ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗರೂ ನಾಡಲ್ಲಿ ಇಲಿಗಳ ಅಬ್ಬರ..! ಭಾರತದ ಬಳಿ ವಿಷಕ್ಕಾಗಿ ಆಸ್ಟ್ರೇಲಿಯಾ ಬೇಡಿಕೆ..!

|
Google Oneindia Kannada News

ಅಲ್ಲಿ ಕಾಡಿಗೆ ಬೆಂಕಿ ಬಿದ್ದು ಸುಮಾರು ತಿಂಗಳು ಇಡೀ ದೇಶ ಹೊತ್ತಿ ಉರಿದಿದ್ದು, ಆಮೇಲೆ ಅಲ್ಲಿ ಮಳೆ ಬಂದು ಪ್ರವಾಹದಲ್ಲಿ ಜನರ ಬದುಕು ಕೊಚ್ಚಿ ಹೋಯ್ತು. ಹಾವುಗಳು ಮನೆ ಸೇರಿ ಕಾಟ ಕೊಟ್ಟಿದ್ದೂ ಆಯ್ತು. ಇದೀಗ ಹೊಸ ಸಮಸ್ಯೆ ಶುರುವಾಗಿದೆ, ಇಲಿಗಳ ಸಾಮ್ರಾಜ್ಯವೇ ಅಲ್ಲಿಗೆ ದಾಳಿ ಇಟ್ಟಿದೆ. ಹಾಲ್, ಬಚ್ಚಲು, ಬೆಡ್‌ ರೂಂ ಅಷ್ಟೇ ಏಕೆ ಮನೆಯ ಮಾಳಿಗೆ ಮೇಲೂ ಇಲಿಗಳು ಅಟ್ಟಹಾಸ ಮೆರೆಯುತ್ತಿವೆ. ರೈತರ ಬೆಳೆ ಇಲಿಗಳ ಪಾಲಾಗಿ, ರೈತ ಸಮುದಾಯ ತತ್ತರಿಸಿ ಹೋಗಿದೆ.

ಅಂದಹಾಗೆ ಇದು ಆಸ್ಟ್ರೇಲಿಯಾದ ಪರಿಸ್ಥಿತಿ, ದುಃಸ್ಥಿತಿ ಅಥವಾ ಕರಾಳ ದಿನಗಳು. ಏಕೆಂದರೆ ಕಳೆದ 1 ವರ್ಷದಲ್ಲಿ ಆಸ್ಟ್ರೇಲಿಯಾ ಏನೆಲ್ಲಾ ಕಷ್ಟ ಅನುಭವಿಸಿಬಿಟ್ಟಿದೆ. ಶ್ರೀಮಂತ ರಾಷ್ಟ್ರದ ಹಣೆಪಟ್ಟಿ ಇದ್ದರೂ, ನಲುಗಿ ಹೋಗಿದೆ. ಕೊರೊನಾ ಅಬ್ಬರಕ್ಕೂ ಮೊದಲೇ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಅರ್ಧ ಭಾಗ ದೇಶವನ್ನು ಸುಟ್ಟು ಹಾಕಿತ್ತು.

ಇದು ಮುಗಿದು ಇನ್ನೇನು ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ ಪ್ರವಾಹ. ಇದೆಲ್ಲಾ ಮುಗಿದ ತಕ್ಷಣ ಇಲಿಗಳು ದಾಳಿ ಇಟ್ಟಿವೆ. ಅದು ಎಷ್ಟರಮಟ್ಟಿಗೆ ಎಂದರೆ ಕೋಟ್ಯಂತರ ಇಲಿಗಳು ಈ ದೇಶವನ್ನ ಕಾಡಲು ಆರಂಭಿಸಿವೆ. ಹೀಗಾಗಿ ಆಸ್ಟ್ರೇಲಿಯಾದ ಪೂರ್ವ ಭಾಗ ತತ್ತರಿಸಿ ಹೋಗಿದೆ.

ಎಲ್ಲೆಲ್ಲೂ ಇಲಿಗಳ ಅಟ್ಟಹಾಸ..!

ಎಲ್ಲೆಲ್ಲೂ ಇಲಿಗಳ ಅಟ್ಟಹಾಸ..!

ಇಂಟರ್ನೆಟ್‌ನಲ್ಲಿ ಈಗ ಆಸ್ಟ್ರೇಲಿಯಾದ ಇಲಿಗಳದ್ದೇ ಸುದ್ದಿ. ಎಲ್ಲಿ ನೋಡಿದರೂ ಇಲಿಗಳೇ ಅಬ್ಬರಿಸುತ್ತಿರುವ ದ್ವೀಪರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಮನೆ, ಜಮೀನು, ಗೋದಾಮು, ಕಾರು, ಬೈಕು, ಇದೆಲ್ಲಾ ಬಿಡಿ ಕಾಡುಗಳಿಗೂ ನುಗ್ಗಿ ದಾಳಿ ಮಾಡುತ್ತಿವೆ ಇಲಿಗಳು. ಸುಮ್ಮನೆ ಮನೆ ಅಕ್ಕಪಕ್ಕ ಬಿದ್ದಿದ್ದ ಹಳೆಯ ವಸ್ತುಗಳನ್ನ ತೆಗೆದರೆ ಸಾವಿರಾರು ಇಲಿಗಳ ದರ್ಶನವಾಗುತ್ತದೆ. ಇದರಿಂದ ಬೆಚ್ಚಿಬಿದ್ದಿರುವ ಆಸ್ಟ್ರೇಲಿಯಾ ಜನ, ಪ್ಲೀಸ್ ನಮಗೆ ಇಲಿಗಳ ಕಾಟದಿಂದ ಮುಕ್ತಿ ಕೊಡಿಸಿ ಅಂತಾ ಸರ್ಕಾರದ ಬಳಿ ಅಂಗಲಾಚುತ್ತಿದ್ದಾರೆ.

ಪ್ಲೇಗ್ ಭೀತಿಯಲ್ಲಿ ಆಸ್ಟ್ರೇಲಿಯಾ..?

ಪ್ಲೇಗ್ ಭೀತಿಯಲ್ಲಿ ಆಸ್ಟ್ರೇಲಿಯಾ..?

ಇಲಿಗಳಿಂದ ಮುಖ್ಯವಾಗಿ ತಗುಲುವ ರೋಗವೆಂದರೆ ಪ್ಲೇಗ್. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಪ್ಲೇಗ್ ಬಗ್ಗೆ ಸಣ್ಣ ವಾರ್ನಿಂಗ್ ಕೂಡ ಸಿಕ್ಕಿದೆ. ಇಲಿಗಳಿಂದ ತಗುಲುವ ಇತರ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಇಂತಹ ಕೆಲ ಪ್ರಕರಣಗಳು ವರದಿಯಾಗಿವೆ. ತಕ್ಷಣ ಅಲರ್ಟ್ ಆಗಿರುವ ಆಸ್ಟ್ರೇಲಿಯಾ ಸರ್ಕಾರ ರೈತರು ಮತ್ತು ನಾಗರಿಕರ ನೆರವಿಗಾಗಿ ಸುಮಾರು 50 ಮಿಲಿಯನ್ ಡಾಲರ್ ಪರಿಹಾರ ಘೋಷಣೆ ಮಾಡಿದೆ. ಮತ್ತೊಂದು ಕಡೆ ಇಲಿಗಳ ಸಾಮ್ರಾಜ್ಯಕ್ಕೆ ಒಂದು ಗತಿ ಕಾಣಿಸಲು ದೊಡ್ಡ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಭಾರತದ ಸಹಾಯಕ್ಕೆ ಮೊರೆಯಿಟ್ಟಿದೆ ಶ್ರೀಮಂತ ರಾಷ್ಟ್ರ ಆಸ್ಟ್ರೇಲಿಯಾ.

ವಿಷಕ್ಕಾಗಿ ಭಾರತಕ್ಕೆ ಮನವಿ..!

ವಿಷಕ್ಕಾಗಿ ಭಾರತಕ್ಕೆ ಮನವಿ..!

ಅತ್ತ ಕೊರೊನಾ ಕಂಟ್ರೋಲ್ ಮಾಡಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾಗೆ ಪ್ರಾಕೃತಿಕ ವಿಕೋಪಗಳು ಸವಾಲಾಗಿವೆ. ಇದರ ನಡುವೆ ಇಲಿಗಳ ಅಟ್ಟಹಾಸದಿಂದ ಪ್ಲೇಗ್ ಹಬ್ಬಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗೋದಂತೂ ಪಕ್ಕಾ. ಹೀಗಾಗಿಯೇ ಸುಮಾರು 5 ದಶಕದಲ್ಲಿ ಕಾಣದ ಭೀಕರ ಇಲಿ ದಾಳಿಯಿಂದ ಬಚಾವ್ ಆಗಲು ಆಸ್ಟ್ರೇಲಿಯಾ ಭಾರತದ ಬಳಿ ವಿಷಕ್ಕಾಗಿ ಮೊರೆ ಇಟ್ಟಿದೆ. ನ್ಯೂ ಸೌತ್‌ ವೇಲ್ಸ್‌ನ ಸರ್ಕಾರ ಭಾರತದ ಬಳಿ 5000 ಲೀಟರ್‌ ನಿಷೇ​ಧಿತ ಬ್ರೊಮಾಡಿಯೋ​ಲೋನ್‌ ವಿಷಕ್ಕಾಗಿ ಬೇಡಿಕೆ ಸಲ್ಲಿಸಿದೆ. ಅಕಸ್ಮಾತ್ ಇಲಿಗಳ ನಿಯಂತ್ರಣ ಸಾಧ್ಯ ಆಗದೇ ಇದ್ದರೆ ವಿಷ ಇಟ್ಟು ಸಾಯಿಸಲು ಸಿದ್ಧತೆ ನಡೆದಿದೆ.

ಮಳೆಯಿಂದ ಎದುರಾಯ್ತಾ ಸಮಸ್ಯೆ..?

ಮಳೆಯಿಂದ ಎದುರಾಯ್ತಾ ಸಮಸ್ಯೆ..?

ಆಸ್ಟ್ರೇಲಿಯಾ ಮರುಭೂಮಿ, ಕೆಲವು ಭಾಗಗಳಲ್ಲಿ ಮಾತ್ರ ಹಸಿರು ವಲಯ ಕಾಣುತ್ತದೆ. ಹೀಗಾಗಿಯೇ ಅಲ್ಲಿನ ಮಳೆ ಪ್ರಮಾಣ ತೀರಾ ಕಮ್ಮಿ. ಆದರೆ ಈ ಬಾರಿ ದುರಾದೃಷ್ಟಕ್ಕೆ ಎಂಬಂತೆ ಮಳೆ ಸುರಿದಿದೆ. ಅದು ಅಷ್ಟೋ, ಇಷ್ಟೋ ಅಲ್ಲ. 50 ವರ್ಷಗಳಲ್ಲೇ ಸುರಿಯದಷ್ಟು ಮಳೆ ದಿಢೀರನೆ ಸುರಿದಿದೆ. ಹೀಗೆ ಕಳೆದ 5-10 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದಂತೆ ಅಲ್ಲಿನ ರೈತರು ಖುಷಿಯಲ್ಲಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದುಬಿಟ್ಟರು. ಇದೇ ಎಡವಟ್ಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅರೆ ಬೆಳೆ ಹೆಚ್ಚಾದರೆ ಇಲಿ ಸಂತತಿ ಹೆಚ್ಚಳಕ್ಕೆ ಕಾರಣವೇನು ಎನ್ನಬೇಡಿ..! ಏಕೆಂದರೆ ಆಸ್ಟ್ರೇಲಿಯಾದ ಇಲಿಗಳು ಇದೇ ರೈತರ ಬೆಳೆಗಳನ್ನು ನಂಬಿ ಬದುಕುತ್ತಿದ್ದವು, ಇದೀಗ ಭಾರಿ ಪ್ರಮಾಣದಲ್ಲಿ ಬೆಳೆ ಬೆಳೆದು ಅದನ್ನ ಸಂಗ್ರಹಣೆ ಮಾಡಿದ ಹಿನ್ನೆಲೆಯಲ್ಲಿ ಇಲಿಗಳ ಸಂತತಿ ಊಹೆಗೂ ನಿಲುಕದಷ್ಟು ಬೆಳೆದಿದೆ.

ಕೊಲೆ ಮಾಡಲು ಸಿದ್ಧತೆ..!

ಇಲಿಗಳನ್ನ ನಾಶ ಮಾಡಲು ಸ್ಥಳೀಯರು ತಮ್ಮದೇ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಒಂದು ಕಡೆ ಬಕೇಟಲ್ಲಿ ನೀರು ತುಂಬಿ, ಅದರಲ್ಲಿ ಇಲಿಗಳನ್ನ ಕೆಡವಿ ಸಾಯಿಸುತ್ತಿದ್ದಾರೆ. ಇನ್ನೊಂದು ಕಡೆ ತಮ್ಮ ಬಳಿ ಲಭ್ಯವಿರುವ ಕೆಲ ವಿಷಕಾರಿ ರಾಸಾಯನಿಕ ಹಾಕಿ ಕೊಲ್ಲುತ್ತಿದ್ದಾರೆ. ಅರೆ ಇಷ್ಟಕ್ಕೆಲ್ಲಾ ಸಾಯೋದಕ್ಕೆ ಅಲ್ಲಿ ಸಾವಿರದ ಲೆಕ್ಕದಲ್ಲಿ ಇಲಿ ಸಾಮ್ರಾಜ್ಯ ದಾಳಿ ಮಾಡಿಲ್ಲ. ಬದಲಾಗಿ ಆಸ್ಟ್ರೇಲಿಯಾ ಮೇಲೆ ದಾಳಿ ಮಾಡಿರುವುದು ಕೋಟ್ಯಂತರ ಇಲಿಗಳು. ಹೀಗಾಗಿ ಇಲಿಗಳನ್ನು ಸಾಮೂಹಿಕವಾಗಿ ಮಟ್ಟ ಹಾಕಲು ಸಿದ್ಧತೆ ನಡೆದಿದೆ. ಆದರೆ ಅಂದುಕೊಂಡಷ್ಟು ಸುಲಭದ ಕೆಲಸ ಇದಲ್ಲ ಎಂಬುದು ಕೂಡ ಆಸಿಸ್ ಸರ್ಕಾರಕ್ಕೆ ನೆನಪಿದೆ.

English summary
Australian State New South Wales Wants Banned Poison from India to control Rats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X