ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಳಂಬ ನೀತಿ ಸಂಸ್ಕೃತಿಯಿಂದ ದೇಶವನ್ನು ಹೊರ ತರುತ್ತೇವೆ: ಮೋದಿ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 3: ಜಮ್ಮು-ಕಾಶ್ಮೀರದ ಲೇಹ್ ನಲ್ಲಿ ಭಾನುವಾರ ಹಲವು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸರಕಾರ ಕೆಲಸ ಮಾಡುತ್ತಿರುವ ವೇಗವೇ ಸಾಕ್ಷಿ. ಇದು ನಿಧಾನ ಗತಿಯ ಸಂಸ್ಕೃತಿ ನಂಬುವುದಿಲ್ಲ ಎಂದು ಅವರು ಹೇಳಿದರು.

"ನಮ್ಮ ಸರಕಾರ ವೇಗವಾಗಿ ಕೆಲಸ ಮಾಡುವುದನ್ನು ನಂಬುತ್ತದೆ. ಈ ದೇಶದಲ್ಲಿ ಎಲ್ಲ ಕೆಲಸ ನಿಧಾನಕ್ಕೆ ಮಾಡುವ ಸಂಸ್ಕೃತಿ ಇತ್ತು. ಇನ್ನು ಮುಂದಿನ ಐದು ವರ್ಷದಲ್ಲಿ ಈ ವಿಳಂಬ ನೀತಿಯ ಸಂಸ್ಕೃತಿಯಿಂದ ಸಂಪೂರ್ಣವಾಗಿ ದೇಶವನ್ನು ಹೊರಗೆ ತರಲು ಬಯಸುತ್ತೇನೆ. ನಾವು ಏನೆಲ್ಲ ಯೋಜನೆ ಆರಂಭಿಸುತ್ತೇವೋ ಅದನ್ನು ಅಂದುಕೊಂಡ ಸಮಯದೊಳಗೆ ಪೂರ್ಣಗೊಳಿಸಲು ನಮ್ಮ ಪ್ರಯತ್ನ ಹಾಕುತ್ತೇವೆ" ಎಂದು ಮೋದಿ ಹೇಳಿದ್ದಾರೆ.

ದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿ ದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿ

ಈ ಯೋಜನೆಗಳ ಉದ್ಘಾಟನೆ ಮೂಲಕ ಈ ಪ್ರದೇಶದ ಸಂಪರ್ಕ ವ್ಯವಸ್ಥೆ, ಲಡಾಖ್ ನ ಪ್ರವಾಸೋದ್ಯಮ ವೃದ್ಧಿ ಆಗುತ್ತದೆ. ಇದರೊಂದಿಗೆ ಉದ್ಯೋಗಾವಕಾಶಗಳು ಸಹ ವೃದ್ಧಿ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.

We’ve left the culture of delays behind, says PM Modi at Leh

ಐದು ಹೊಸದಾದ ಚಾರಣ ಮಾರ್ಗ ಉದ್ಘಾಟನೆ ಮಾಡುವುದಾಗಿ ಹೇಳಿದ ಅವರು, ಈ ಮಾರ್ಗಗಳ ಮೂಲಕ ನಿಮ್ಮ ಪ್ರವಾಸದ ಅನುಭೂತಿ ಇನ್ನಷ್ಟು ಅದ್ಭುತವಾಗಿರುತ್ತದೆ ಎಂದಿದ್ದಾರೆ.

We’ve left the culture of delays behind, says PM Modi at Leh

ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ? ವಿಶ್ಲೇಷಣೆ : ಪ್ರಜಾತಂತ್ರದಲ್ಲಿ ಮೋದಿಯ ಬಜೆಟ್ ತಂತ್ರ ಪರಿಣಾಮ ಬೀರುತ್ತಾ?

ಲಡಾಖ್ ಅಟಾನಮಸ್ ಹಿಲ್ ಡೆವಲಪ್ ಮೆಂಟ್ ಕೌನ್ಸಿಲ್ ಕಾಯ್ದೆಗೆ ಬದಲಾವಣೆ ತಂದ ಬಗ್ಗೆ ಮಾತನಾಡಿದ ಅವರು, ಸಂಬಂಧಪಟ್ಟ ವೆಚ್ಚದ ವಿಚಾರದಲ್ಲಿ ಕೌನ್ಸಿಲ್ ಗೆ ಹೆಚ್ಚು ಅಧಿಕಾರ ನೀಡಲಾಗಿದೆ. ಈ ಭಾಗದ ಅಭಿವೃದ್ಧಿಗೆ ನೀಡಲಾದ ಮೊತ್ತವನ್ನು ಈಗ ಅಟಾನಮಸ್ ಕೌನ್ಸಿಲ್ ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದಾರೆ.

English summary
Inaugurating a number of projects in Jammu and Kashmir’s Leh, Prime Minister Narendra Modi on Sunday said that the speed with which the government was working was proof that it did not believe in the culture of delays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X