ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಫ್ ರೇಟ್, ಚೀಪ್ ರೇಟ್..! ಪ್ರವಾಸಿಗರಿಗೆ ಭರ್ಜರಿ ಆಫರ್!

|
Google Oneindia Kannada News

ಕೊರೊನಾ ಕೂಪದಲ್ಲಿ ಬಿದ್ದು ಇಡೀ ಜಗತ್ತು ನಲುಗಿ ಹೋಗಿದೆ. ಅದರಲ್ಲೂ ಪ್ರಮುಖವಾಗಿ ಪ್ರವಾಸೋದ್ಯಮ ಕ್ಷೇತ್ರ ಸಾಕಷ್ಟು ಪೆಟ್ಟು ತಿಂದಿದೆ. ಇನ್ನು ಜಗತ್ತಿನಲ್ಲೇ ಅತಿಹೆಚ್ಚು ಬೀಚ್‌ಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಕೂಡ ಪ್ರವಾಸೋದ್ಯಮ ನೆಲಕಚ್ಚಿದೆ. ಹೀಗಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಆಸಿಸ್ ಸರ್ಕಾರ ಸುಮಾರು 8500 ಕೋಟಿ ರೂಪಾಯಿ ಮೊತ್ತದ ಯೋಜನೆ ಕೈಗೊಂಡಿದೆ.

ಇದರಲ್ಲಿ ಆಸ್ಟ್ರೇಲಿಯಾದ ಹಲವಾರು ಪ್ರವಾಸಿ ತಾಣಗಳಿಗೆ ಅರ್ಧ ಮೊತ್ತದ ಅಂದರೆ ಹಾಫ್ ರೇಟ್ ಫ್ಲೈಟ್ ಟಿಕೆಟ್ ವಿತರಣೆಗೆ ಮುಂದಾಗಿದೆ. ಆದರೆ ಇದು ವಿದೇಶಿ ಪ್ರಜೆಗಳಿಗೆ ಲಭ್ಯವಿಲ್ಲ. ಬದಲಾಗಿ ಸ್ಥಳೀಯರಿಗೆ ಈ ಸೌಲಭ್ಯ ಸಿಗಲಿದೆ.

ಆಸ್ಟ್ರೇಲಿಯಾದಲ್ಲಿ ಕೊರೊನಾ ಅಷ್ಟಾಗಿ ಹರಡದೇ ಇದ್ದರೂ ಅಲ್ಲಿ ಭಾರಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿತ್ತು. ಹಾಗೇ ಪ್ರಜೆಗಳಲ್ಲೂ ಜಾಗೃತಿ ಮೂಡಿಸಲಾಗಿತ್ತು. ಹೀಗಾಗಿ ಸ್ಥಳೀಯರು ಪ್ರವಾಸಿ ತಾಣಗಳಿಂದ ದೂರವೇ ಉಳಿದಿದ್ದರು. ಇದರಿಂದ ಸ್ಥಳೀಯ ವ್ಯಾಪಾರ ವಹಿವಾಟಿಗೆ ಭಾರಿ ತೊಂದರೆ ಉಂಟಾಗಿತ್ತು. ಅದನ್ನ ಸರಿಪಡಿಸಲು ಆಸಿಸ್ ಸರ್ಕಾರ ಈಗ 8500 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಿದೆ.

ಆಸ್ಟ್ರೇಲಿಯಾದಲ್ಲಿ 10 ಸಾವಿರ ಬೀಚ್‌ಗಳು..!

ಆಸ್ಟ್ರೇಲಿಯಾದಲ್ಲಿ 10 ಸಾವಿರ ಬೀಚ್‌ಗಳು..!

ಜಗತ್ತಿನ ಪಾಲಿಗೆ ಆಸ್ಟ್ರೇಲಿಯಾ ಬೀಚ್‌ಗಳ ತವರು. ಏಕೆಂದರೆ ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗದಷ್ಟು ಬೀಚ್‌ಗಳು ಆಸ್ಟ್ರೇಲಿಯಾದಲ್ಲಿವೆ. ಸುಮಾರು 10 ಸಾವಿರಕ್ಕೂ ಹೆಚ್ಚು ಬೀಚ್‌ಗಳಿಗೆ ಆಸ್ಟ್ರೇಲಿಯಾ ತವರಾಗಿದೆ. ಈ ಕಾರಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಸಾಹಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇರುತ್ತಿತ್ತು. ಆದ್ರೆ ಕೊರೊನಾ ಸೋಂಕು ಅಪ್ಪಳಿಸಿದ ಬಳಿಕ ಪ್ರವಾಸಿಗರೇ ಇಲ್ಲದೆ ಆಸ್ಟ್ರೇಲಿಯಾದ ಪ್ರವಾಸೋದ್ಯಮ ನರಳುತ್ತಿದೆ. ಹೀಗಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ಲೋಕಲ್ ಟೂರಿಸ್ಟ್‌ಗಳು ಕೂಡ ಹೊರಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಆದರೆ ಇದನ್ನೆಲ್ಲಾ ಸರಿದಾರಿಗೆ ತರಲು ಆಸಿಸ್ ಸರ್ಕಾರ ಮುಂದಾಗಿದೆ.

ಆಸ್ಟ್ರೇಲಿಯಾದಲ್ಲಿ 29 ಸಾವಿರ ಕೇಸ್..!

ಆಸ್ಟ್ರೇಲಿಯಾದಲ್ಲಿ 29 ಸಾವಿರ ಕೇಸ್..!

ಅದೆಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ಆಸ್ಟ್ರೇಲಿಯಾದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬಿದೆ. ಈವರೆಗೂ 29 ಸಾವಿರ ಕೇಸ್‌ಗಳು ಪತ್ತೆಯಾಗಿದ್ದರೆ, 900ಕ್ಕೂ ಹೆಚ್ಚು ಜನ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿಯೇ ಸಾಕಷ್ಟು ನಿಯಮಗಳನ್ನ ಹೇರಲಾಗಿತ್ತು. ಜನರು ಪ್ರವಾಸಿ ತಾಣಗಳಲ್ಲಿ ಸೇರದಂತೆ ತಡೆಯಲು ಈ ಮೊದಲಿಗೆ ಆಸ್ಟ್ರೇಲಿಯಾ ಸರ್ಕಾರ ಸಾಕಷ್ಟು ನಿಯಮ ಜಾರಿಗೆತಂದಿತ್ತು. ಆದರೆ ಅದೇ ನಿಯಮಗಳು ವ್ಯತಿರಿಕ್ತ ಪರಿಣಾಮ ಬೀರಿವೆ. ಹೀಗಾಗಿ ನಿಯಮ ಸಡಿಲಗೊಳಿಸಿ, ಪ್ರವಾಸಿಗರಿಗೆ ಪ್ರೋತ್ಸಾಹ ನೀಡಲು ವಿಮಾನ ಟಿಕೆಟ್‌ಗಳಲ್ಲೂ ಭಾರಿ ವಿನಾಯಿತಿ ಘೋಷಿಸಿದೆ ಆಸ್ಟ್ರೇಲಿಯಾ ಸರ್ಕಾರ.

ಆರ್ಥಿಕ ಕುಸಿತವೂ ಕಾರಣ..?

ಆರ್ಥಿಕ ಕುಸಿತವೂ ಕಾರಣ..?

ಜಗತ್ತಿನ ಇತರ ರಾಷ್ಟ್ರಗಳಲ್ಲಿ ಎದುರಾದಂತೆ ಆರ್ಥಿಕ ಕುಸಿತ ಕೂಡ ಆಸ್ಟ್ರೇಲಿಯಾ ಟೂರಿಸಂಗೆ ಪೆಟ್ಟುಕೊಟ್ಟಿದೆ ಎಂಬುದು ತಜ್ಞರ ವಾದ. ಈಗಾಗಲೇ ಹಲವರು ಕೊರೊನಾ ಬಳಿಕ ಕೆಲಸ ಕಳೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ವರ್ಷ ಸಂಭವಿಸಿದ್ದ ಭೀಕರ ಕಾಡ್ಗಿಚ್ಚಿನ ಪಾತ್ರವೂ ಪ್ರವಾಸೋದ್ಯಮ ಬೀಳುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿಯೇ ಒಂದು ಕಾಲದಲ್ಲಿ ಪ್ರವಾಸಿಗರ ಸ್ವರ್ಗವಾಗಿದ್ದ ದೇಶದಲ್ಲಿ ಈಗ ಪ್ರವಾಸಿಗರನ್ನು ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಆದರೆ ಆಸಿಸ್ ಸರ್ಕಾರ ಕೈಗೊಂಡಿರುವ ಯೋಜನೆ ಅದೆಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಕಾಡ್ಗಿಚ್ಚು ಎಲ್ಲವನ್ನೂ ನಾಶ ಮಾಡಿತ್ತು

ಕಾಡ್ಗಿಚ್ಚು ಎಲ್ಲವನ್ನೂ ನಾಶ ಮಾಡಿತ್ತು

ಆಸ್ಟ್ರೇಲಿಯಾದಲ್ಲಿ 2019 ಕೊನೆಯಲ್ಲಿ ಹಬ್ಬಿದ್ದ ಕಾಡ್ಗಿಚ್ಚು ಸುಮಾರು 6 ತಿಂಗಳ ಕಾಲ ಸತತ ಹೊತ್ತಿ ಉರಿದಿತ್ತು. ಹೀಗೆ ಹತ್ತಾರು ಲಕ್ಷ ಎಕರೆ ಕಾಡು ಭಸ್ಮವಾಗಿತ್ತು. ಸಾವಿರಾರು ಮನೆಗಳು ಸುಟ್ಟು ಹೋದವು. ಲಕ್ಷಾಂತರ ಜನ ಬೀದಿಪಾಲಾದರು. ಕೋಟಿ ಒಡೆಯನು ಕೂಡ ಕಾಡ್ಗಿಚ್ಚಿನ ಅಬ್ಬರದಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ. ಇಂತಹ ಪರಿಸ್ಥಿತಿಯಲ್ಲೇ ಕೊರೊನಾ ಬೇರೆ ಬಂದು ಅಪ್ಪಳಿಸಿತ್ತು. ಹೀಗೆ ಆಸ್ಟ್ರೇಲಿಯಾ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿ ಹೋಗಿದೆ. ಇದರ ಪ್ರಭಾವ ಸಾಮಾನ್ಯವಾಗಿ ಪ್ರವಾಸೋದ್ಯಮದ ಮೇಲೂ ಬೀರಿದೆ ಎಂಬುದು ತಜ್ಞರ ಅಭಿಪ್ರಾಯ.

English summary
Australian government announces package to boost local tourism with 50% discount for several tourist spots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X