ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡಿದರಷ್ಟೇ ಚುನಾವಣೆಯಲ್ಲಿ ಸ್ಪರ್ಧೆ:ಮೆಹಬೂಬಾ ಮುಫ್ತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಜಮ್ಮು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ನೀಡುವವರೆಗೂ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಗುಪ್ಕರ್ ಮೈತ್ರಿಕೂಟವು 112 ಸ್ಥಾನಗಳನ್ನು ಪಡೆದಿದ್ದರೆ, ಜಮ್ಮುವಿನಲ್ಲಿ ಬಿಜೆಪಿಯು 74 ಮತಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಡಿಡಿಸಿ ಚುನಾವಣೆ: ಕಾಶ್ಮೀರ ಗುಪ್ಕರ್ ಅಲೈಯನ್ಸ್‌ಗೆ, ಜಮ್ಮು ಬಿಜೆಪಿ ತೆಕ್ಕೆಗೆಡಿಡಿಸಿ ಚುನಾವಣೆ: ಕಾಶ್ಮೀರ ಗುಪ್ಕರ್ ಅಲೈಯನ್ಸ್‌ಗೆ, ಜಮ್ಮು ಬಿಜೆಪಿ ತೆಕ್ಕೆಗೆ

ಎನ್‌ಡಿಟಿವಿಗೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ನೀಡುವವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Wont Fight Elections Till Article 370 Restored: Mehbooba Mufti

ಅದು ವಿಧಾನಸಭೆ ಚುನಾವಣೆಯೇ ಆಗಿರಲಿ, ನಾವು ಸ್ಪಧಿಸುವುದಿಲ್ಲ, ಅಂತಹ ಸಮಯ ಬಂದಾಗ ಸಭೆ ನಡೆಸುತ್ತೇವೆ, ಆದರೆ ಆ ಸ್ಪರ್ಧೆಯಲ್ಲಿ ನಾವಿಲ್ಲ ಎನ್ನುವುದನ್ನೂ ತಿಳಿಸುತ್ತೇವೆ.

ಕುತೂಹಲ ಮೂಡಿಸಿದ್ದ ಜಮ್ಮು ಮತ್ತು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿ ಚುನಾವಣೆಯಲ್ಲಿ (ಡಿಡಿಸಿ) ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ನೇತೃತ್ವದ ಗುಪ್ಕರ್ ಅಲೈಯನ್ಸ್ 280 ಸೀಟುಗಳ ಪೈಕಿ 112 ಸೀಟುಗಳಲ್ಲಿ ಗೆಲುವು ಮತ್ತು ಮುನ್ನಡೆ ಸಾಧಿಸುವ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ.

ಆದರೆ ಕಣಿವೆ ರಾಜ್ಯದಲ್ಲಿ ಕಮಲ ಮೇಲುಗೈ ಸಾಧಿಸಿದೆ. ಏಕಾಂಗಿಯಾಗಿ ಹೋರಾಡಿದ ಬಿಜೆಪಿ 74 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ರದ್ದತಿ ಬಳಿಕ ಇದೇ ಮೊದಲ ಬಾರಿ ಡಿಡಿಸಿ ಚುನಾವಣೆ ನಡೆದಿದ್ದು, 370ನೇ ವಿಧಿಯನ್ನು ಮರಳಿ ಸ್ಥಾಪಿಸುವ ಶಪಥದೊಂದಿಗೆ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಇತರೆ ಸ್ಥಳೀಯ ಪಕ್ಷಗಳು ಕೈಜೋಡಿಸಿ ಗುಪ್ಕರ್ ಅಲೈಯನ್ಸ್ (ಪಿಎಜಿಡಿ) ಒಕ್ಕೂಟ ರಚಿಸಿ ಚುನಾವಣೆ ಎದುರಿಸಿವೆ.

English summary
Calling the results of the Jammu and Kashmir local polls "very encouraging", former Chief Minister Mehbooba Mufti said today that she would not contest any election until special status was restored under Article 370.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X