ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮ

|
Google Oneindia Kannada News

ಸಿಡ್ನಿ, ನವೆಂಬರ್ 12: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರದೇಶದಲ್ಲಿ ಉಂಟಾಗಿರುವ ಭೀಕರ ಕಾಳ್ಗಿಚ್ಚು ಲಕ್ಷಾಂತರ ಹೆಕ್ಟೇರ್ ಕಾಡನ್ನು ಸುಟ್ಟುಹಾಕಿದೆ. ಘಟನೆಯಲ್ಲಿ ಕನಿಷ್ಠ ಮೂವರು ಬಲಿಯಾಗಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಪೂರ್ವ ಆಸ್ಟ್ರೇಲಿಯಾದಲ್ಲಿ ಬೃಹತ್ ಕಾಳ್ಗಿಚ್ಚನ್ನು ನಿಯಂತ್ರಿಸಿ ಭಾರಿ ಅನಾಹುತವನ್ನು ತಪ್ಪಿಸಲಾಗಿತ್ತು. ಆದರೆ ನ್ಯೂಸೌತ್ ವೇಲ್ಸ್‌ನಲ್ಲಿ ಕಾಳ್ಗಿಚ್ಚನ್ನು ತಡೆಯಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಬೀಸುತ್ತಿರುವ ಗಾಳಿ ವೇಗವಾಗಿ ಬೆಂಕಿಯನ್ನು ಹರಡುತ್ತಿದೆ.

ಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚುಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚು

2018ರಲ್ಲಿ ಕೂಡ ಇಲ್ಲಿ ಕಾಳ್ಗಿಚ್ಚು ಬಹುತೇಕ ಅರಣ್ಯವನ್ನು ಬಲಿತೆಗೆದುಕೊಂಡಿತ್ತು. ಮೃತಪಟ್ಟ ಮೂವರಲ್ಲಿ ಇಬ್ಬರು, ಬೆಂಕಿಯ ಕೆನ್ನಾಲಿಗೆಯ ನಡುವೆಯೇ ಕಾರನ್ನು ಓಡಿಸಿ ತಪ್ಪಿಸಿಕೊಳ್ಳುವ ದುಸ್ಸಾಹಸದಲ್ಲಿ ಜೀವ ಕಳೆದುಕೊಂಡಿದ್ದಾರೆ.

 Bushfires In Australia New South Wales Burn Millions Hectare

ನ್ಯೂಸೌತ್ ವೇಲ್ಸ್‌ನ ನೆರೆಯ ರಾಜ್ಯಗಳು ಮತ್ತು ನ್ಯೂಜಿಲೆಂಡ್‌ನ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಿಸುವ ಕಾರ್ಯಕ್ಕೆ ನೆರವಾಗಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನ ಇಡೀ ಪಟ್ಟಣಗಳಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ನೂರಾರು ಶಾಲೆಗಳನ್ನು ಮುಚ್ಚಲಾಗಿದೆ. 30 ಡಿಗ್ರಿ ಸೆಲ್ಸಿಯಸ್‌ಅನ್ನು ಮೀರಿದ ಉಷ್ಣಾಂಶ ಮತ್ತು ರಭಸದ ಗಾಳಿ ಬೆಂಕಿಯನ್ನು ಇನ್ನಷ್ಟು ಹರಡಿಸುವ ಭೀತಿ ಮೂಡಿಸಿದೆ.

ಬಂಡೀಪುರದಲ್ಲಿ ಮತ್ತೆ ಬೆಂಕಿ: ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮಬಂಡೀಪುರದಲ್ಲಿ ಮತ್ತೆ ಬೆಂಕಿ: ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭಸ್ಮ

ಸಿಡ್ನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಮಹಾ ದುರಂತ' ಘೋಷಿಸಿರುವ ನ್ಯೂಸೌತ್ ವೇಲ್ಸ್, ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದೆ. ಕ್ವೀನ್ಸ್‌ಲ್ಯಾಂಡ್‌ನ ಸುಮಾರು 50 ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಕ್ತ ನೀರಿನ ಲಭ್ಯತೆ ಕೊರತೆ ಎದುರಾಗಿದೆ.

ಇದು ದೇಶ ಕಂಡ ಅತ್ಯಂತ ಅಪಾಯಕಾರಿ ಕಾಳ್ಗಿಚ್ಚಿನ ವಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Bushfires in Australia's New South Wales spreading over millions of hectare forest. Three people reported died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X