ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯ ಇಲ್ಲದೆ ಮನುಕುಲ ನಾಶ, ಮನುಷ್ಯರನ್ನು ಜೀವಂತವಾಗಿ ತಿನ್ನುತ್ತಿವೆ ಹುಳುಗಳು..!

|
Google Oneindia Kannada News

ಅಲ್ಲಿ ಕೆಲವರಿಗೆ ರೋಗ ಬಂದಿತ್ತು. ಇನ್ನೇನು ಡಾಕ್ಟರ್ ಪರೀಕ್ಷೆ ಮಾಡಬೇಕು ಎನ್ನುಷ್ಟರಲ್ಲಿ, ಕೈ-ಕಾಲು, ಬೆರಳು ಹೀಗೆ ದೇಹದ ಭಾಗಗಳನ್ನೇ ಕತ್ತರಿಸಿ ಕತ್ತರಿಸಿ ಬಿಸಾಡುವ ಪರಿಸ್ಥಿತಿ ಬಂದೊದಗಿದೆ. ಅಂದಹಾಗೆ ನಾವು ಹೇಳ್ತಾ ಇರೋದು ಮನುಷ್ಯರು ಜೀವಂತ ಇರುವಾಗಲೇ ದೇಹವನ್ನ ಕಿತ್ತುತಿನ್ನುವ ಬ್ಯಾಕ್ಟೀರಿಯಾದ ಬಗ್ಗೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಇಂತಹ ಸಮಸ್ಯೆ ಉಲ್ಬಣಿಸಿತ್ತು. ಆಗ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಿದ್ದರು.

ಸಣ್ಣ ಗಾಯದೊಂದಿಗೆ ಆರಂಭವಾಗುವ ಬ್ಯಾಕ್ಟೀರಿಯ ದಾಳಿ ಬರುಬರುತ್ತಾ ದೊಡ್ಡದಾಗಿ, ಸಣ್ಣ ಚೆಂಡಿನ ಆಕಾರಕ್ಕೂ ಅರಳುತ್ತಿತ್ತು. ಕಡೆಗೆ ಇದನ್ನ ಬುರುಲಿ ಅಲ್ಸರ್ ಎಂದು ಗುರುತಿಸಿದ್ದರು ಸಂಶೋಧಕರು. ಮೊದಲೇ ಕೊರೊನಾ ಕಾಟದಿಂದ ಬೆಚ್ಚಿಬಿದ್ದಿದ್ದ ಆಸ್ಟ್ರೇಲಿಯಾ ಹೊಸ ರೋಗದಿಂದ ತತ್ತರಿಸಿ ಹೋಗಿತ್ತು. ಆದರೆ ಈ ವಿಚಾರ ಅಷ್ಟಾಗಿ ಸದ್ದು ಮಾಡದೇ ಹೋದರು, ಈಗ ಮಾಂಸ ತಿನ್ನುವ ಬ್ಯಾಕ್ಟೀರಿಯದ ಅಬ್ಬರ ಜೋರಾಗಿದೆ. ಆಸ್ಟ್ರೇಲಿಯಾದಲ್ಲಿ ಕರಾವಳಿ ಭಾಗ ಮನುಷ್ಯರ ಮಾಂಸ ತಿನ್ನುವ ಬ್ಯಾಕ್ಟೀರಿಯದಿಂದ ತತ್ತರಿಸಿ ಹೋಗಿದೆ. ನಿತ್ಯ ಹತ್ತಾರು ಜನರಿಗೆ ಈ ರೋಗ ಕನ್ಫರ್ಮ್ ಆಗುತ್ತಿದೆ.

ಎಚ್ಚರ..! ಮನುಷ್ಯರ ಮಾಂಸ ತಿನ್ನುವ ಬ್ಯಾಕ್ಟೀರಿಯ ದೇಹ ಸೇರುತ್ತಿದೆ..!ಎಚ್ಚರ..! ಮನುಷ್ಯರ ಮಾಂಸ ತಿನ್ನುವ ಬ್ಯಾಕ್ಟೀರಿಯ ದೇಹ ಸೇರುತ್ತಿದೆ..!

ಹೇಗೆ ಹರಡುತ್ತದೆ ಬ್ಯಾಕ್ಟೀರಿಯ..?
ಕೊರೊನಾ ಕಾಟದಿಂದ ಮುಕ್ತರಾದರೆ ಸಾಕು ಎನ್ನುವಾಗಲೇ ಹೊಸ ಯುದ್ಧ ಆರಂಭವಾಗಿದೆ. ಬುರುಲಿ ಅಲ್ಸರ್ ಹರಡುವ ಬ್ಯಾಕ್ಟೀರಿಯ ಸಾಮಾನ್ಯವಾಗಿ 'ಒಪೊಸಮ್' ಎಂಬ ಉಭಯವಾಸಿಗಳ ಮಲದಲ್ಲಿ ಕಂಡುಬರುತ್ತದೆ. ಆದರೆ ಬ್ಯಾಕ್ಟೀರಿಯ ಮನುಷ್ಯರ ಚರ್ಮಕ್ಕೆ ಅಂಟಿದ್ದು ಹೇಗೆ ಅಂತಾ ಸಂಶೋಧನೆ ಆರಂಭವಾದಾಗ ಸೊಳ್ಳೆಗಳ ಜಾಡು ಸಿಕ್ಕಿದೆ. ಸೊಳ್ಳೆಗಳ ಮೂಲಕ ಮನುಷ್ಯರಿಗೆ ಬ್ಯಾಕ್ಟೀರಿಯ ಹರಡಿರಬಹುದು ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆಗಳು ಮುಂದುವರಿದಿವೆ. ಮತ್ತೊಂದ್ಕಡೆ 'ಒಪೊಸಮ್' ಪ್ರಾಣಿ ಕಂಡುಬರುವ ದೇಶಗಳು ಅಲರ್ಟ್ ಆಗಿರುವಂತೆ ಆಸ್ಟ್ರೇಲಿಯಾದಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

Flesh-Eating Bacteria Spreading Very Fast in Australia

ಸರ್ಜರಿ ಮಾಡಬೇಕಾಗಿ ಬರಬಹುದು..!
'ಬುರುಲಿ ಅಲ್ಸರ್' ಪ್ರಾಥಮಿಕ ಅಥವಾ ದ್ವಿತೀಯ ಹಂತ ತಲುಪಿರುವಾಗಲೇ ಚಿಕಿತ್ಸೆ ಅಗತ್ಯ. ಇದನ್ನು ಮೀರಿ ಹೋದರೆ ಗಾಯ ಸಣ್ಣ ಚೆಂಡಿನ ಆಕಾರಕ್ಕೆ ತಿರುಗುತ್ತದೆ. ಆ ನಂತರ ಸರ್ಜರಿ ಮಾಡಬೇಕಾಗಿ ಬರಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವರು 'ಬುರುಲಿ ಅಲ್ಸರ್' ಸೋಂಕಿನಿಂದ ಗುಣಮುಖರಾಗಿದ್ದು, ವ್ಯಾಪಕವಾಗಿ ಬ್ಯಾಕ್ಟೀರಿಯ ಹರಡುತ್ತಿರುವುದು ಜನರಲ್ಲಿ ಭಯಮೂಡುವಂತೆ ಮಾಡಿದೆ. ಈಗಾಗಲೇ ಸ್ಥಳೀಯ ಆಡಳಿತ, ಆಸ್ಟ್ರೇಲಿಯಾದ ಸರ್ಕಾರ ಬ್ಯಾಕ್ಟೀರಿಯ ಹರಡದಂತೆ ತಡೆಯಲು ಅಗತ್ಯವಿರುವ ಕ್ರಮ ಕೈಗೊಂಡಿದೆ. ಆದರೂ ಬ್ಯಾಕ್ಟೀರಿಯ ನಿಯಂತ್ರಣ ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Recommended Video

ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು , ಕೇಂದ್ರದಿಂದ ಅಧ್ಯಯನ | Oneindia Kannada

ರೋಗ ನಿರೋಧಕ ಶಕ್ತಿ ನಾಶ
ಬ್ಯಾಕ್ಟೀರಿಯ ಚರ್ಮದ ಮೂಲಕ ದೇಹದೊಳಗೆ ಎಂಟ್ರಿಯಾದ ತಕ್ಷಣ ಜೀವಕೋಶಗಳನ್ನ ನಾಶಮಾಡುತ್ತದೆ. ವಿಷಯುಕ್ತ ಪದಾರ್ಥಗಳನ್ನು ಹರಡುವ ಮೂಲಕ ಆ ಜಾಗ ಕೊಳೆಯುವಂತೆ ಮಾಡುತ್ತದೆ. ಹೀಗೆ ದಿನದಿಂದ ದಿನಕ್ಕೆ ಗಾಯ ಹರಡುತ್ತಾ ಹೋಗುತ್ತದೆ. ಇನ್ನು ದೇಹದ ರೋಗ ನಿರೋಧಕ ಶಕ್ತಿಯೂ ಕೆಲಸ ಮಾಡದಂತೆ ಈ ಖತರ್ನಾಕ್ ಬ್ಯಾಕ್ಟೀರಿಯ ಪ್ರಭಾವ ಬೀರುತ್ತದೆ. ಹೀಗಾಗಿಯೇ ವಿಜ್ಞಾನಿಗಳು ಹೆಚ್ಚು ಚಿಂತಾಕ್ರಾಂತರಾಗಿ, 'ಬುರುಲಿ ಅಲ್ಸರ್' ನಿಯಂತ್ರಿಸಲು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈವರೆಗೂ 'ಬುರುಲಿ ಅಲ್ಸರ್' ನಿಯಂತ್ರಣಕ್ಕೆ ಅಧಿಕೃತ ಔಷಧ ಸಿಕ್ಕಿಲ್ಲವಾದರೂ, ಈಗಿರುವ ಔಷಧಗಳಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ.

English summary
Deadly Buruli Ulcer or flesh-eating bacteria spreading very fast in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X