ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#StopAdani ಎಂದು ಹೋರಾಟಕ್ಕಿಳಿದ ಗ್ರೇಟಾ ತನ್ ಬರ್ಗ್

|
Google Oneindia Kannada News

ಸಿಡ್ನಿ, ಜನವರಿ 12: ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಯೋಜನೆಗೆ ಮುಂದಾಗಿರುವ ಭಾರತದ ಉದ್ಯಮಿ ಅದಾನಿ ಸಂಸ್ಥೆ ವಿರುದ್ಧ ಯುವ ಪರಿಸರವಾದಿ ಸ್ವೀಡನ್ನಿನ ಗ್ರೇಟಾ ತನ್ ಬರ್ಗ್ ದನಿ ಎತ್ತಿದ್ದಾರೆ.

ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟ

ಕಲ್ಲಿದ್ದಲು ಗಣಿಗಾರಿಕೆ ಬಗ್ಗೆ ಸೀಮನ್ಸ್ ಸಂಸ್ಥೆ ತನ್ನ ನಿರ್ಧಾರವನ್ನು ಸೋಮವಾರದಂದು ಪ್ರಕಟಿಸಲಿದೆ. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಾವೆಲ್ಲರೂ ಒತ್ತಡ ಹೇರಬೇಕಿದೆ #StopAdani ಎಂದು ಗ್ರೇಟಾ ಟ್ವೀಟ್ ಮಾಡಿದ್ದಾಳೆ.

Greta Thunberg urges Siemens to review Adanis Australia coal project

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸುವ ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವಿಳಂಬ ಮಾಡುವಂತೆ ಅಥವಾ ಅಡ್ಡಿಪಡಿಸುವಂತೆ ಜರ್ಮನಿಯ ಪ್ರಮುಖ ಇಂಜಿನಿಯರಿಂಗ್ ಕಂಪನಿಯಾದ ಸಿಮನ್ಸ್‌ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ.

ದಾನಿ ಸಮೂಹದ ಕಾರ್ಮಿಚೆಲ್ ಗಣಿಗೆ 20 ದಶಲಕ್ಷ ಡಾಲರ್ ಮೌಲ್ಯದ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವ ಗುತ್ತಿಗೆಯಿಂದ ಹಿಂದೆ ಸರಿಯುವಂತೆ ಅವರು ಸಿಮನ್ಸ್‌ಗೆ ಮನವಿ ಮಾಡಿದ್ದಾರೆ. ಗಣಿಗಾರಿಕೆಯಿಂದ ವಾರ್ಷಿಕವಾಗಿ 8 ರಿಂದ 10 ಮಿಲಿಯನ್ ಟನ್ ಗಳಷ್ಟು ಕಲಿದ್ದಲು ಉತ್ಪಾದನೆ ಹಾಗೂ ಇದರಿಂದ ಹೊರ ಹೊಮ್ಮುವ ಇಂಗಾಲದ ಪ್ರಮಾಣದ ಬಗ್ಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿ, ವ್ಯಾಪಕ ಪ್ರತಿರೋಧ ಒಡ್ಡುತ್ತಿದ್ದಾರೆ.

English summary
Climate activist Greta Thunberg has called on German engineering group Siemens AG to review its role in helping to develop a coal mine project in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X