ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಉಳಿಸಲು ಸಾವಿರಾರು ಒಂಟೆಗಳ ಹತ್ಯೆ: ಆಸ್ಟ್ರೇಲಿಯಾದ ಆಘಾತಕಾರಿ ನಿರ್ಧಾರ

|
Google Oneindia Kannada News

ಸಿಡ್ನಿ, ಜನವರಿ 8: ಕಾಳ್ಗಿಚ್ಚು ತೀವ್ರವಾಗಿ ವ್ಯಾಪಿಸಿರುವ ಆಸ್ಟ್ರೇಲಿಯಾದಲ್ಲಿ ಅಗ್ನಿಯ ಅಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ಕೈಗೂಡುತ್ತಿಲ್ಲ. ಬೆಂಕಿಯ ಆರ್ಭಟಕ್ಕೆ ಈಗಾಗಲೇ ಸುಮಾರು 480 ಮಿಲಿಯನ್ ಪ್ರಾಣಿಗಳು ಸುಟ್ಟು ಕರಕಲಾಗಿವೆ. ಈ ನಡುವೆ ಆಸ್ಟ್ರೇಲಿಯಾ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದೆ. ನೀರು ಉಳಿಸಲು ಒಂಟೆಗಳನ್ನು ಕೊಲ್ಲಲು ಮುಂದಾಗಿದೆ.

ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಸಾವಿರಾರು ಒಂಟೆಗಳನ್ನು ಸಾಯಿಸುವ ಐದು ದಿನಗಳ ಕಾರ್ಯಾಚರಣೆಯನ್ನು ಆಸ್ಟ್ರೇಲಿಯಾ ಅಧಿಕಾರಿಗಳು ಆರಂಭಿಸಿದ್ದಾರೆ. ಬುಧವಾರ ಈ ಐದು ದಿನಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಸುಮಾರು 10,000 ಒಂಟೆಗಳನ್ನು ಸಾಯಿಸುವ ಕಾರ್ಯಕ್ಕೆ ಸರ್ಕಾರ ಹೆಲಿಕಾಪ್ಟರ್‌ಗಳನ್ನು ಕಳುಹಿಸಲಿದೆ.

ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟ

ಒಂಟೆ ಹತ್ಯೆ ಕಾರ್ಯಾಚರಣೆಯು ಸುಮಾರು 2,300 ಮೂಲ ನಿವಾಸಿಗಳು ವಾಸಿಸುತ್ತಿರುವ ಎಪಿವೈ ಲ್ಯಾಂಡ್ಸ್ ಎಂಬಲ್ಲಿ ಮೊದಲು ಆರಂಭವಾಗಿದೆ. ಈ ಪ್ರದೇಶದಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮೀಣ ಸಮುದಾಯದ ಸ್ಥಳಗಳಲ್ಲಿ ತುಂಬಿಹೋಗಿವೆ. ಒಂಟೆಗಳಿಂದಾಗಿ ಅವರ ಆಹಾರ ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆಯುಂಟಾಗಿದೆ. ಅಲ್ಲದೆ ಅವರ ಮೂಲಸೌಕರ್ಯ ವ್ಯವಸ್ಥೆಗಳಿಗೆ ಅವು ಹಾನಿಮಾಡುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂಟೆಗಳಿಂದ ಅಪಾರ ಹಾನಿ

ಒಂಟೆಗಳಿಂದ ಅಪಾರ ಹಾನಿ

ಎಪಿವೈ ಲ್ಯಾಂಡ್ಸ್ ಮೊದಲೇ ಬರಪೀಡಿತ ಪ್ರದೇಶವಾಗಿದ್ದು, ಒಂಟೆಗಳ ಗುಂಪಿನಿಂದ ಇಲ್ಲಿನ ಅಬೋರಿಜಿನಲ್ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿ ಬಿಸಿಲ ಝಳ ತೀವ್ರವಾಗಿದ್ದು, ನೀರಿನ ಕೊರತೆಯಿದೆ. ಈ ನಡುವೆ ಒಂಟೆಗಳ ಹಾವಳಿ ವಿಪರೀತವಾಗಿದೆ. ಬೇಲಿಗಳನ್ನು ಮುರಿದು ಮನೆಗಳಿಗೆ ನುಗ್ಗಲು ಪ್ರಯತ್ನಿಸುತ್ತಿವೆ. ಹವಾ ನಿಯಂತ್ರಣ ಸಾಧಕಗಳಿಂದ ನೀರನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ. ಹೀಗಾಗಿ ಒಂಟೆಗಳನ್ನು ಕೊಂದರೆ ನೀರಿನ ಬಳಕೆ ಕಡಿಮೆಯಾಗುವುದರ ಜತೆಗೆ, ಈ ಪ್ರದೇಶಗಳಲ್ಲಿನ ಜನರಿಗೆ ಮುಖ್ಯ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿವರಿಸಿದ್ದಾರೆ.

ವೃತ್ತಿಪರ ಶೂಟರ್‌ಗಳು

ವೃತ್ತಿಪರ ಶೂಟರ್‌ಗಳು

ಹೆಲಿಕಾಪ್ಟರ್‌ನಲ್ಲಿ ತೆರಳಲಿರುವ ವೃತ್ತಿಪರ ಶೂಟರ್‌ಗಳು ಒಂಟೆಗಳಿಗೆ ಗುಂಡಿಕ್ಕಿ ಸಾಯಿಸಲಿದ್ದಾರೆ. ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿ ಕಾಳ್ಗಿಚ್ಚು ಹರಡಲು ಆರಂಭವಾದ ಸಂದರ್ಭದಲ್ಲಿಯೇ ಒಂಟೆಗಳನ್ನು ಸಾಯಿಸುವ ಬಗ್ಗೆ ಚರ್ಚೆ ನಡೆದಿತ್ತು. ಜಗತ್ತಿನಲ್ಲಿಯೇ ಅತಿ ಹೆಚ್ಚು ಒಂಟೆಗಳು ಆಸ್ಟ್ರೇಲಿಯಾದಲ್ಲಿವೆ. ಆಸ್ಟ್ರೇಲಿಯಾದ ಮರುಭೂಮಿಗಳಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಒಂಟೆಗಳಿವೆ.

ಕಾಳ್ಗಿಚ್ಚುಕಾಳ್ಗಿಚ್ಚು

ಜನರೇ ಬೆಂಕಿ ಹಚ್ಚಿದರೇ?

ಜನರೇ ಬೆಂಕಿ ಹಚ್ಚಿದರೇ?

ಅಧಿಕ ತಾಪಮಾನ ಮತ್ತು ನೀರಿನ ಕೊರತೆಯಿಂದಾಗಿ ಕಾಳ್ಗಿಚ್ಚು ಹರಡಿದೆ ಎನ್ನಲಾಗಿದ್ದರೂ, ಈ ಅವಘಡದ ಹಿಂದೆ ಕಿಡಿಗೇಡಿಗಳ ಕೈವಾಡ ಇದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಕನಿಷ್ಠ 24 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ. 8ರಿಂದಲೂ ನಡೆದ ಕಾಳ್ಗಿಚ್ಚಿನ ಅವಾಂತರಕ್ಕೆ ಸಂಬಂಧಿಸಿದಂತೆ ನ್ಯೂ ಸೌತ್‌ ವೇಲ್ಸ್‌ ಪೊಲೀಸರು ಸುಮಾರು 183 ಮಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಇವರಲ್ಲಿ 40 ಮಂದಿ ಅಪ್ರಾಪ್ತ ವಯಸ್ಸಿನವರಿದ್ದಾರೆ. 53 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ. 47 ಮಂದಿ ವಿರುದ್ಧ ಸಿಗರೇಟ್ ಅಥವಾ ಬೆಂಕಿಪೊಟ್ಟಣ ಎಸೆದ ಆರೋಪ ದಾಖಲಿಸಲಾಗಿದೆ.

ಪ್ರತಿಭಟನೆಗೆ ಪೊಲೀಸರ ಆಕ್ಷೇಪ

ಪ್ರತಿಭಟನೆಗೆ ಪೊಲೀಸರ ಆಕ್ಷೇಪ

ಕಾಳ್ಗಿಚ್ಚಿನ ಆತಂಕದ ನಡುವೆಯೇ ತಾಪಮಾನ ಏರಿಕೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿದ್ದು, ಈ ಪ್ರತಿಭಟನೆಗಳನ್ನು ಕೈಬಿಡುವಂತೆ ಪೊಲೀಸರು ಸೂಚಿಸಿದ್ದಾರೆ. ಪ್ರತಿಭಟನೆ ನಡೆಸುವುದು ಜನರ ಹಕ್ಕು. ಆದರೆ ಬೆಂಕಿಯ ಜ್ವಾಲೆಗಳು ಕಾಡಿನಿಂದ ಪಟ್ಟಣಗಳನ್ನೂ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯಗಳ ರಕ್ಷಣೆಗೆ ಪೊಲೀಸರನ್ನು ನಿಯೋಜಿಸುವುದು ನಮ್ಮ ಕರ್ತವ್ಯ. ಪ್ರತಿಭಟನೆಗಳು ನಡೆದರೆ ಅಲ್ಲಿ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ. ಸನ್ನಿವೇಶದ ಗಂಭೀರತೆ ಅರ್ಥಮಾಡಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶ

English summary
Australia has started killing of 10,000 camels in APY as thirsty animals desperately search for water in drought hit areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X