ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ 106 ದಿನಗಳ ಬಳಿಕ ಕೊನೆಗೂ ಕೊರೊನಾ ಲಾಕ್‌ಡೌನ್ ಅಂತ್ಯ

|
Google Oneindia Kannada News

ಸಿಡ್ನಿ, ಅಕ್ಟೋಬರ್ 12: ಸಿಡ್ನಿಯಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದು, 4 ತಿಂಗಳ ಸುದೀರ್ಘ ಲಾಕ್‌ಡೌನ್ ಕೊನೆಗೂ ಅಂತ್ಯಗೊಂಡಿದೆ.
ಸಿಡ್ನಿಯಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅಲ್ಲಿ ಮಾರ್ಚ್ ತಿಂಗಳಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣಗಳ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು.

ನ್ಯೈ ಸೌತ್‌ವೇಲ್‌ನಲ್ಲಿ 496 ಪ್ರಕರಣಗಳು ಪತ್ತೆಯಾಗಿವೆ, 16 ವರ್ಷ ಮೇಲ್ಪಟ್ಟ ಶೇ.70 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.ಕೊರೊನಾ ಲಸಿಕೆ ಪ್ರಮಾಣಪತ್ರ ತೋರಿಸಿದರೆ ಮಿಡ್‌ನೈಟ್ ಪಬ್, ರೆಸ್ಟೋರೆಂಟ್‌ ಹಾಗೂ ಕೆಫೆಗಳಿಗೆ ತೆರಳಲು ಅವಕಾಶ ನೀಡಲಾಗುತ್ತದೆ.

ಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿ

ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ಈಗಾಗಲೇ ಸಿಡ್ನಿಯಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಇದರ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಕೂಡ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಮೆಲ್ಬರ್ನ್ ನಗರದ ಸುಮಾರು 1.2 ಕೋಟಿ ಜನರಿಗೆ ಮನೆ ಬಿಟ್ಟು ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಗಣನೀಯ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಪರಿಣಾಮ ಕ್ರಮೇಣ ಆಸ್ಟ್ರೇಲಿಯಾ ಲಾಕ್ ಡೌನ್ ಮುಷ್ಟಿಗೆ ಸಿಲುಕುತ್ತಿದೆ. ಕೋವಿಡ್-19ರ ಡೆಲ್ಟಾ ರೂಪಾಂತರ ತಳಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Sydney Ends COVID-19 Lockdown After 106 Days

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವುದರಲ್ಲಿ ಆಸ್ಟ್ರೇಲಿಯಾ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದ್ದು, 'ಕೋವಿಡ್ ಶೂನ್ಯ ನೀತಿ'ಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ.

ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೊನಾ ವೈರಸ್ ಡೆಲ್ಟಾ ರೂಪಾಂತರಿ ಆರ್ಭಟ 96ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ.

ಡೆಲ್ಟಾ ರೂಪಾಂತರವನ್ನು "ಡಬಲ್ ರೂಪಾಂತರಿತ" ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಎರಡು ರೂಪಾಂತರಗಳನ್ನು ಹೊಂದಿದ್ದು, ಇದು ಆಲ್ಫಾ ರೂಪಾಂತರಕ್ಕಿಂತ ಶೇಕಡಾ 55 ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು (ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಪತ್ತೆಯಾಗಿತ್ತು) ಮತ್ತು ಇದು ಜಾಗತಿಕವಾಗಿ ಕರೋನವೈರಸ್‌ನ ಪ್ರಬಲ ಮತ್ತು ಕಳವಳಕಾರಿ ರೂಪಾಂತರವಾಗಿದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ ಪ್ರಸ್ತುತ ಈ ರೂಪಾಂತರಿ ಸೋಂಕು ಟ್ಯುನೀಶಿಯಾ, ಮೊಜಾಂಬಿಕ್, ಉಗಾಂಡಾ, ನೈಜೀರಿಯಾ ಮತ್ತು ಮಲಾವಿ ಸೇರಿದಂತೆ 11 ಆಫ್ರಿಕಾ ದೇಶಗಳಲ್ಲಿ ವರದಿಯಾಗಿದೆ. ಅಲ್ಲದೇ ಇದೇ ವೈರಸ್ ಕಾರಣದಿಂದಾಗಿ ಆಫ್ರಿಕಾದಲ್ಲಿ ದಿನಕಳೆದಂತೆ ಸೋಂಕು ಪೀಡಿತರ ಸಾವುನೋವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಅವರು, 'ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೋನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆ.

ಹೀಗಾಗಿ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಮತ್ತು ತೀವ್ರ ಎಚ್ಚರಿಕೆ ವಹಿಸಬೇಕು. ವಿವಿಧ ದೇಶಗಳು ಅದರಲ್ಲೂ ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಕೂಡ ಸಲಹೆ ನೀಡಿದ್ದರು.

ರೂಪಾಂತರ ಸೋಂಕು ಕಾಣಿಸಿಕೊಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಎಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ.

ಸ್ಕಾಟ್ಲೆಂಡ್ನಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಯಲ್ಲಿ ಕೋವಿಡ್-19 ರ ಡೆಲ್ಟಾ ರೂಪಾಂತರದಿಂದ ಸೋಂಕಿತ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಹೆಚ್ಚಾಗಿದ್ದು, ಆಲ್ಫಾ ರೂಪಾಂತರಕ್ಕೆ ಹೋಲಿಕೆ ಮಾಡಿದರೆ ಡೆಲ್ಟಾ ರೂಪಾಂತರದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ಶೇ.85ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

English summary
Elated Sydneysiders celebrated the end of almost four months of coronavirus lockdown on Monday, putting behind them a period of "blood, sweat and no beers" in Australia's largest city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X