ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ ಟೆಕ್ಕಿ ಪಂಕಜ್ ಸಾವಿಗೆ ಏನು ಕಾರಣ?

By Mahesh
|
Google Oneindia Kannada News

ಸಿಡ್ನಿ, ಏ.2: ಭಾರತೀಯ ಮೂಲದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ತಮ್ಮ ಮನೆ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.ಮೃತರನ್ನು 29ವರ್ಷ ವಯಸ್ಸಿನ ಐಟಿ ಅನಾಲಿಸ್ಟ್ ಪಂಕಜ್ ಶಾ ಎಂದು ಗುರುತಿಸಲಾಗಿದೆ. ಫೋನಿನಲ್ಲಿ ಮಾತನಾಡುತ್ತಾ ಬಾಲ್ಕನಿಯಿಂದ ಬಿದ್ದು ಮೃತ ಪಟ್ಟ ಶಾ ಅವರ ಸಾವಿಗೆ ಬಾಲ್ಕನಿ ದೋಷವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸಿಡ್ನಿಯ ಉತ್ತರ ಭಾಗದಲ್ಲಿ ಟೆಕ್ ಮಹೀಂದ್ರಾ ಹೊರಗುತ್ತಿಗೆ ವಿಭಾಗದಲ್ಲಿ ಸಿಸ್ಟಮ್ ಸಪೋರ್ಟ್ ನಿರ್ವಹಣೆ ಮಾಡುತ್ತಿದ್ದ ಪಂಕಜ್ ಅವರು ಕಳೆದ ಜನವರಿ ತಿಂಗಳಿನಲ್ಲಿ ಮದುವೆಯಾಗಿದ್ದರು. ಪತ್ನಿ ಜೊತೆ ಥೈಲ್ಯಾಂಡ್ ಗೆ ಹನಿಮೂನ್ ಆಚರಿಸಲು ಹೋಗುವುದಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಫೋಟೋ ಹಾಕಿಕೊಂಡಿದ್ದರು.

ಮದುವೆ ನಂತರ ಒಬ್ಬರೇ ಆಸ್ಟ್ರೇಲಿಯಾಕ್ಕೆ ಹಿಂತಿರುಗಿ ಸ್ನೇಹಿತರ ಜೊತೆ ವಾಸಿಸುತ್ತಿದ್ದರು. ಅವರ ಪತ್ನಿ ಕೆಲ ಕಾಲದ ನಂತರ ಆಸ್ಟ್ರೇಲಿಯಾಕ್ಕೆ ಬರುವ ನಿರೀಕ್ಷೆಯಿತ್ತು. ಅದರೆ, ಅಷ್ಟರಲ್ಲಿ ವಿಧಿ ಬೇರೆಯೇ ಕಥೆ ಬರೆದಿತ್ತು.

ನಂ.21, ಕಾಟನ್ ವುಡ್ ಕ್ರೆಸ್, ಮಕ್ವಾರಿ ಪಾರ್ಕ್‌, ನ್ಯೂ ಸೌತ್ ವೇಲ್ಸ್ 2113 ಅಡ್ರೆಸ್ ನಲ್ಲಿ ಈಗ ನೀರವ ಮೌನ ಆವರಿಸಿದೆ. ಪಂಕಜ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸಹದ್ಯೋಗಿಗಳು ಕೂಡಾ ಅಪಾರ್ಟ್ಮೆಂಟ್ ಬಾಲ್ಕನಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರೆದಿದೆ.

Indian techie falls to death in Sydney
ಇತ್ತೀಚೆಗೆ ಕರ್ನಾಟಕ ಮೂಲದ ಸಾಫ್ಟ್ ವೇರ್ ತಜ್ಞೆ ಪ್ರಭಾ ಅವರನ್ನು ಮನೆ ಸಮೀಪದಲ್ಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಪಂಕಜ್ ಶಾ ಎಂಬ ಟೆಕ್ಕಿ ಮಕ್ವಾರಿ ಪಾರ್ಕ್‌ನಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಭಾರತದಲ್ಲಿರುವ ತನ್ನ ಪತ್ನಿ ಜತೆ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಸುದ್ದಿ ತಿಳಿದ ತಕ್ಷಣ ತುರ್ತುಸೇವೆಗಳ ಘಟಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ.

ಪಂಕಜ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು ಎಂದು ವೈದ್ಯರು ಹೇಳಿದ್ದಾರೆ. ಅವನು ಮಾತನಾಡುತ್ತಿದ್ದ ಮೊಬೈಲ್ ಸೆಟ್ ಕೂಡ ಅವನ ಬದಿಯಲ್ಲೇ ಬಿದ್ದಿತ್ತು. ಪಂಕಜ್ ಇಲ್ಲಿನ ಭಾರತ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ಮದುವೆ ಮಾಡಿಕೊಂಡು ಇತ್ತೀಚೆಗಷ್ಟೆ ಪಂಕಜ್ ಇಲ್ಲಿಗೆ ಹಿಂದಿರುಗಿದ್ದ ಎಂದು ಪಂಕಜ್ ಅವರ ಕಂಪೆನಿ ಮ್ಯಾನೇಜರ್ ಕರೇನ್‌ವಾಲರ್ ತಿಳಿಸಿದ್ದಾರೆ.(ಪಿಟಿಐ)

English summary
A 29-year-old Indian IT analyst on Thursday died after allegedly falling from the balcony of the third floor of an apartment in Sydney, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X