ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ ಕೊರೊನಾವೈರಸ್ ಲಸಿಕೆ ಪಡೆದ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿರ್ಬಂಧವಿಲ್ಲ

|
Google Oneindia Kannada News

ಸಿಡ್ನಿ, ಅಕ್ಟೋಬರ್ 15: "ಕೊರೊನಾವೈರಸ್ ವಿರುದ್ಧ ಎರಡೂ ಡೋಸ್ ಲಸಿಕೆ ಪಡೆದುಕೊಂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನವೆಂಬರ್ 1ರಿಂದ ಯಾವುದೇ ರೀತಿ ಕ್ವಾರೆಂಟೈನ್ ನಿರ್ಬಂಧ ಇರುವುದಿಲ್ಲ," ಎಂದು ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಡೊಮಿನಿಕ್ ಪೆರೊಟ್ಟೆಟ್ ಶುಕ್ರವಾರ ಹೇಳಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ 2020ರ ಮಾರ್ಚ್ ತಿಂಗಳಿನಿಂದಲೇ ಆಸ್ಟ್ರೇಲಿಯಾ ತನ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರ್ಬಂಧವನ್ನು ವಿಧಿಸಿತ್ತು. ತುರ್ತು ಅವಶ್ಯಕತೆಗಳನ್ನು ಹೊಂದಿದವರು, ದೇಶದ ಶಾಶ್ವತ ನಿವಾಸಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅದಾಗ್ಯೂ, ಎರಡು ವಾರಗಳ ಹೋಟೆಲ್ ಕ್ವಾರೆಂಟೈನ್ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿತ್ತು.

ಸಿಡ್ನಿಯಲ್ಲಿ 106 ದಿನಗಳ ಬಳಿಕ ಕೊನೆಗೂ ಕೊರೊನಾ ಲಾಕ್‌ಡೌನ್ ಅಂತ್ಯಸಿಡ್ನಿಯಲ್ಲಿ 106 ದಿನಗಳ ಬಳಿಕ ಕೊನೆಗೂ ಕೊರೊನಾ ಲಾಕ್‌ಡೌನ್ ಅಂತ್ಯ

"ನಾವು ಜನರನ್ನು ಮರಳಿ ಸ್ವಾಗತಿಸಲು ಬಯಸುತ್ತೇವೆ, ಸಾಂಕ್ರಾಮಿಕ ರೋಗವನ್ನು ರಾಷ್ಟ್ರದಿಂದ ಹೊರಹಾಕುತ್ತಿದ್ದೇವೆ. ನಾವು ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್ ಅನ್ನು ಜಗತ್ತಿಗೆ ತೆರೆಯುತ್ತಿದ್ದೇವೆ" ಎಂದು ಪೆರೋಟ್ಟೆಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Covid-19 Vaccine: Fully Vaccinated Travellers Quarantine Rules End in Sydney From November 1

ಜುಲೈ ತಿಂಗಳಿನಲ್ಲಿ ಪ್ರಸ್ತಾಪ:

ಆಸ್ಟ್ರೇಲಿಯಾದಲ್ಲಿ ಕೊರೊನಾವೈರಸ್ ಲಸಿಕೆಯ ಎರಡು ಡೋಸ್ ವಿತರಣೆ ಪ್ರಮಾಣವು ಶೇಕಡಾ 80ಕ್ಕೆ ತಲುಪಿದ ನಂತರದಲ್ಲಿ ದೇಶದ ಶಾಶ್ವತ ನಿವಾಸಿಗಳು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮುಕ್ತಗೊಳಿಸುವ ಬಗ್ಗೆ ಜುಲೈ ತಿಂಗಳಿನಲ್ಲೇ ಪ್ರಸ್ತಾಪಿಸಲಾಗಿತ್ತು. ಆಸ್ಟ್ರೇಲಿಯಾದಿಂದ ಬೇರೆ ರಾಷ್ಟ್ರಗಳಿಗೆ ಹೋಗಿರುವ ಹಾಗೂ ಜಾಗತಿಕ ಪ್ರವಾಸಿಗರು ಎರಡೂ ಡೋಸ್ ಲಸಿಕೆ ಪಡೆದುಕೊಂಡ ರಾಷ್ಟ್ರಗಳೊಂದಿಗೆ ಕ್ರಮೇಣವಾಗಿ ಪ್ರಮಾಣ ಪುನಾರಂಭಿಸಲು ಸಲಹೆ ನೀಡಲಾಗಿತ್ತು.

ಪ್ರತಿಕ್ರಿಯೆ ನೀಡಲು ಸಿಗದ ಪ್ರಧಾನಿ:

ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ ಪಡೆದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನವೆಂಬರ್ 1ರಿಂದ ಕ್ವಾರೆಂಟೈನ್ ನಿರ್ಬಂಧವಿಲ್ಲ ಎಂಬ ನ್ಯೂ ಸೌತ್ ವೇಲ್ಸ್ ಯೋಜನೆಯ ಬಗ್ಗೆ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರ ಕಚೇರಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಶೇ.80ರಷ್ಟು ಮಂದಿಗೆ 2 ಡೋಸ್ ಲಸಿಕೆ:

ನ್ಯೂ ಸೌತ್ ವೇಲ್ಸ್ ಜನಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳ ಪೈಕಿ ಶೇಕಡಾ 80ರಷ್ಟು ಜನರಿಗೆ ಈ ವಾರಾಂತ್ಯದಲ್ಲಿ ಪೂರ್ಣ ಲಸಿಕೆಯನ್ನು ನೀಡುವ ನಿರೀಕ್ಷೆಯಿದೆ. ಆದರೆ ದೇಶದ ಉಳಿದ ಭಾಗಗಳಲ್ಲಿ ಈ ಮಟ್ಟವನ್ನು ತಲುಪಲು ಕನಿಷ್ಠ ಕೆಲವು ವಾರಗಳಾದರೂ ಬೇಕಾಗುತ್ತದೆ.

ಕೊವಿಡ್-19 ಸೋಂಕಿತರ ಸಂಖ್ಯೆ ಇಳಿಮುಖ:

ನ್ಯೂ ಸೌತ್ ವೇಲ್ಸ್‌ನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಗುರುವಾರ ಕೊವಿಡ್-19 ಸೋಂಕಿತರ ಸಂಖ್ಯೆಯು 406 ರಿಂದ 399ಕ್ಕೆ ಇಳಿಕೆಯಾದ ಕಾರಣ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆಯುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಳೆದ ಸೆಪ್ಟೆಂಬರ್ ಆರಂಭದ ವೇಳೆ ರಾಜ್ಯದಲ್ಲಿ ಪ್ರತಿನಿತ್ಯ ಗರಿಷ್ಠ 1,599 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿತ್ತು.

ನೆರೆಯ ವಿಕ್ಟೋರಿಯಾ ರಾಜ್ಯವು 2,179 ಹೊಸ ಕೊವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ, ಮೆಲ್ಬೋರ್ನ್‌ನಲ್ಲಿ ಒಂದೇ ದಿನ 2,297 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಹಿಂದಿನ ದಾಖಲೆಗಳನ್ನು ಅವಲೋಕಿಸಿದಾಗ ಈ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ.

ಆಸ್ಟ್ರೇಲಿಯಾದಲ್ಲಿ ಭಯ ಹುಟ್ಟಿಸಿದ ಡೆಲ್ಟಾ ರೂಪಾಂತರ:

ಆಸ್ಟ್ರೇಲಿಯಾದಲ್ಲಿ ಈ ವರ್ಷಾಂತ್ಯಕ್ಕೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಬಹುಪಾಲು ಮುಕ್ತವಾಗಲಿದೆ ಎಂದು ಹೇಳಲಾಗಿತ್ತು. ಜೂನ್ ತಿಂಗಳ ಹೊತ್ತಿಗೆ ಆಗ್ನೇಯ ಭಾಗದಲ್ಲಿ ಡೆಲ್ಟಾ ರೂಪಾಂತರ ರೋಗಾಣು ಹರಡುವಿಕೆ ಹೆಚ್ಚಿದ ಹಿನ್ನೆಲೆ ಪರಿಸ್ಥಿತಿ ಕೈತಪ್ಪಿತ್ತು. ತದನಂತರದಲ್ಲಿ ಸಿಡ್ನಿ, ಮೆಲ್ಬರ್ನ್ ಹಾಗೂ ಕ್ಯಾನ್ಬೆರಾದಲ್ಲಿ ಒಂದು ತಿಂಗಳ ಅವಧಿಯ ಲಾಕ್‌ಡೌನ್ ಜಾರಿಗೊಳಿಸುವಂತೆ ಒತ್ತಾಯಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ ಕೊವಿಡ್-19 ಪ್ರಕರಣ:

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖ ಕಂಡಿದೆ. ಆಸ್ಟ್ರೇಲಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 2169 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 7,68,711ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ ಮಹಾಮಾರಿಗೆ 11,143 ಮಂದಿ ಪ್ರಾಣ ಬಿಟ್ಟಿದ್ದರೆ, 7,37,170 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ 20,398 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

English summary
Covid-19 Vaccine: Fully Vaccinated Travellers Quarantine Rules End in Sydney From November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X