• search
 • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಗೆ ನುಗ್ಗುತ್ತಿವೆ ರಾಶಿ ರಾಶಿ ಹಾವುಗಳು, ಜೇಡ-ಚೇಳುಗಳ ಕಾಟಕ್ಕೆ ಬೆಚ್ಚಿದ ಜನ

|
Google Oneindia Kannada News

ಮಂಚದ ಕೆಳಗೂ ಹಾವು, ಹೀಟರ್ ಹತ್ತಿರನೂ ಹಾವು, ಇನ್ನು ಫ್ರಿಡ್ಜ್ ತೆಗೆಯಲು ಹೋದರೂ ಅಲ್ಲೂ ಬುಸ್ ಬುಸ್ ಸದ್ದು. ಅಷ್ಟಕ್ಕೂ ಇದು ಪ್ರವಾಹ ಪೀಡಿತ ಆಸ್ಟ್ರೇಲಿಯಾ ಪರಿಸ್ಥಿತಿ. ಆಸ್ಟ್ರೇಲಿಯಾ ಆಗ್ನೇಯ ಭಾಗದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಸಿಡ್ನಿ 100 ವರ್ಷಗಳಲ್ಲೇ ಅತ್ಯಂತ ದೊಡ್ಡ ಪ್ರವಾಹ ಸ್ಥಿತಿ ಎದುರಿಸುತ್ತಿದೆ.

ರಸ್ತೆ, ಮನೆ ಎಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದೆ. ಆದರೆ ಮನೆಗಳಿಗೆ ಹಾವುಗಳು ನುಗ್ಗುತ್ತಿದ್ದು, ಜನರು ಮರಳಿ ತಮ್ಮ ಮನೆಗೆ ಹೋಗುವುದಕ್ಕೂ ಭಯಪಡುವಂತಾಗಿದೆ. ದ್ವೀಪರಾಷ್ಟ್ರ ಆಸ್ಟ್ರೇಲಿಯಾದ ಸಾಕಷ್ಟು ಪ್ರದೇಶ ಮರುಭೂಮಿಯಾಗಿದೆ. ಇಲ್ಲಿ ವಿಷ ಜಂತುಗಳ ಕಾಟ ಹೇಳತೀರದು.

ಅದರಲ್ಲೂ ಕೊಳಕ ಮಂಡಲ ಜಾತಿಗೆ ಸೇರುವ ವೈಪರ್ ಸ್ನೇಕ್‌ಗಳ ಅಬ್ಬರ ಜೋರಾಗೇ ಇರುತ್ತದೆ. ಒಂದು ಲೆಕ್ಕದಲ್ಲಿ ವೈಪರ್ ಸ್ನೇಕ್‌ಗಳ ಅಡ್ಡೆಯಾಗಿದೆ ಆಸ್ಟ್ರೇಲಿಯಾ. ಆದರೆ ಇದೀಗ ಎಡಬಿಡದೆ ಮಳೆ ಸುರಿದು ಪ್ರವಾಹ ಉಂಟಾಗಿರುವ ಕಾರಣ ಹಾವುಗಳು ಮನೆಗೆ ನುಗ್ಗುತ್ತಿವೆ. ಪೊಲೀಸರು, ರಕ್ಷಣಾ ಸಿಬ್ಬಂದಿ ಈಗಾಗಲೇ ಜನರಿಗೆ ಹಾವುಗಳ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಳೆ ನಿಂತರೂ ಪ್ರವಾಹ ತಗ್ಗಿಲ್ಲ

ಮಳೆ ನಿಂತರೂ ಪ್ರವಾಹ ತಗ್ಗಿಲ್ಲ

ಆಸ್ಟ್ರೇಲಿಯಾದಲ್ಲಿ ಸದ್ಯ ಮಳೆ ಏನೋ ಕಡಿಮೆ ಆಗಿದೆ. ಆದರೆ ಪ್ರವಾಹ ಮಾತ್ರ ಇನ್ನೂ ತಗ್ಗುತ್ತಿಲ್ಲ. ಅದರಲ್ಲೂ ತಗ್ಗು ಪ್ರದೇಶಗಳ ಪಾಡು ಹೀನಾಯವಾಗಿದೆ. ಇನ್ನೂ ಹಲವು ದಿನಗಳ ಕಾಲ ನೀರು ಹೀಗೆ ನಿಲ್ಲಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಹಾವುಗಳ ಜೊತೆಗೆ ವಿಷಕಾರಿ ಜೇಡಗಳು ಕೂಡ ಆಸ್ಟ್ರೇಲಿಯಾದಲ್ಲಿ ಮನೆ ಬಾಗಿಲು ಬಡಿಯುತ್ತಿವೆ. ನಿರಾಶ್ರಿತ ಶಿಬಿರಗಳಲ್ಲಿ ಜಾಗ ಪಡೆದಿರುವ ಜನರಿಗೆ ಜೀವ ಉಳಿಕೊಂಡು ಮರಳಿ ಮನೆಗೆ ಹೋಗುವುದೇ ದೊಡ್ಡ ಚಾಲೆಂಜ್ ಆಗಿದೆ. ಆದರೆ ಮನೆಗೆ ಹೋದ ನಂತರ ಹಾವು, ಚೇಳು, ಜೇಡಗಳ ಜೊತೆ ಜೀವನ ನಡೆಸಬೇಕಿದೆ.

100 ವರ್ಷಕ್ಕೊಮ್ಮೆ ಹೀಗೆ ಆಗುತ್ತೆ..!

100 ವರ್ಷಕ್ಕೊಮ್ಮೆ ಹೀಗೆ ಆಗುತ್ತೆ..!

ದ್ವೀಪರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಪ್ರತಿ 100 ವರ್ಷಗಳಿಗೊಮ್ಮೆ ಇಂತಹ ಪ್ರವಾಹ ಮಾಮೂಲಿಯಂತೆ. ತಜ್ಞರು ಹೇಳುವಂತೆ, 100 ವರ್ಷಗಳಿಗೊಮ್ಮೆ ಆಸ್ಟ್ರೇಲಿಯಾ ಇಂತಹ ಭೀಕರ ಪ್ರವಾಹ ಎದುರಿಸುತ್ತದೆ. ಆದರೆ ಸದ್ಯಕ್ಕೆ ಪರಿಸ್ಥಿತಿ ಕೈಮೀರಿ ಹೋಗಿದೆ. ಹಿಂದೆಂದೂ ಕಾಣದಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ ತಜ್ಞರು. ಅದರಲ್ಲೂ ಪಶ್ಚಿಮ ಸಿಡ್ನಿಯ ಕೆಲ ಭಾಗಗಳಲ್ಲಿ ಪ್ರತಿ 50 ವರ್ಷಕ್ಕೊಮ್ಮೆ ಹವಾಮಾನದಲ್ಲಿ ಏರುಪೇರು ಗ್ಯಾರಂಟಿ ಎಂಬಂತಾಗಿದೆ. ಸಿಡ್ನಿಯ ಕೆಲವು ಸ್ಥಳಗಳಲ್ಲಿ 300 ಮಿಲಿ ಮೀಟರ್ ಮಳೆಯಾಗಿದ್ದು ಮಹಾಮಳೆಯ ಅಬ್ಬರಕ್ಕೆ ಹಿಂದಿನ ದಾಖಲೆಗಳು ಅಳಿಸಿ ಹೋಗಿವೆ.

ತುಂಬಿ ಹರಿಯುತ್ತಿವೆ ನದಿಗಳು..!

ತುಂಬಿ ಹರಿಯುತ್ತಿವೆ ನದಿಗಳು..!

ಹೌದು, ಮೊದಲೇ ಹೇಳಿದಂತೆ ಆಸ್ಟ್ರೇಲಿಯಾ ಮರುಭೂಮಿ ಪ್ರದೇಶವನ್ನ ಹೆಚ್ಚಾಗಿ ಹೊಂದಿದೆ. ಹೀಗಾಗಿ ಅಲ್ಲಿ ಹರಿಯುವ ನದಿಗಳ ಪ್ರಮಾಣ ಕಡಿಮೆ. ಅದರಲ್ಲೂ ಸಿಡ್ನಿ ಸುತ್ತ ವಿಶಾಲವಾಗಿ ಚಾಚಿಕೊಂಡಿರುವ ಹಾಕ್ಸ್‌ಬರಿ-ನೇಪಿಯನ್ ಕಣಿವೆ ಮತ್ತು ನದಿಗಳು ಸುಮಾರು 60 ವರ್ಷದಲ್ಲಿ ಕಾಣದ ನೀರನ್ನು ಕಾಣುತ್ತಿವೆ. ನದಿಗಳ ಉಕ್ಕಿ, ಉಕ್ಕಿ ಹರಿಯುತ್ತಿವೆ. ಸಿಡ್ನಿ ಸಿಟಿಗೆ ಕುಡಿಯುವ ನೀರಿನ ಮೂಲವಾದ ವರಗಾಂಬ ಡ್ಯಾಂ ತುಂಬಿ ಹರಿಯುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದ್ದು, ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಆದಷ್ಟು ಬೇಗ ಖಾಲಿ ಮಾಡಿಸಬೇಕಿದೆ.

  ಈ ವರ್ಷ ಮಳೆರಾಯನ ತಡಿಯೋಕೆ ಆಗಲ್ಲಾ! | Oneindia Kannada
  ಈ ಹಿಂದೆ ಕಾಡ್ಗಿಚ್ಚಿನ ಅಬ್ಬರ..!

  ಈ ಹಿಂದೆ ಕಾಡ್ಗಿಚ್ಚಿನ ಅಬ್ಬರ..!

  2019ರಲ್ಲಿ ಆಸ್ಟ್ರೇಲಿಯಾದಲ್ಲಿ ಹೊತ್ತಿದ್ದ ಕಾಡ್ಗಿಚ್ಚು ಹಲವು ತಿಂಗಳುಗಳ ಕಾಲ ಉರಿದಿತ್ತು. ಹತ್ತಾರು ಲಕ್ಷ ಎಕರೆ ಕಾಡು ಭಸ್ಮವಾಗಿ, ಕಾಂಗರೂ ನಾಡಲ್ಲಿ ಲೆಕ್ಕವಿಲ್ಲದಷ್ಟು ಜೀವ ಸಂಕುಲ ನಾಶವಾಗಿತ್ತು. ಲಕ್ಷಾಂತರ ಜನ ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಆ ಪರಿಸ್ಥಿತಿಯೇ ಸರಿ ಹೋಗಿಲ್ಲ. ಅಷ್ಟರಲ್ಲೇ ಮಹಾಭೀಕರ ಮಳೆ ಅಪ್ಪಳಿಸಿದೆ. ಕೊರೊನಾ ಕಾರಣಕ್ಕೂ ಸಮಸ್ಯೆಗೆ ಸಿಲುಕಿದ್ದ ಜನ ಪ್ರವಾಹದಿಂದ ಜೀವ ಉಳಿಸಿಕೊಳ್ಳೋಕೆ ದಿಕ್ಕಾಪಾಲಾಗಿ ಓಡುವಂತಾಗಿದೆ. ಸಂತ್ರಸ್ತರಿಗಾಗಿ 13 ಕಡೆಗಳಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.

  English summary
  Viper snakes and venomous spiders entering Australia’s houses after heavy rain & deadly flood.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X