ಮತ್ತೆ ಉಗ್ರರ ಅಟ್ಟಹಾಸ: ಗುಂಡೇಟಿಗೆ ಮಹಿಳಾ ಪೊಲೀಸ್ ಅಧಿಕಾರಿ ಬಲಿ
ಶ್ರೀನಗರ, ಮಾರ್ಚ್ 16: ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ (ಎಸ್ಪಿಓ) ಖುಷ್ಬೂ ಜಾನ್ ಅವರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಉಗ್ರರ ಬಗ್ಗೆ ಸಹಾನುಭೂತಿ: ಕಾಶ್ಮೀರದಲ್ಲಿ ಇನ್ನಷ್ಟು ಮಂದಿ ಬಂಧನ ಸಾಧ್ಯತೆ
ಶನಿವಾರ ಶೋಫಿಯಾನ್ ಜಿಲ್ಲೆಯ ವೆಹಿಲ್ ಗ್ರಾಮದಲ್ಲಿ ಮಧ್ಯಾಹ್ನ 2.40ರ ವೇಳೆಗೆ ಈ ಬರ್ಬರ ಹತ್ಯೆ ನಡೆದಿದೆ. ಖುಷ್ಬೂ ಅವರ ನಿವಾಸದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚೇತರಿಸಿಕೊಳ್ಳದೆ ಅವರು ಮೃತಪಟ್ಟಿದ್ದಾರೆ.
ಖುಷ್ಬೂ ಅವರ ಮನೆಯ ಹೊರಗೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದಾರೆ.
A lady special police officer (SPO) was shot & killed outside her home in South Kashmir earlier today. I condemn this act of terror & extend my condolences to her family & all her J&K police colleagues.
— Omar Abdullah (@OmarAbdullah) 16 March 2019
ಗ್ರಾಮದ ಸುತ್ತಮುತ್ತ ಸಶಸ್ತ್ರಪಡೆಯನ್ನು ನಿಯೋಜಿಸಲಾಗಿದ್ದು, ಹಂತಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ಪಾಕಿಸ್ತಾನಿ ಪಡೆಗಳು ಶನಿವಾರ ಬೆಳಿಗ್ಗೆ ಕದನ ವಿರಾಮ ಉಲ್ಲಂಘನೆ ಮಾಡಿದ ವರದಿಯ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಪೂಂಚ್ ಜಿಲ್ಲೆಯ ಮಾಂಕೋಟ್ ವಲಯದಲ್ಲಿ ಮಧ್ಯಾಹ್ನ ಕೂಡ ಕದನ ವಿರಾಮ ಉಲ್ಲಂಘನೆಯಾಗಿದೆ.