ತಾನು ಸಲಿಂಗಕಾಮಿಯೆಂಬ ಗುಟ್ಟು ರಟ್ಟು ಮಾಡಿದ ಖ್ಯಾತ ಆಸ್ಟ್ರೇಲಿಯಾ ಕ್ರಿಕೆಟಿಗ
ಸಿಡ್ನಿ, ಏಪ್ರಿಲ್ 30: ಹುಟ್ಟುಹಬ್ಬದ ದಿನದಂದೇ ತಾನೊಬ್ಬ ಸಲಿಂಗಕಾಮಿಯೆಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟರ್ ಜೇಮ್ಸ್ ಫಕ್ನರ್ ಬಹಿರಂಗಪಡಿಸಿದ್ದಾರೆ.
ತಮ್ಮ ವೇಗದ ಬೌಲಿಂಗ್, ಅಬ್ಬರದ ಬ್ಯಾಟಿಂಗ್ ನಿಂದಾಗಿ ಖ್ಯಾತರಾಗಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಜೇಮ್ಸ್ ಫಕ್ನರ್ ಅವರು ಇಂದು ತಮ್ಮ ಸಲಿಂಗಕಾಮದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಈ ವರೆಗೆ ಅವರು ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.
ಸಹಜೀವನದಲ್ಲಿನ ಸಹಮತದ ಸೆಕ್ಸ್ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಇಂದು ತಮ್ಮ 29ನೇ ಜನ್ಮ ದಿನ ಆಚರಿಸಿಕೊಂಡ ಜೇಮ್ಸ್ ಫಕ್ನರ್, ತಾವು, ತಾಯಿ ಮತ್ತು ತಮ್ಮ 'ಬಾಯ್ಫ್ರೆಂಡ್' ಜೊತೆಗೆ ಭೋಜನ ಸವಿಯುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜೇಮ್ಸ್ ಫಕ್ನರ್ 'ಬಾಯ್ಫ್ರೆಂಡ್' ಜೊತೆಗೆ ಭೋಜನ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಐದು ವರ್ಷದಿಂದಲೂ ತಾವು ಜೊತೆಯಾಗಿರುವುದಾಗಿಯೂ ಬರೆದುಕೊಂಡಿದ್ದಾರೆ.
ಜೇಮ್ಸ್ ಫಾಕ್ನರ್ ಅವರು ಯಶಸ್ವಿ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದರು, ಐಪಿಎಲ್ ನಲ್ಲಿಯೂ ಆಡಿದ್ದ ಫಾಕ್ನರ್ ಅವರು, ಇತ್ತೀಚೆಗೆ ಕಳಪೆ ಫಾರ್ಮ್ನಿಂದಾಗಿ ಆಸ್ಟ್ರೇಲಿಯಾ ತಂಡದಿಂದ ಹೊರಗೆ ಉಳಿದಿದ್ದಾರೆ, ಐಪಿಎಲ್ನಲ್ಲೂ ಆಡುತ್ತಿಲ್ಲ.
ವೀಡಿಯೋ ವೈರಲ್:ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಯದುವೀರ್ ಪತ್ನಿ ತ್ರಿಷಿಕಾ
69 ಏಕದಿನ ಪಂದ್ಯ ಆಡಿರುವ ಅವರು 96 ವಿಕೆಟ್ ಗಳಿಸಿದ್ದಾರೆ ಮತ್ತು 1033 ರನ್ ಗಳಿಸಿದ್ದಾರೆ. 60 ಐಪಿಎಲ್ ಪಂದ್ಯ ಆಡಿರುವ ಫಕ್ನರ್ 59 ವಿಕೆಟ್ ಗಳಿಸಿ 527 ರನ್ ಗಳಿಸಿದ್ದಾರೆ. ಅವರು ಕೇವಲ ಒಂದು ಟೆಸ್ಟ್ ಪಂದ್ಯವನ್ನಷ್ಟೆ ಆಡಿದ್ದಾರೆ.
ಅಪ್ಪ-ಅಕ್ಕ ಕಾಂಗ್ರೆಸ್ಗೆ, ಆದರೆ ಬಿಜೆಪಿಗೆ ನನ್ನ ಬೆಂಬಲ ಎಂದ ಕ್ರಿಕೆಟಿಗ ರವೀಂದ್ರ ಜಡೇಜಾ
ಇತ್ತೀಚೆಗೆ ಸಲಿಂಗಕಾಮದ ಗುಟ್ಟನ್ನು ಬಹಿರಂಗಗೊಳಿಸುವ ಧೈರ್ಯವನ್ನು ಹಲವು ಕ್ರೀಡಾಪಟುಗಳು ತೋರುತ್ತಿದ್ದಾರೆ. ಇತ್ತೀಚೆಗಷ್ಟೆ ನ್ಯೂಜಿಲೆಂಡ್ನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಪರಸ್ಪರ ವಿವಾಹವಾದರು.
ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಸ್ಟಿವನ್ ಡೇವಿಸ್ ಅವರು ಸಹ ತಾವು ಸಲಿಂಗ ಕಾಮಿ ಎಂಬುದನ್ನು ಬಹಿರಂಗಪಡಿಸಿದರು. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ನಾಯಕಿ ಸಹ ತಾವು ಮಹಿಳೆಯರಲ್ಲಿ ಆಸಕ್ತಿಹೊಂದಿರುವುದನ್ನು ಬಹಿರಂಗಪಡಿಸಿದ್ದರು.