ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಗಡಿಗಳು ಬಂದ್!

|
Google Oneindia Kannada News

ಸಿಡ್ನಿ, ಜುಲೈ 06: ಆಸ್ಟ್ರೇಲಿಯಾ ಎರಡು ಜನಪ್ರಿಯ ರಾಜ್ಯಗಳ ನಡುವೆ ಗಡಿ ಬಂದ್ ಆಗಿದೆ. ಸರಿ ಸುಮಾರು 100 ವರ್ಷಗಳ ಬಳಿಕ ಈ ರೀತಿ ಪರಿಸ್ಥಿತಿ ಎದುರಾಗಿದ್ದು, ಕೊರೊನಾವೈರಸ್ ದೆಸೆಯಿಂದ ಅನಿರ್ಧಿಷ್ಟಾವಧಿ ಗಡಿಗಳನ್ನು ಲಾಕ್ಡೌನ್ ಮಾಡಲಾಗುತ್ತಿದೆ.

Recommended Video

Keralaದಲ್ಲಿ ಮುಂದಿನ ವರ್ಷ ಜುಲೈವರೆಗೂ Lockdown! | Oneindia Kannada

ಆಸ್ಟ್ರೇಲಿಯಾದ ಪ್ರಮುಖ ರಾಜ್ಯಗಳಾದ ವಿಕ್ಟೋರಿಯಾ ಹಾಗೂ ನ್ಯೂ ಸೌಥ್ ವೇಲ್ಸ್ ನಡುವಿನ ಸಂಪರ್ಕ ಕಡಿತಗೊಳ್ಳಲಿದೆ. ಎರಡು ರಾಜ್ಯಗಳ ನಡುವಿನ ಗಡಿಯನ್ನು 100 ವರ್ಷಗಳ ಬಳಿಕ ಬಂದ್ ಮಾಡಲಾಗುತ್ತಿದೆ. 1919ರಲ್ಲಿ ಸ್ಪಾನೀಷ್ ಫ್ಲೂ ಸಾಂಕ್ರಾಮಿಕ ರೋಗದ ಪಿಡುಗು ಎದುರಾದಾಗ ಮಾತ್ರ ಎರಡು ರಾಜ್ಯಗಳ ನಡುವೆ ಗಡಿ ಬಂದ್ ಮಾಡಲಾಗಿತ್ತು.

ವರ್ಚುವಲ್‌ ಶೃಂಗಸಭೆ: 7 ಒಪ್ಪಂದಗಳಿಗೆ ಸಹಿ ಮಾಡಿದ ಭಾರತ-ಆಸ್ಟ್ರೇಲಿಯಾವರ್ಚುವಲ್‌ ಶೃಂಗಸಭೆ: 7 ಒಪ್ಪಂದಗಳಿಗೆ ಸಹಿ ಮಾಡಿದ ಭಾರತ-ಆಸ್ಟ್ರೇಲಿಯಾ

ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕಳಪೆ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಆಸ್ಟ್ರೇಲಿಯಾಕ್ಕೆ ಈ ರಾಜ್ಯಗಳ ನಡುವಿನ ಗಡಿ ಬಂದ್ ಭಾರಿ ಹೊಡೆತ ನೀಡಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆದರೆ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ವಿಕ್ಟೋರಿಯಾದ ಪ್ರತಿನಿಧಿ ಡೇನಿಯಲ್ ಆಂಡ್ರ್ಯೂಸ್, ಇದು ಈ ಸಮಯಕ್ಕೆ ಅತ್ಯವಶ್ಯ, ವೈರಸ್ ಸೋಂಕು ತಡೆಗಟ್ಟಲು ಅಗತ್ಯ ಕ್ರಮವೆನಿಸಿದೆ ಎಂದಿದ್ದಾರೆ.

Australia closes state border for first time in 100 years after COVID-19 spike

ವಿಕ್ಟೋರಿಯಾ, ಮೆಲ್ಬೋರ್ನ್ ನಲ್ಲಿ 127 ಹೊಸ ಕೊವಿಡ್ 19 ಒಂದೇ ದಿನದಂದು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಟ್ಟಾರೆ, ದೇಶದಲ್ಲಿ 106 ಮಂದಿ ಮೃತರಾಗಿದ್ದಾರೆ. ಎರಡು ರಾಜ್ಯಗಳ ನಡುವಿನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಂಪರ್ಕದ ಬಗ್ಗೆ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಮಿಲಿಟರಿ ಪಡೆಯಿಂದ ಗಡಿಯಲ್ಲಿ ಗಸ್ತು ನಿಯೋಜನೆಯಾಗಲಿದೆ.

ಆಸ್ಟ್ರೇಲಿಯಾದಲ್ಲಿ ಒಟ್ಟಾರೆ 8586 ಪಾಸಿಟಿವ್ ಪ್ರಕರಣಗಳಿದ್ದು, ನಿನ್ನೆ ಒಂದೇ ದಿನ 137 ಕೇಸುಗಳು ದಾಖಲಾಗಿವೆ. 7420 ಮಂದಿ ಗುಣಮುಖರಾಗಿದ್ದಾರೆ. 1060 ಸಕ್ರಿಯ ಪ್ರಕರಣಗಳಿವೆ.

English summary
The border between Australia's two most populous states will close from Tuesday for an indefinite period as authorities scramble to contain an outbreak of the coronavirus in the city of Melbourne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X