• search
  • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಹೆಚ್ಚಳ: ಪ್ರಜೆಗಳ ಬಳಿ ಕ್ಷಮೆ ಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

|
Google Oneindia Kannada News

ಸಿಡ್ನಿ, ಜುಲೈ 22: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಲಸಿಕೆ ವಿತರಣೆ ಪ್ರಮಾಣ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಕೊರೊನಾ ಲಸಿಕೆ ವಿತರಣೆ ಪ್ರಮಾಣ ಹೆಚ್ಚು ಮಾಡಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೇಳಿದ್ದಾರೆ.

ಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿ

ಲಸಿಕಾ ದರ ಶೇ.11ರಷ್ಟಿದೆ ಇದು ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ್ದಾಗಿದೆ. ಈ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ವಿತರಣೆ ಕುರಿತು ಹೊಂದಿದ್ದ ಗುರಿಯನ್ನು ತಲುಪಲು ನಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಕೇಳಿದ್ದಾರೆ.

ಲಸಿಕೆ ವಿತರಣೆಯ ಜವಾಬ್ದಾರಿಯನ್ನು ನಾನು ಹೊರುತ್ತೇನೆ, ಹಾಗೆಯೇ ನಾವು ಅನುಭವಿಸುತ್ತಿರುವ ಸವಾಲನ್ನು ಎದುರಿಸುವ ಜವಾಬ್ದಾರಿಯನ್ನು ಕೂಡ ನಾನೇ ಹೊರುತ್ತೇನೆ ಎಂದರು.

ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಸಿಡ್ನಿಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಈ ಕುರಿತು ಸ್ಕಾಟ್ ಮಾರಿಸನ್ ಮಾತನಾಡಿದ್ದಾರೆ. ಸಿಡ್ನಿ ಲಾಕ್‌ಡೌನ್ ಮಾಡಿ ಸುಮಾರು ಒಂದು ತಿಂಗಳು ಕಳೆಯುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸುವ ಕುರಿತು ಚರ್ಚೆ ನಡೆಸಿದ್ದಾರೆ.

ಎಲ್ಲರೂ ಕೊರೊನಾ ಲಸಿಕೆ ಪಡೆಯುವರೆಗೂ ಹಲವು ನಿರ್ಬಂಧಗಳನ್ನು ಮುಂದುವರೆಸಲಾಗುವುದು, ಆಸ್ಟ್ರೇಲಿಯಾದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯನ್ನು ನೀಡಲಾಗುತ್ತಿದೆ.

ಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದೀಗ ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್‌ನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ 31,400 ಸೋಂಕು ಪ್ರಕರಣಗಳು ದಾಖಲಾಗಿದ್ದು, 912 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

'ದಯವಿಟ್ಟು ಮನೆಯಿಂದ ಹೊರ ಬರಬೇಡಿ': ಸಿಡ್ನಿಯಲ್ಲಿ ಇದೆಂಥಾ ಪರಿಸ್ಥಿತಿ?'ದಯವಿಟ್ಟು ಮನೆಯಿಂದ ಹೊರ ಬರಬೇಡಿ': ಸಿಡ್ನಿಯಲ್ಲಿ ಇದೆಂಥಾ ಪರಿಸ್ಥಿತಿ?

ಹೀಗಾಗಿ ಈಗಾಗಲೇ ಸಿಡ್ನಿಯಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಇದರ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಕೂಡ ಲಾಕ್ಡೌನ್ ಜಾರಿ ಮಾಡಲಾಗಿದೆ. ಮೆಲ್ಬರ್ನ್ ನಗರದ ಸುಮಾರು 1.2 ಕೋಟಿ ಜನರಿಗೆ ಮನೆ ಬಿಟ್ಟು ಹೊರಬರದಂತೆ ಆದೇಶ ಹೊರಡಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಗಣನೀಯ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಪರಿಣಾಮ ಕ್ರಮೇಣ ಆಸ್ಟ್ರೇಲಿಯಾ ಲಾಕ್ ಡೌನ್ ಮುಷ್ಟಿಗೆ ಸಿಲುಕುತ್ತಿದೆ. ಕೋವಿಡ್-19ರ ಡೆಲ್ಟಾ ರೂಪಾಂತರ ತಳಿಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

English summary
Australia's prime minister on Thursday apologised for the country's glacial vaccine rollout, as Sydney recorded a record jump in new coronavirus infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X