ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಜೈ ಎಂದ ಲೋಕಸಭೆ ಚುನಾವಣೆ ಅಭ್ಯರ್ಥಿ

|
Google Oneindia Kannada News

ಶ್ರೀನಗರ, ಮಾರ್ಚ್ 25: ಜಮ್ಮು ಮತ್ತು ಕಾಶ್ಮೀರ ಕುಪ್ವಾರಾ ಲೋಕಸಭಾ ಕ್ಷೇತ್ರದ ನ್ಯಾಶ್ನಲ್ ಕಾನ್ಫಿರೆನ್ಸ್ ಅಭ್ಯರ್ಥಿ ಅಕ್ಬರ್ ಲೊನೆ ಹೊಸ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನಕ್ಕೆ ಅವಮಾನವಾಗುವಂತೆ ಮಾತನಾಡಿದರೆ ನಾನು ಸುಮ್ಮನಿರುವುದಿಲ್ಲ, ಅಂಥವರಿಗೆ ನಾನೂ ಅವಮಾನ ಮಾಡುತ್ತೇನೆ ಎಂದಿದ್ದರು.

ಇಮ್ರಾನ್ ಖಾನ್ ಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ಇಮ್ರಾನ್ ಖಾನ್ ಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

"ಪಾಕಿಸ್ತಾನ ಸಮೃದ್ಧಿಯಿಂದಿರಬೇಕು. ಜೊತೆಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಸೌಹಾರ್ದವಾಗಿರಬೇಕು. ಯಾರಾದರೂ ಪಾಕಿಸ್ತಾನಕ್ಕೆ ನೋವಾಗುವಂತೆ ಮಾತನಾಡಿದರೆ ಅಂಥವವರಿಗೆ ನಾನು ಹತ್ತು ಪಟ್ಟು ಹೆಚ್ಚು ನೋವು ಮಾಡುತ್ತೇನೆ" ಎಂದು ಅಕ್ಬರ್ ಹೇಳಿದರು.

Will abuse those who abuse Pakistan: Akbar Lone

"ಪಾಕಿಸ್ತಾನ ಮುಸ್ಲಿಂ ದೇಶ, ಅಕಸ್ಮಾತ್ ಅದಕ್ಕೆ ನೋವಾಗುವಂತೆ ನಾನು ಮಾತನಾಡಿದರೆ ನನಗೇ ನಾನು ಮೋಸ ಮಾಡಿಕೊಂಡಂತೆ" ಎಂದು ಅವರು ಹೇಳಿದರು.

ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ

ಪುಲ್ವಾಮಾದಲ್ಲಿ ನಲವತ್ತಕ್ಕೂ ಹೆಚ್ಚು ಸೈನಿಕರನ್ನು ಜೈಶ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಬಲಿತೆಗೆದುಕೊಂಡ ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಳಸಿದೆ. ಇಡೀ ದೇಶವೂ ಪಾಕಿಸ್ತಾನವನ್ನು ಹಳಿಯುತ್ತಿದ್ದರೆ ಅಕ್ಬರ್ ಅವರು ಪಾಕಿಸ್ತಾನವನ್ನು ಸಮರ್ಥಿಸುತ್ತಿದ್ದಾರೆ.

English summary
Akbar Lone, the National Conference candidate from Kupwara for the upcoming Lok Sabha election, has courted controversy by raising pro-Pakistan slogans and even said at a recent rally that he would abuse those who abuse the neighbouring country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X