ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳ್ಗಿಚ್ಚಿಗೆ ಸುಟ್ಟು ಕರಕಲಾದ ಕಾಡುಪ್ರಾಣಿಗಳು: ಜೀವ ಉಳಿಸಿಕೊಳ್ಳಲು ಪರದಾಟ

|
Google Oneindia Kannada News

ಸಿಡ್ನಿ, ಜನವರಿ 3: ಬೆಂಕಿಯ ಕೆನ್ನಾಲಿಗೆಯಿಂದ ಆಸ್ಟ್ರೇಲಿಯಾ ತತ್ತರಿಸಿದೆ. ಉದ್ದಗಲಕ್ಕೂ ಹರಡಿರುವ ಕಾಡು, ಪೊದೆಗಳು ಭಸ್ಮವಾಗಿದೆ. ಆಸ್ಟ್ರೇಲಿಯಾದ ಮಹಾ ದುರಂತ ಎಂದೇ ಪರಿಗಣಿಸಲಾಗಿರುವ ಈ ಅಗ್ನಿ ಅನಾಹುತಕ್ಕೆ ಲಕ್ಷಾಂತರ ಪ್ರಾಣಿ, ಪಕ್ಷಿಗಳು ಸುಟ್ಟು ಕರಕಲಾಗಿರುವ ದೃಶ್ಯ ಮನಕಲಕುವಂತಿದೆ. ಕಾಂಗರೂ ನಾಡಿನಲ್ಲಿ ಆವರಿಸಿರುವ ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಮೂಕ ಪ್ರಾಣಿಗಳು ಭಯದಿಂದ ಓಡುತ್ತಿರುವುದು ಮರುಕ ಹುಟ್ಟಿಸುತ್ತಿದೆ.

ಹಲವು ತಿಂಗಳ ಹಿಂದೆ ಆರಂಭವಾದ ಕಾಳ್ಗಿಚ್ಚನ್ನು ನಿಯಂತ್ರಿಸಲು ಇಂದಿಗೂ ಸಾಧ್ಯವಾಗಿಲ್ಲ. ಮಿಗಿಲಾಗಿ ಅಲ್ಲಿ ಬೇಸಿಗೆಯ ಆರಂಭವಾಗುತ್ತಿದ್ದು, ಬೆಂಕಿಯ ಆರ್ಭಟ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ದೇಶದೆಲ್ಲೆಡೆ 12.35 ಮಿಲಿಯನ್ ಎಕರೆ ಭೂಮಿ ಸುಟ್ಟು ಭಸ್ಮವಾಗಿದೆ. ಕನಿಷ್ಠ 17 ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ ಕಾಡನ್ನೇ ನಂಬಿಕೊಂಡು ಬದುಕುತ್ತಿರುವ ಪ್ರಾಣಿಗಳ ಕಥೆಯೇನು?

ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: ಏಳು ಸಾವು ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಬೆಚ್ಚಿದ ಆಸ್ಟ್ರೇಲಿಯಾ: ಏಳು ಸಾವು

ಸಿಡ್ನಿ ವಿಶ್ವವಿದ್ಯಾಲಯದ ಪರಿಸರ ತಜ್ಞರ ಅಂದಾಜಿನ ಪ್ರಕಾರ ಸುಮಾರು 50 ಕೋಟಿಗೂ ಅಧಿಕ ಪ್ರಾಣಿಗಳು ಹಾಗೂ ಗಿಡಮರಗಳು ಬೆಂಕಿಗೆ ಆಹುತಿಯಾಗಿವೆ.

ಕೋಲಾಗಳ ನಾಶ

ಕೋಲಾಗಳ ನಾಶ

'ಕೋಲಾಗಳ ಶೇ 30ರಷ್ಟು ಆವಾಸಸ್ಥಾನಗಳು ನಾಶವಾಗಿವೆ. ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದ ಬಳಿಕ ಉಳಿದ ಕೋಲಾಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು' ಎಂದು ಆಸ್ಟ್ರೇಲಿಯಾದ ಪರಿಸರ ಸಚಿವೆ ಸುಸೇನ್ ಲೇ ಹೇಳಿದ್ದಾರೆ.

480 ಮಿಲಿಯನ್‌ಗೂ ಅಧಿಕ ಸಾವು

480 ಮಿಲಿಯನ್‌ಗೂ ಅಧಿಕ ಸಾವು

ಸುಮಾರು 480 ಮಿಲಿಯನ್ ಸಸ್ತನಿಗಳು, ಹಕ್ಕಿಗಳು ಮತ್ತು ಸರೀಸೃಪಗಳು ಕಳೆದ ಸೆಪ್ಟೆಂಬರ್‌ನಿಂದ ಇದುವರೆಗೂ ಬೆಂಕಿಯ ಕೆನ್ನಾಲಿಗೆಗೆ ಜೀವ ಕಳೆದುಕೊಂಡಿವೆ. ಆದರೆ ಈ ಸಂಖ್ಯೆ ಇನ್ನೂ ಹೆಚ್ಚೇ ಇದೆ ಎಂದು ಹೇಳಲಾಗುತ್ತಿದೆ. ಹೊತ್ತಿ ಉರಿಯುತ್ತಿರುವ ಕಾಡುಗಳಿಂದ ಕಾಂಗರೂಗಳು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ಭಯಾನಕ ಚಿತ್ರಗಳು ಮತ್ತು ವಿಡಿಯೋಗಳು, ಹಾಗೂ ಕೋಲಾಗಳ ಸುಟ್ಟ ದೇಹಗಳ ಚಿತ್ರಗಳು ಖೇದ ಮೂಡಿಸುತ್ತವೆ.

ಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮಭೀಕರ ಕಾಳ್ಗಿಚ್ಚಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭಸ್ಮ

8,000 ಕೋಲಾಗಳ ಸಾವು!

8,000 ಕೋಲಾಗಳ ಸಾವು!

ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದದಲ್ಲಿ ಸೇರಿರುವ ಕೋಲಾಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿತ್ತು. ಅವುಗಳ ರಕ್ಷಣೆಗೆ ಆದ್ಯತೆ ನೀಡಲಾಗಿತ್ತು. ಆದರೆ ಕಾಳ್ಗಿಚ್ಚು ಅವುಗಳ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಇಡೀ ದೇಶದಲ್ಲಿ ಇರಬಹುದಾದ ಕೋಲಾಗಳ ಸಂಖ್ಯೆಯ ಮೂರನೇ ಒಂದರಷ್ಟು ಭಾಗ, ಅಂದರೆ ಸುಮಾರು 8,000 ಕೋಲಾಗಳು ಕಾಳ್ಗಿಚ್ಚು ಆರಂಭವಾದ ಸಂದರ್ಭದಿಂದ ಇದುವರೆಗೂ ಬಲಿಯಾಗಿವೆ.

ಕಾಡುಪ್ರಾಣಿಗಳಿಗೆ ಜನರಿಂದ ಆಹಾರ

ಕಾಡುಪ್ರಾಣಿಗಳಿಗೆ ಜನರಿಂದ ಆಹಾರ

ಬೆಂಕಿಯಿಂದ ಸುಟ್ಟು ಗಾಯಗೊಂಡ ಪ್ರಾಣಿಗಳನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹೆಚ್ಚಿನ ಆರೈಕೆ ನೀಡಲು ಸಾಧ್ಯವಾಗುತ್ತಿಲ್ಲ. ಮಿಗಿಲಾಗಿ ಪ್ರಾಣಿಗಳು ವಾಸಿಸುತ್ತಿದ್ದ ಕಾಡು ಭಸ್ಮವಾಗಿರುವುದಿಂದ ಮತ್ತು ಹೆಚ್ಚಿನ ಕಡೆ ಬೆಂಕಿ ಉರಿಯುತ್ತಲೇ ಇರುವುದರಿಂದ ಅವುಗಳಿಗೆ ಆವಾಸ ಸ್ಥಾನ ಹಾಗೂ ಆಹಾರದ ಕೊರತೆ ಎದುರಾಗಿದೆ. ಸಾಮಾನ್ಯವಾಗಿ ವನ್ಯಜೀವಿ ಮಾಹಿತಿ, ರಕ್ಷಣೆ ಹಾಗೂ ಶಿಕ್ಷಣ ಸೇವೆಗಳು ಜನರು ವನ್ಯಪ್ರಾಣಿಗಳಿಗೆ ಆಹಾರ ನೀಡಬಾರದು ಎಂದೇ ಸಲಹೆ ನೀಡುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರಾಣಿಗಳಿಗೆ ಜನರು ಆಹಾರ ಮತ್ತು ನೀರು ಒದಗಿಸುವುದು ಅನಿವಾರ್ಯವಾಗಿದೆ. ಅದಕ್ಕೆ ಸರ್ಕಾರ ಕೂಡ ಉತ್ತೇಜನ ನೀಡುತ್ತಿದೆ.

ಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚುಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚು

ಮತ್ತಷ್ಟು ಸಾವು-ನೋವು-ನಷ್ಟ

ಆಸ್ಟ್ರೇಲಿಯಾದ ಹಲವೆಡೆ ವ್ಯಾಪಿಸಿರುವ ದಟ್ಟ ಅರಣ್ಯದಲ್ಲಿ ಕಾಳ್ಗಿಚ್ಚು ಸರ್ವೇಸಾಮಾನ್ಯ. ಈ ವ್ಯವಸ್ಥೆಗೆ ನಮ್ಮ ಗಿಡಗಳು ಮತ್ತು ಪ್ರಾಣಿಗಳು ಸಹ ಹೊಂದಿಕೊಂಡಿದ್ದವು. ಆದರೆ ತಾಪಮಾನ ವೈಪರೀತ್ಯ ಈ ವ್ಯವಸ್ಥೆಯ ಮೇಲಿನ ಪರಿಸರದ ನಿಯಂತ್ರಣವನ್ನು ತಪ್ಪಿಸಿದೆ. ತೀವ್ರಗೊಂಡ ಬೆಂಕಿ ವನ್ಯಜೀವಿ ಸಂಕುಲಕ್ಕೆ ಭಾರಿ ಹಾನಿ ಮಾಡಿದೆ. ಈ ಬೆಂಕಿ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಪ್ರಾಣಿಗಳು ಹಾಗೂ ಅಪಾರ ಪ್ರಮಾಣದ ಸಸ್ಯ ಸಂಪತ್ತನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

English summary
Billion of animal and plants have been wiped out in Australia due to bushfire since few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X