ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾರೋಗ್ಯದ ರಜಾದಲ್ಲಿದ್ದರೂ ಶ್ರೀನಗರದ ಸ್ಕ್ವಾಡ್ರನ್ ನಲ್ಲೇ ಅಭಿನಂದನ್

By ಅನಿಲ್ ಆಚಾರ್
|
Google Oneindia Kannada News

ಶ್ರೀನಗರ್, ಮಾರ್ಚ್ 26: ಕಳೆದ ತಿಂಗಳು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕು, ಅದಾಗಿ ಎರಡು ದಿನಗಳ ನಂತರ ಭಾರತಕ್ಕೆ ಹಿಂತಿರುಗಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರು ಶ್ರೀನಗರ್ ನಲ್ಲಿನ ತಮ್ಮ ಸ್ಕ್ವಾಡ್ರನ್ ನಲ್ಲೇ ಇದ್ದಾರೆ. ನಾಲ್ಕು ವಾರಗಳ ರಜಾ ಇದ್ದರೂ ಶ್ರೀನಗರ್ ದಲ್ಲಿನ ಸ್ಕ್ವಾಡ್ರನ್ ಗೆ ವಾಪಸಾದರು ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಜಾದಲ್ಲಿದ್ದರೂ ಚೆನ್ನೈನಲ್ಲಿರುವ ತಮ್ಮ ಕುಟುಂಬದ ಜತೆಗೆ ಇರಲು ತೆರಳದೆ ಶ್ರೀನಗರದಲ್ಲಿ ಸ್ಕ್ವಾಡ್ರನ್ ನಲ್ಲೇ ಇರುವುದಕ್ಕೆ ನಿಶ್ಚಯಿಸಿದರು. ಪಾಕಿಸ್ತಾನದಿಂದ ಭಾರತಕ್ಕೆ ಅಭಿನಂದನ್ ಹಿಂತಿರುಗಿದ ನಂತರ ಎರಡು ವಾರಗಳ ಕಾಲ ಅನುಸರಿಸಬೇಕಾದ ಎಲ್ಲ ನಿಯಮಗಳನ್ನು ಪೂರೈಸಿದ ಮೇಲೆ ಹನ್ನೆರಡು ದಿನ ರಜಾ ಮೇಲೆ ತೆರಳಿದರು.

ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ

ವರ್ತಮಾನ್ ಅವರು ಚೆನ್ನೈನಲ್ಲಿ ತಮ್ಮ ಪೋಷಕರ ಮನೆಗೆ ಕುಟುಂಬದ ಜತೆ ಸಮಯ ಕಳೆಯಲು ತೆರಳಬಹುದಿತ್ತು. ಆದರೆ ಅವರ ಸ್ಕ್ವಾಡ್ರನ್ ಇರುವ ಶ್ರೀನಗರಕ್ಕೆ ತೆರಳಲು ಬಯಸಿದರು ಎಂದು ಮೂಲಗಳು ತಿಳಿಸಿವೆ. ನಾಲ್ಕು ವಾರಗಳ ಅನಾರೋಗ್ಯದ ರಜಾ ನಂತರ ವೈದ್ಯಕೀಯ ಮಂಡಳಿ ಅವರ ಕ್ಷಮತೆಯನ್ನು ಪರಿಶೀಲಿಸಲಿದೆ. ಆ ನಂತರ ಅಭಿನಂದನ್ ಆಸೆಯಂತೆ ಮತ್ತೆ ಯುದ್ಧ ವಿಮಾನ ಚಲಾಯಿಸಬಹುದೇ ಎಂದು ನಿರ್ಧರಿಸಲಿದೆ.

Wing Commander Abhinandan Varthaman returns to his squadron in Srinagar

ಫೆಬ್ರವರಿ ಇಪ್ಪತ್ತೇಳರಂದು ಪಾಕಿಸ್ತಾನ ಸೇನೆಯು ಅಭಿನಂದನ್ ರನ್ನು ಸೆರೆ ಹಿಡಿದಿತ್ತು. ಪಾಕಿಸ್ತಾನಿ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ ನಂತರ ಈ ಘಟನೆ ನಡೆದಿತ್ತು. ಮಾರ್ಚ್ ಒಂದರಂದು ಪಾಕಿಸ್ತಾನವು ಅಭಿನಂದನ್ ರನ್ನು ಬಿಡುಗಡೆ ಮಾಡಿತ್ತು.

English summary
IAF pilot Abhinandan Varthaman, who was captured by Pakistan on February 27th, returned to India two days later, has gone back to his squadron in Srinagar though he is on a four-week sick leave, official sources said Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X