ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿ ಮಳಿಗೆಯಲ್ಲಿ ಕಳುವು ಮಾಡಿದ ಆರೋಪದಲ್ಲಿ ಪೈಲಟ್ ಸಸ್ಪೆಂಡ್

|
Google Oneindia Kannada News

ಸಿಡ್ನಿ ವಿಮಾನ ನಿಲ್ದಾಣದ ಮಳಿಗೆಯೊಂದರಲ್ಲಿ ಶನಿವಾರ ಕಳುವು ಮಾಡಿದ್ದ ಆರೋಪದಲ್ಲಿ ಹಿರಿಯ ಪೈಲಟ್ ಅನ್ನು ಏರ್ ಇಂಡಿಯಾ ಭಾನುವಾರ ಅಮಾನತು ಮಾಡಿದೆ. ಮಾಧ್ಯಮಗಳಿಗೆ ದೊರೆತಿರುವ ಆದೇಶದ ಪ್ರತಿಯ ಪ್ರಕಾರ, ಜೂನ್ ಇಪ್ಪತ್ತೆರಡನೇ ತಾರೀಕು ಪೈಲಟ್ AI301ನ ಹಾರಾಟ ನಡೆಸಬೇಕಿತ್ತು. ಸುಂಕರಹಿತ ಮಳಿಗೆಯೊಂದರಲ್ಲಿ ವಸ್ತು ಕದ್ದ ಆರೋಪ ಆತನ ಮೇಲಿದೆ.

ಲೈಂಗಿಕ ಸಂಪರ್ಕ ಇಲ್ಲದೇ ಹೇಗಿರುತ್ತೀರಿ ಎಂದ ಸೀನಿಯರ್ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ದೂರುಲೈಂಗಿಕ ಸಂಪರ್ಕ ಇಲ್ಲದೇ ಹೇಗಿರುತ್ತೀರಿ ಎಂದ ಸೀನಿಯರ್ ಕ್ಯಾಪ್ಟನ್ ವಿರುದ್ಧ ಮಹಿಳಾ ಪೈಲಟ್ ದೂರು

ರೋಹಿತ್ ಭಾಸಿನ್ ಕಳುವು ಆರೋಪ ಎದುರಿಸುತ್ತಿರುವ ಹಿರಿಯ ಪೈಲಟ್. ಈ ಘಟನೆ ಬಗ್ಗೆ ಏರ್ ಇಂಡಿಯಾದಿಂದ ವಿಚಾರಣೆ ನಡೆಸಲು ತೀರ್ಮಾನಿಸಿದ್ದು, ಕ್ಯಾಪ್ಟನ್ ಅನ್ನು ಅಮಾನತಿನಲ್ಲಿ ಇಡಲಾಗಿದೆ. ಏರ್ ಇಂಡಿಯಾದ ಅಧಿಕಾರಿಗಳ ಪ್ರಕಾರ, ಆಸ್ಟ್ರೇಲಿಯಾ ರೀಜನಲ್ ಮ್ಯಾನೇಜರ್ ಈ ಪ್ರಕರಣವನ್ನು ಮುಖ್ಯ ಕಚೇರಿಗೆ ಗಮನಕ್ಕೆ ತಂದರು. ಆ ನಂತರ ಪೈಲಟ್ ಗೆ ಹಾರಾಟಕ್ಕೆ ಅವಕಾಶ ನೀಡಿದರೂ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅಮಾನತು ಮಾಡಲಾಗಿದೆ.

Air India

ಆತನ ಪರವಾನಗಿಯನ್ನು ಒಪ್ಪಿಸುವಂತೆ ಹಾಗೂ ಮುಖ್ಯ ನೆಲೆಯಾದ ಕೋಲ್ಕತ್ತಾವನ್ನು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

English summary
Air India senior pilot Rohith Bhasin suspended over shoplifting allegation in Sydney. Enquiry conducted by Air India regarding allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X