾತದಲ್ಲಿ ಮೃತರಾಗಿರುವುದು ಭಾರೀ ಆಘಾತವನ್ನುಂಟು ಮಾಡಿದೆ.

ಪ್ರೀತಿ ರೆಡ್ಡಿ ಅವರನ್ನು ಸಾಯಿಸಲು 'ಮೋಟಿವ್' ಇದ್ದಿದ್ದು ಹರ್ಷ್ ಅವರಿಗೆ ಮಾತ್ರ. ಅದಕ್ಕೆ ಪೂರಕ ಎಂಬಂತೆ ಪ್ರೀತಿ ಸಾಯುವ ಕೆಲವೇ ಗಂಟೆಗಳ ಮೊದಲು ಇಬ್ಬರ ನಡುವಲ್ಲೂ ಮಾತುಕತೆ ನಡೆದಿತ್ತು. ಸಿಡ್ನಿಯ ಹೊಟೇಲ್ ವೊಂದರಲ್ಲಿ ಇಬ್ಬರು ಕೆಲ ಹೊತ್ತು ಮಾತುಕತೆ ನಡೆಸಿದ್ದನ್ನು ಪ್ರೀತಿ ರೆಡ್ಡಿಯ ಸಹೋದ್ಯೋಗಿಯೊಬ್ಬರು ನೋಡಿದ್ದರು. ಆದರೆ ಅದಾಗಿ ಮರುದಿನವೇ ಪ್ರೀತಿ ರೆಡ್ಡಿ ನಾಪತ್ತೆಯಾದ ಸುದ್ದಿ ಹರಡಿತ್ತು. ಕೆಲವೇ ಗಂಟೆಗಳಲ್ಲಿ ಆಕೆಯ ದೇಹವೂ ಆಕೆಯದೇ ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ನಲ್ಲಿ ಛಿದ್ರ ಛಿದ್ರವಾಗಿದ್ದ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿತ್ತು.

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ದಂತವೈದ್ಯೆಯ ಬರ್ಬರ ಹತ್ಯೆ

ಘಟನೆಯ ನಂತರ ಪ್ರೀತಿ ರೆಡ್ಡಿ ಮತ್ತು ಹರ್ಷ್ ಅವರ ಕೊನೆಯ ಕ್ಷಣಗಳ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ನೀಡಿದ ಹೇಳಿಕೆ, ಥ್ರಿಲ್ಲರ್ ಕಾದಂಬರಿಯನ್ನು ನೆನಪಿಸುವಂತಿದೆ.

ಪ್ರೇಯಸಿಯ ಕೊಂದವನಿಗೆ ವಿಧಿಯಿಂದಲೇ ಮರಣದಂಡನೆ!

ಮಾಜಿ ಪ್ರೇಯಸಿಯನ್ನು ಕೊಂದು ಹರ್ಷ್ ತಮ್ಮ ಬಿಎಂಡಬ್ಲ್ಯು ಕಾರ್ ನಲ್ಲಿ ವಾಪಸ್ ತೆರಳುತ್ತಿದ್ದ ಸಮಯದಲ್ಲಿ ಭೀಕರ ಅಪಘಾತಕ್ಕ ಸಿಕ್ಕಿ ಅವರೂ ಮೃತರಾಗಿದ್ದಾರೆ. ಪ್ರೀತಿ ಅವರನ್ನು ಕೊಲೆ ಮಾಡುವುದಕ್ಕೆ ಹರ್ಷ ಅವರಿಗಲ್ಲದೆ ಬೇರೆ ಯಾರಿಗೂ 'ಮೋಟಿವ್' ಇರಲಿಲ್ಲ ಎಂಬುದು ಪೊಲೀಸರ ಹೇಳಿಕೆ. ಅದೂ ಅಲ್ಲದೆ ಪ್ರೀತಿ ಅವರ ದೇಹವನ್ನು ತುಂಬಿದ್ದ ಸೂಟ್ ಕೇಸ್ ಅನ್ನು ಹರ್ಷ್ ಅವರೇ ಹೊಟೇಲ್ ನಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಮಾಜಿ ಪ್ರೇಯಸಿಯನ್ನು ಕೊಂದ ಹರ್ಷ್ ಗೆ ವಿಧಿಯೇ ಮರಣದಂಡನೆ ವಿಧಿಸಿದೆ.

ಪ್ರೇಮ ವೈಫಲ್ಯವೇ ಕಾರಣ?

ಪ್ರೀತಿ ಮತ್ತು ಹರ್ಷ್ ಇಬ್ಬರೂ ಬಹಳ ವರ್ಷದಿಂದ ಪ್ರೇಮಿಸುತ್ತಿದ್ದರು, ಮಾತ್ರವಲ್ಲ, ಇಬ್ಬರೂ ಒಂದೇ ಕಡೆ ವಾಸಿಸುತ್ತಿದ್ದರು. ಆದರೆ ಕೆಲವು ಸಮಯದ ಹಿಂದೆ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು. ಆ ನಂತರ ಓದುವುದಕ್ಕೆಂದು ಸಿಡ್ನಿಯಿಂದ ಟಾಮ್ ವರ್ತ್ ಎಂಬಲ್ಲಿಗೆ ತೆರಳಿದ್ದ ಹರ್ಷ್ ಪ್ರೀತಿಯನ್ನು ನೋಡುವುದಕ್ಕೆಂದೇ ಇತ್ತೀಚೆಗೆ ಸಿಡ್ನಿಗೆ ಬದಿದ್ದರು. ಆಕೆಯ ಬಳಿ ಮತ್ತೆ ಒಂದಾಗುವ ಪ್ರಸ್ತಾಪ ಇಟ್ಟಿದ್ದರು. ಆದರೆ ಅದಕ್ಕೆ ಪ್ರೀತಿ ರೆಡ್ಡಿ ಒಪ್ಪಿರಲಿಲ್ಲ ಎಂದು ಪ್ರೀತಿಯವರ ಸ್ನೇಹಿತರು ಹೇಳಿದ್ದಾರೆ.

ಹೊಟೇಲ್ ನಲ್ಲಿ ಮಾತುಕತೆ

ಮಾ.2 ರಂದು ಶನಿವಾರ ಸಂಜೆಯ ವೇಳೆಗೆ ಈ ಇಬ್ಬರೂ ಹೊಟೇಲ್ ವೊಂದರಲ್ಲಿ ಮಾತುಕತೆ ನಡೆಸಿದ್ದಾರೆ. ನಂತರ ಇಬ್ಬರೂ ಯಾವುದೇ ಬೇಸರವಿಲ್ಲದೆ, ನಗುತ್ತಲೇ ವಾಪಸ್ ಹೋಗಿದ್ದಾರೆ ಎಂದು ಪ್ರೀತಿಯವರ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ. ಆದರೆ ಮಾ. 3 ರ ರಾತ್ರಿ ಪ್ರೀತಿ ಅವರನ್ನು ಕೊಲೆ ಮಾಡಲಾಗಿದ್ದು, ಅವರ ದೇಹ ಮಂಗಳವಾರ ಅವರದೇ ಕಾರಿನಲ್ಲಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ!

ಪ್ರೀತಿ ಶವವಿದ್ದ ಸೂಟ್ ಕೇಸ್ ಹರ್ಷ ಕೈಯಲ್ಲಿ!

ಪ್ರೀತಿ ಕೊಲೆ ನಡೆದಿದ್ದು ಹೇಗೆ ಎಂಬುದನ್ನು ಬಾಯಿಬಿಡಿಸಲು ಈಗ ಹರ್ಷ ಬದುಕಿಲ್ಲ. ಆದರೆ ಆತನೇ ಕೊಲೆ ಮಾಡಿದ್ದಾನೆ ಎಂಬುದನ್ನು ಸಾಬೀತು ಪಡಿಸುವ ಬಲವಾದ ಸಾಕ್ಷಿ ಲಭಿಸಿದೆ. ಭಾನುವಾರ ಸಂಜೆ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಕಾಣೆಯಾಗಿದ್ದ ಪ್ರೀತಿಯನ್ನು ಹರ್ಷ್ ಅವರೇ ಹೊಟೇಲ್ ವೊಂದಕ್ಕೆ ಕರೆಸಿದ್ದರು. ಆ ಹೊಟೇಲ್ ನಲ್ಲೇ ಆಕೆಯ್ನು ಸಾಯಿಸಿ, ಮಣಬಾರದ ಸೂಟ್ ಕೇಸೊಂದರಲ್ಲಿ ತುಂಬಿದ್ದರು. ಹೊಟೇಲ್ ನಿಂದ ಭಾನುವಾರ ರಾತ್ರಿ ಆ ಸೂಟ್ ಕೇಸನ್ನು ಕಾರಿಗೆ ತುಂಬಲು ಹರ್ಷ್ ಒದ್ದಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ. ನಂತರ ಪ್ರೀತಿ ರೆಡ್ಡಿ ಅವರ ಕಾರಿನಲ್ಲಿ ಸಿಕ್ಕ ಸೂಟ್ ಕೇಸ್ ಸಹ ಅದೇ ಎಂಬುದು ಸಾಬೀತಾಗಿದೆ. ಸೂಟ್ ಕೇಸ್ ನಲ್ಲಿ ಪತ್ತೆಯಾದ ಪ್ರೀತಿಯವರ ದೇಹದ ಮೇಲೆ ಚೂರಿಯಿಂದ ಇರಿದ ಹಲವು ಕಲೆಗಳಿರುವುದು ಪತ್ತೆಯಾಗಿದೆ.

ಪ್ರೀತಿ ಗೆಳತಿಗೆ ಹರ್ಷ್ ಸಂದೇಶ

ಪ್ರೀತಿ ನಾಪತ್ತೆಯಾದ ಸುದ್ದಿ ತಿಳಿದು, ಆತ ಹರ್ಷ್ ಅವರನ್ನು ಭೇಟಿ ಮಾಡಿದ್ದು ತಿಳಿದಿದ್ದ ಆಕೆಯ ಸ್ನೇಹಿತೆ ಹರ್ಷ್ ಅವರಿಗೆ ಮೆಸೇಜ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಹರ್ಷ, ''ನಾನು ಅವಳೊಂದಿಗೆ(ಪ್ರೀತಿ) ವೈಯಕ್ತಿಕವಾಗಿ ಮಾತನಾಡಿದ್ದೇನೆ, ನಂತರ ಆಕೆ ಮನೆಗೆ ಹೋಗುವುದಾಗಿ ಹೇಳಿದಳು' ಎಂದಿದ್ದರು.

ಆಕೆ ಮನೆಗೆ ಹೋಗಿಲ್ಲ, ಆಕೆಯ ಕುಟುಂಬಸ್ಥರು ಗಾಬರಿಯಾಗಿದ್ದಾರೆ ಎಂದು ಪ್ರೀತಿಯ ಸ್ನೇಹಿತೆ ಹೇಳಿದ್ದಕ್ಕೆ, 'ಬಹುಶಃ ಎಲ್ಲಾದರೂ ಮಲಗಿರಬಹುದು' ಎಂದು ಹರ್ಷ್ ವಿಚಿತ್ರವಾಗಿ ಮೆಸೇಜ್ ಮಾಡಿದ್ದ! 'ಅವರ ಮನೆಯವರಿಗೆ ಮಾತ್ರವಲ್ಲ, ನನಗೂ ಭಯವಾಗಿದೆ, ನಾನೂ ರಲೆಬಿಸಿಯಲ್ಲಿದ್ದೇನೆ, ನಾನಿಲ್ಲಿ ಒಂದೇ ಕಡೆ ಮೂವತ್ತು ನಿಮಿಷದಿಂದ ಕುಳಿತಿದ್ದೇನೆ' ಎಂದೂ ಹರ್ಷ್ ಮೆಸೇಜ್ ಮಾಡಿದ್ದ.

ಪ್ರೀತಿ ಕೊನೆಯ ಕರೆ

ಪ್ರೀತಿ ಕೊನೆಯ ಕರೆ

ತನ್ನ ಕುಟುಂಬಸ್ಥರೊಂದಿಗೆ ಪ್ರೀತಿ ಕೊನೆಯ ಬಾರಿ ಮಾತನಾಡಿದ್ದು ಭಾನುವಾರ ಬೆಳಿಗ್ಗೆ 11 ಗಂಟೆಗೆ. ಸಂಜೆ ಫೋನ್ ಮಾಡುತ್ತೇನೆ ಎಂದಿದ್ದ ಪ್ರೀತಿ ನಂತರ ಫೋನಿಗೆ ಸಿಕ್ಕದಿದ್ದರಿಂದ ಆಕೆಯ ಕುಟುಂಬಸ್ಥರು ಫೇಸ್ ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ, ಪ್ರೀತಿಯ ಮಾಹಿತಿ ಸಿಕ್ಕಲ್ಲಿ ತಿಳಿಸಿ ಎಂದು ಮನವಿ ಮಾಡಿದ್ದಾರೆ. ನಂತರ ಮಂಗಳವಾರ ರಾತ್ರಿ 9:30 ಕ್ಕೆ ಪ್ರೀತಿ ಶವ ಪತ್ತೆಯಾಗಿದೆ.

English summary
A 32 year old Indian-origin dentist, Preethi Reddy, found dead in Australia. She was missing from Sydney's busiest area under mysterious circamstances. Her Ex boyfried who died in an accident is the suspect. Here are some suspicious moments before her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X