ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಇದು...

|
Google Oneindia Kannada News

ಶ್ರೀನಗರ, ಜೂನ್ 08: ನೋಡಲು ಇದೊಂದು ಕುಗ್ರಾಮ. ಇಲ್ಲಿಗೆ ಬರಲು ಒಂದೊಳ್ಳೆ ರಸ್ತೆ ಸಂಪರ್ಕ ಕೂಡ ಇಲ್ಲ. ಈ ಹಳ್ಳಿಗೆ ಬರಬೇಕೆಂದರೆ 18 ಕಿ.ಮೀ ನಡೆಯಬೇಕು. ಇಲ್ಲಿನ ಬಹುಪಾಲು ಮಂದಿ ಅಲೆಮಾರಿಗಳು. ಆದರೆ ಕೊರೊನಾ ವಿರುದ್ಧ ನೀಡಲಾಗುತ್ತಿರುವ ಲಸಿಕೆ ವಿಚಾರದಲ್ಲಿ ಈ ಹಳ್ಳಿ ಈಗ ಸುದ್ದಿಯಲ್ಲಿದೆ. ಜಮ್ಮು ಕಾಶ್ಮೀರದ ಈ ಕುಗ್ರಾಮ ಇದೀಗ ಕೊರೊನಾ ವಿರುದ್ಧ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ಮೊದಲ ಗ್ರಾಮ ಎಂದು ಹೊಗಳಿಸಿಕೊಂಡಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ನಡುವೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಲಸಿಕೆ ಅಭಾವ ಎದುರಾಗಿದೆ. ಈ ನಡುವೆ ಜಮ್ಮು ಕಾಶ್ಮೀರದಲ್ಲಿನ ಈ ಗ್ರಾಮ ತನ್ನೆಲ್ಲಾ ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡುವ ಮೂಲಕ, ಎಲ್ಲಾ ವಯಸ್ಕರಿಗೆ ಲಸಿಕೆ ನೀಡಿದ ದೇಶದ ಮೊದಲ ಗ್ರಾಮ ಎಂದು ಕರೆಸಿಕೊಂಡಿದೆ. ಮುಂದೆ ಓದಿ...

ಕೊರೊನಾ ದಾಖಲೆ: ಭಾರತೀಯರಿಗೆ ಖುಷಿ ಕೊಡುವ ಅಂಕಿ-ಅಂಶಗಳು! ಕೊರೊನಾ ದಾಖಲೆ: ಭಾರತೀಯರಿಗೆ ಖುಷಿ ಕೊಡುವ ಅಂಕಿ-ಅಂಶಗಳು!

 ಬಂಡಿಪೋರಾದ ವೆಯಾನ್ ಹಳ್ಳಿ

ಬಂಡಿಪೋರಾದ ವೆಯಾನ್ ಹಳ್ಳಿ

ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ವೆಯಾನ್ ಎಂಬ ಪುಟ್ಟ ಹಳ್ಳಿಯಿದೆ. ಇಲ್ಲಿ ಸದ್ಯಕ್ಕೆ 18 ವರ್ಷ ಮೇಲ್ಪಟ್ಟ 362 ವಯಸ್ಕರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿ ಪೂರೈಸಿದ ದೇಶದ ಮೊದಲ ಹಳ್ಳಿ ಎಂದು ಕರೆಸಿಕೊಂಡಿದೆ.

 ಇಲ್ಲಿಗೆ ಬರಲು 18 ಕಿ.ಮೀ ನಡೆಯಬೇಕು

ಇಲ್ಲಿಗೆ ಬರಲು 18 ಕಿ.ಮೀ ನಡೆಯಬೇಕು

ಈ ಗ್ರಾಮ ಬಂಡಿಪೋರಾ ಜಿಲ್ಲಾ ಕೇಂದ್ರದಿಂದ ಕೇವಲ 28 ಕಿ.ಮೀ ದೂರದಲ್ಲಿದೆ. ಆದರೆ ಇಲ್ಲಿಗೆ ಬರಲು ರಸ್ತೆ ಇಲ್ಲ. ಹೀಗಾಗಿ 18 ಕಿ.ಮೀ ದೂರವನ್ನು ಕಾಲ್ನಡಿಯಲ್ಲಿಯೇ ಸಾಗಬೇಕಿದೆ. ಇದಾಗ್ಯೂ ಆರೋಗ್ಯ ಕಾರ್ಯಕರ್ತರು ಇಲ್ಲಿನ ಎಲ್ಲರಿಗೂ ಲಸಿಕೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.

"ಈ ಗ್ರಾಮದಲ್ಲಿ ಕೊರೊನಾ ಲಸಿಕೆ ನೀಡುವುದು ಅಷ್ಟು ಸುಲಭವಿರಲಿಲ್ಲ. ಇಲ್ಲಿ ಅಲೆಮಾರಿ ಕುಟುಂಬಗಳೇ ಹೆಚ್ಚಿರುವ ಕಾರಣ ಜಾನುವಾರುಗಳನ್ನು ಮೇಯಿಸಲು ಹೋಗುತ್ತಿರುತ್ತಾರೆ. ಎಲ್ಲಾ ನಿವಾಸಿಗಳಿಗೆ ಲಸಿಕೆ ಹಾಕುವ ಕಾರ್ಯ ನಿಜಕ್ಕೂ ಸವಾಲೆನಿಸಿತ್ತು" ಎಂದು ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಬಶೀರ್ ಅಹ್ಮದ್ ಖಾನ್ ವಿವರಿಸುತ್ತಾರೆ.
 ಗ್ರಾಮದಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲ

ಗ್ರಾಮದಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲ

ಗ್ರಾಮದಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲ. ಹೀಗಾಗಿ ನಗರ ವಾಸಿಗಳಂತೆ ಇಲ್ಲಿನವರು ಲಸಿಕೆಗಳಿಗಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ ಬಶೀರ್ ಅಹ್ಮದ್.
ನಿರ್ದಿಷ್ಟ ಸಮಯದಲ್ಲಿ ಎಲ್ಲಾ ವಯಸ್ಕ ಜನಸಂಖ್ಯೆಗೂ ಲಸಿಕೆ ನೀಡಲು ಹತ್ತು ಕಾರ್ಯತಂತ್ರಗಳನ್ನು ಜಮ್ಮು ಕಾಶ್ಮೀರ ಸರ್ಕಾರ ಹೆಣೆದಿದ್ದು, ಆ ಮಾದರಿಯಲ್ಲಿಯೇ ಈ ಕುಗ್ರಾಮದಲ್ಲಿ ಲಸಿಕಾ ಅಭಿಯಾನ ನಡೆಸಲಾಗಿದೆ.

 ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಕಾರ್ಯಕರ್ತರು

ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಕಾರ್ಯಕರ್ತರು

ಲಸಿಕೆ ಕುರಿತು ಆರಂಭದಲ್ಲಿ ಇಲ್ಲಿನ ಜನರಿಗೂ ಹಿಂಜರಿಕೆ ಇತ್ತು. ಆದರೆ ಆರೋಗ್ಯ ಕಾರ್ಯಕರ್ತರು ಲಸಿಕೆ ಕುರಿತು ಜಾಗೃತಿ ಮೂಡಿಸಿ ಅವರ ಮನವೊಲಿಸಿದ್ದಾರೆ. ಜಮ್ಮು ಕಾಶ್ಮೀರ ಲಸಿಕಾ ಅಭಿಯಾನದಲ್ಲಿ ಮುಂದಿದ್ದು, ಈಗಾಗಲೇ 45 ಮೇಲ್ಪಟ್ಟ ಶೇ.70 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A remote hamlet in Bandipora district of Jammu and Kashmir has become the first village in India to vaccinate all its adult population against COVID-19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X