ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲುಗಾಡಿದ ಆಸ್ಟ್ರೇಲಿಯಾದ ಆರ್ಥಿಕತೆ: 28 ವರ್ಷಗಳಲ್ಲಿ ಕಾಣದಂತಹ ಮಹಾ ಆರ್ಥಿಕ ಕುಸಿತ

|
Google Oneindia Kannada News

ಸಿಡ್ನಿ, ಸೆಪ್ಟೆಂಬರ್ 02: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆಸ್ಟ್ರೇಲಿಯಾದ ಆರ್ಥಿಕತೆಯು ಮಹಾ ಆರ್ಥಿಕ ಕುಸಿತ ಎದುರಿಸಿದೆ. ಬುಧವಾರ ಬಿಡುಗಡೆಯಾದ ಮಾಹಿತಿಯು ದೇಶವು 28 ವರ್ಷಗಳಲ್ಲಿ ಮೊದಲ ಆರ್ಥಿಕ ಹಿಂಜರಿತದಲ್ಲಿದೆ ಎಂದು ದೃಢಪಡಿಸಿದೆ.

ಇತ್ತೀಚಿನ ರಾಷ್ಟ್ರೀಯ ಖಾತೆಗಳು ಜೂನ್‌ನಲ್ಲಿ ಆರ್ಥಿಕತೆಯು ಶೇಕಡಾ 7ರಷ್ಟು ಕುಗ್ಗಿದೆ ಎಂದು ತೋರಿಸಿದೆ. ಈ ಮೂಲಕ ಕಳೆದ ಮೂರು ದಶಕಗಳಲ್ಲಿ ಮೊದಲ ಬಾರಿಗೆ ಕಾಂಗರೂ ನಾಡನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ.

ಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯ

ಇದಕ್ಕೂ ಮೊದಲು ಅದರ ಹತ್ತಿರದ ಕುಸಿತ ಜೂನ್ 1974 ರಲ್ಲಿ ಶೇಕಡಾ 2ರಷ್ಟು ಕಾಣಬಹುದು. ಅರ್ಥಶಾಸ್ತ್ರಜ್ಞರು 1930 ರಲ್ಲಿ ಶೇಕಡಾ 9.5ರಷ್ಟು ತೀವ್ರ ಕುಸಿತವನ್ನು ಅಂದಾಜಿಸಿದ್ದಾರೆ. ಆ ಸಮಯದಲ್ಲಿ ಆಸ್ಟ್ರೇಲಿಯಾವು ಮಹಾ ಆರ್ಥಿಕ ಕುಸಿತದ ಪರಿಣಾಮ ಎದುರಿಸಿದ, ವಿಶ್ವದ ಅತ್ಯಂತ ಕಠಿಣ ದೇಶಗಳಲ್ಲಿ ಒಂದಾಗಿದೆ.

Australia Facing Historic Recession: Economy Takes Sharpest Dive Since The 1930s

''ಕೊರೊನಾವೈರಸ್ ಕಾರಣಕ್ಕೆ ಲಾಕ್‌ಡೌನ್ ಹೇರಿದ್ದರಿಂದ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿ ಈ ಹಿಂಜರಿತ ಸಂಭವಿಸಿದೆ. '' ಆಸ್ಟ್ರೇಲಿಯಾದ ಆರ್ಥಿಕತೆ ಮೇಲಿನ ಕೊರೊನಾದ ಪರಿಣಾಮಗಳನ್ನು ಅಂಕಿ ಅಂಶಗಳು ಹೇಳುತ್ತಿವೆ'' ಎಂದು ಹಣಕಾಸು ಸಚಿವ ಜೋಶ್ ಫ್ರೈಡನ್‌ಬರ್ಗ್‌ ಹೇಳಿದ್ದಾರೆ.

''ಸತತ 28 ವರ್ಷಗಳ ನಮ್ಮ ಆರ್ಥಿಕತೆಯ ಬೆಳವಣಿಗೆ ಅಧಿಕೃತವಾಗಿ ಅಂತ್ಯವಾಗಿದೆ. ಇದಕ್ಕೆ ಕಾರಣ ಶತಮಾನಕ್ಕೊಮ್ಮೆ ಬರುವ ಸಾಂಕ್ರಾಮಿಕ ರೋಗ'' ಎಂದು ಅವರು ವಿವರಿಸಿದ್ದಾರೆ.

ಪ್ರಧಾನಿ ಸ್ಕಾಟ್ ಮಾರಿಸನ್ ಸಂಸತ್ತಿನಲ್ಲಿ ''ಇದು ಆಸ್ಟ್ರೇಲಿಯಾಕ್ಕೆ ವಿನಾಶಕಾರಿ ದಿನ '' ಎಂದು ಹೇಳಿದ್ದಾರೆ.

English summary
Australia's economy has suffered its sharpest quarterly drop since the Great Depression because of the pandemic, with data released on Wednesday confirming the country is in its first recession in 28 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X