ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: ಏಳು ಸಾವು

|
Google Oneindia Kannada News

ಸಿಡ್ನಿ, ಜನವರಿ 2: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಕಾಡ್ಗಿಚ್ಚು ಅಬ್ಬರದಿಂದ ಜನರು, ಕಾಡುಪ್ರಾಣಿಗಳು ಭಯದಲ್ಲಿ ವಾಸಿಸುವಂತಾಗಿದೆ. ಮುಗಿಲೆತ್ತರಕ್ಕೆ ಆವರಿಸಿರುವ ಬೆಂಕಿಯ ಜ್ವಾಲೆಗಳನ್ನು ನಿಯಂತ್ರಿಸುವ ಪ್ರಯತ್ನ ಸಫಲವಾಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಏಳು ಮಂದಿ ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಜೀವ ಕಳೆದುಕೊಂಡಿದ್ದಾರೆ. 7 ದಿನಗಳ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ನ್ಯೂ ಸೌತ್ ವೇಲ್ಸ್, ಕಾಳ್ಗಿಚ್ಚಿನಿಂದ ಆವೃತವಾಗಿರುವ ಸ್ಥಳಗಳಿಂದ ಜನರನ್ನು ಬಲವಂತವಾಗಿ ಸ್ಥಳಾಂತರ ಮಾಡಲು ನಿರ್ಧರಿಸಿದೆ.

ವಿಕ್ಟೋರಿಯಾ ಗಡಿ ಸಮೀಪದ ಬ್ಯಾಟ್‌ಮನ್ಸ್ ಬೇದಲ್ಲಿರುವ ನ್ಯೂ ಸೌತ್‌ ವೇಲ್ಸ್ (ಎನ್‌ಎಸ್‌ಡಬ್ಲ್ಯೂ) ಕರಾವಳಿ ಪಟ್ಟಣದಲ್ಲಿ ಗ್ರಾಮೀಣ ಅಗ್ನಿಶಾಮಕ ದಳ ಸೇವೆಯು ಪ್ರವಾಸಿಮಟ್ಟದ ವಲಯವೊಂದನ್ನು ಸ್ಥಾಪಿಸಿದೆ. ಶನಿವಾರದ ಒಳಗೆ ಎಲ್ಲ ಪ್ರವಾಸಿಗರೂ ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದೆ. ಎನ್‌ಎಸ್‌ಡಬ್ಲ್ಯೂ ನವೆಂಬರ್ ಮತ್ತು ಡಿಸೆಂಬರ್‌ಗಳಲ್ಲಿ ಸಹ ತುರ್ತು ಪರಿಸ್ಥಿತಿ ಘೋಷಿಸಿತ್ತು.

ಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮ

ಕಳೆದ 24 ಗಂಟೆಯಲ್ಲಿ ಮಾರಕ ಕಾಳ್ಗಿಚ್ಚಿಗೆ ಆಹುತಿಯಾದವರ ಸಂಖ್ಯೆ ಏಳಕ್ಕೆ ಏರಿದೆ. ಅರಣ್ಯ ಪ್ರದೇಶದ ಭಾಗಗಳಲ್ಲಿ ಅನೇಕ ಸಮುದಾಯಗಳು ಹಂಚಿ ಹೋಗಿರುವುದರಿಂದ ಹಲವು ಕಡೆ ಜನರ ಸ್ಥಳಾಂತರ ಕಷ್ಟಕರವಾಗಿದೆ. ಈ ಭಾಗದಲ್ಲಿ ಅಂತಹ 24 ಪ್ರತ್ಯೇಕ ಸಮುದಾಯಗಳಿವೆ.

Australia Fire Kills 7 People New South Wales Declares Emergency

ಕಳೆದ ಕೆಲವು ತಿಂಗಳಿನಿಂದ ಆಸ್ಟ್ರೇಲಿಯಾದ ಅನೇಕ ಕಡೆ ಕಾಳ್ಗಿಚ್ಚು ಭಾರಿ ಅನಾಹುತ ಸೃಷ್ಟಿಸಿದೆ. ಈ ಬೆಂಕಿ ಜ್ವಾಲೆಗಳನ್ನು ನಿಯಂತ್ರಿಸುವುದಕ್ಕೆ ಇನ್ನೂ ಹಲವು ಸಮಯ ಬೇಕಾಗಲಿದೆ. ಆಸ್ಟ್ರೇಲಿಯಾದಲ್ಲಿ ಈಗಷ್ಟೇ ಬೇಸಿಗೆ ಆರಂಭವಾಗಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ತಾಪಮಾನ ಸಾಮಾನ್ಯವಾಗಿ ಅಧಿಕಮಟ್ಟದಲ್ಲಿರಲಿದೆ.

ಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚುಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚು

ಇದುವರೆಗೂ ದೇಶದಲ್ಲಿ ಕಾಳ್ಗಿಚ್ಚಿಗೆ 17 ಮಂದಿ ಬಲಿಯಾಗಿದ್ದಾರೆ. ಸುಮಾರು 1,300 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 442 ಮನೆಗಳು ಹಾನಿಗೊಳಗಾಗಿವೆ. ಅಂದಾಜು ಐದು ಮಿಲಿಯನ್ ಹೆಕ್ಟೇರ್ ಭೂಮಿ ಭಸ್ಮವಾಗಿದೆ. ಅನೇಕ ಕಡೆ ಕುರುಚಲು ಗಿಡಗಳಿಂದ ವೇಗವಾಗಿ ವ್ಯಾಪಿಸಿರುವ ಬೆಂಕಿ, ಸಣ್ಣ ಪಟ್ಟಣಗಳನ್ನೇ ಸುಟ್ಟುಹಾಕಿದೆ. ಶನಿವಾರದ ವೇಳೆಗೆ ತಾಪಮಾನ ಹೆಚ್ಚುವ ಸಾಧ್ಯತೆ ಇದ್ದು, ಗಾಳಿಯ ವೇಗ ಕೂಡ ಹೆಚ್ಚುವುದರಿಂದ ಬೆಂಕಿ ಮತ್ತಷ್ಟು ರಭಸವಾಗಲಿದೆ ಎಂದು ಎಚ್ಚರಿಕೆ ನೀಡಲಿದೆ.

English summary
New South Wales state has declared a state of emergency as the forest fire goes worsening and 7 people were dead in last 24 hours in Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X