ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಸುದ್ದಿಗಳಿಗೆ ಫೇಸ್‌ಬುಕ್ ಬ್ರೇಕ್; ಪ್ರಧಾನಿ ಸ್ಕಾಟ್ ಮಾರಿಸನ್ ಆಕ್ರೋಶ

|
Google Oneindia Kannada News

ಸಿಡ್ನಿ, ಫೆಬ್ರವರಿ 19: ಆಸ್ಟ್ರೇಲಿಯಾದಲ್ಲಿ ಸುದ್ದಿ ವೀಕ್ಷಣೆ ಹಾಗೂ ಹಂಚಿಕೆ ಮೇಲೆ ಫೇಸ್‌ಬುಕ್ ನಿರ್ಬಂಧ ಹೇರಿರುವುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆಸ್ಟ್ರೇಲಿಯಾ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂಸ್ಥೆಯಿಂದ ಉನ್ನತ ಮಟ್ಟದ ಸಭೆ ನಡೆದಿದೆ.

ಗುರುವಾರ ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆ ಹಾಗೂ ಹಂಚಿಕೆ ಮೇಲೆ ಫೇಸ್‌ಬುಕ್ ನಿರ್ಬಂಧ ವಿಧಿಸಿತ್ತು. ಆಸ್ಟ್ರೇಲಿಯಾದಲ್ಲಿ ಜಾರಿಗೆ ಬರುತ್ತಿರುವ ಉದ್ದೇಶಿತ ಕಾನೂನಿನ ಪ್ರಕಾರ, ಸುದ್ದಿ ಹಾಗೂ ಸುದ್ದಿ ಲೇಖನಗಳನ್ನು ಬಳಸಿಕೊಳ್ಳಲು ಡಿಜಿಟಲ್ ಸಂಸ್ಥೆಗಳು ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಫೇಸ್ ಬುಕ್ ತಿಳಿಸಿತ್ತು.

ಸಂಸತ್‌ನಲ್ಲಿ ಅತ್ಯಾಚಾರ: ಮಹಿಳೆಯ ಕ್ಷಮೆ ಕೇಳಿದ ಆಸ್ಟ್ರೇಲಿಯಾ ಪ್ರಧಾನಿ ಸಂಸತ್‌ನಲ್ಲಿ ಅತ್ಯಾಚಾರ: ಮಹಿಳೆಯ ಕ್ಷಮೆ ಕೇಳಿದ ಆಸ್ಟ್ರೇಲಿಯಾ ಪ್ರಧಾನಿ

ಈ ಸಂಬಂಧ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಜೊತೆ ಚರ್ಚೆ ಮಾಡಿದ್ದು, ಒಪ್ಪಂದದ ಮಾತುಕತೆ ಮುಂದುವರೆಯುತ್ತದೆ ಎಂದು ಫೇಸ್‌ಬುಕ್ ಸಂಸ್ಥೆಯ ಜೋಶ್ ಫ್ರೈಡೆನ್‌ಬರ್ಗ್ ತಿಳಿಸಿದ್ದಾರೆ.

Australia President Urges Facebook To Backdown On News

ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆ ಹಾಗೂ ಹಂಚಿಕೆ ಮೇಲಿನ ನಿರ್ಬಂಧ ಹಿಂಪಡೆಯಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆಗ್ರಹಿಸಿದ್ದಾರೆ. "ಫೇಸ್‌ಬುಕ್ ವಿವಾದದ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದೇನೆ. ಆಸ್ಟ್ರೇಲಿಯಾದ ಈ ಉದ್ದೇಶಿತ ಕಾನೂನಿನ ಬಗ್ಗೆ ಬ್ರಿಟನ್, ಕೆನಡಾ ಹಾಗೂ ಫ್ರಾನ್ಸ್‌ ನಾಯಕರೊಂದಿಗೆ ಚರ್ಚಿಸುತ್ತೇನೆ" ಎಂದು ತಿಳಿಸಿದ್ದಾರೆ.

"ಆಸ್ಟ್ರೇಲಿಯಾ ಏನು ಮಾಡುತ್ತದೆ ಎಂದು ಇಡೀ ಪ್ರಪಂಚ ಇತ್ತ ನೋಡುತ್ತಿದೆ. ಅದಕ್ಕಾಗಿ ಗೂಗಲ್, ಫೇಸ್‌ಬುಕ್ ಸಂಸ್ಥೆಗಳನ್ನು ಚರ್ಚೆಗೆ ಆಹ್ವಾನಿಸಿದ್ದೇವೆ. ಪಾಶ್ಚಿಮಾತ್ಯ ದೇಶಗಳು ಇದನ್ನು ಅನುಸರಿಸುವ ಸಾಧ್ಯತೆ ಇದೆ" ಎಂದಿದ್ದಾರೆ. ಈ ಕಾಯ್ದೆ ಜನಪ್ರತಿನಿಧಿಗಳ ಸಭೆಯಲ್ಲಿ ಅಂಗೀಕೃತಗೊಂಡಿದ್ದು, ಸೆನೆಟ್ ಅನುಮೋದನೆ ಬಳಿಕ ಕಾನೂನಾಗಿ ಜಾರಿಯಾಗಲಿದೆ.

English summary
Australia present Scott Morrison urges facebook to backdown on news to its australian users,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X