ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮನ ಮಗನನ್ನು ಹೊತ್ತು ಕಣ್ಣೀರಿಟ್ಟ ಪೊಲೀಸ್: ವೈರಲ್ ಚಿತ್ರ

|
Google Oneindia Kannada News

ಶ್ರೀನಗರ, ಜೂನ್ 18: ಅನಂತ್ ನಾಗ್ ಉಗ್ರದಾಳಿಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಭಾನುವಾರ ಮೃತರಾದ ಅರ್ಷದ್ ಖಾನ್ ಎಂಬ ಪೊಲೀಸ್ ಅಧಿಕಾರಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಅವರ ಮಗನನ್ನು ಹೊತ್ತು ಪೊಲೀಸ್ ವೊಬ್ಬರು ಕಣ್ಣೀರಿಡುತ್ತಿರುವ ಭಾವುಕ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಣ್ಣೀರುಕ್ಕಿಸಿತು, ಹೆಮ್ಮೆ ಮೂಡಿಸಿತು ಹುತಾತ್ಮ ಯೋಧನ ತಂಗಿಯ ಮದುವೆ...ಕಣ್ಣೀರುಕ್ಕಿಸಿತು, ಹೆಮ್ಮೆ ಮೂಡಿಸಿತು ಹುತಾತ್ಮ ಯೋಧನ ತಂಗಿಯ ಮದುವೆ...

ಅನಂತ್ ನಾಗ್ ನ ಸದಾರ್ ಪೊಲೀಸ್ ಸ್ಟೇಷನ್ನಿನ ಸ್ಟೇಷನ್ ಹೌಸ್ ಆಫೀಸರ್(ಎಸ್ ಎಚ್ ಒ) ಆಗಿದ್ದ ಖಾನ್, ಜೂನ್ 12 ರಂದು ಅನಂತ್ ನಾಗ್ ನಲ್ಲಿ ನಡೆದ ಉಗ್ರದಾಳಿಯಲ್ಲಿ ಗಂಭೀರವಾಗಿ ಗಾಯಗೊಂದಿದ್ದರು. ಅವರನ್ನು ಕೂಡಲೆ ದೆಹಲಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 16 ರಂದು ಮೃತರಾದರು.

 Viral picture: police carrying son of martyred inspector

ಅವರ ಅಂತ್ಯ ಸಂಸ್ಕಾರ ಸೋಮವಾರ ನಡೆದಿದ್ದು, ಈ ಸಂದರ್ಭದಲ್ಲಿ ಅವರ 4 ವರ್ಷದ ಮಗ ಉಹ್ಬಾನ್ ನನ್ನು ಖಾನ್ ಅವರ ಸಹೋದ್ಯೋಗಿ ಹಸೀಬ್ ಮುಘಲ್ ಎಂಬ ಪೊಲೀಸರೊಬ್ಬರು ಎತ್ತಿಕೊಂಡಿದ್ದು, ಅವರ ಮುಖದಲ್ಲಿ ದುಃಖ ಉಮ್ಮಳಿಸುತ್ತಿರುವ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 Viral picture: police carrying son of martyred inspector

40 ವರ್ಷ ವಯಸ್ಸಿನ ತಂದೆಗೆ ಉಹ್ಬಾನ್ ಕೊನೆಯ ನಮನ ಸಲ್ಲಿಸಿದರು. ಪತ್ನಿ, ತಂದೆ-ತಾಯಿ, ಇಬ್ಬರು ಮಕ್ಕಳು ಮತ್ತಿ ಓರ್ವ ಸಹೋದರನನ್ನು ಖಾನ್ ಅಗಲಿದ್ದಾರೆ. ಖಾನ್ ಅವರ ಇನ್ನೋರ್ವ ಪುತ್ರ ಕೇವಲ 18 ತಿಂಗಳಿನವನಾಗಿದ್ದು, ಆತನನ್ನು ಅಂತ್ಯ ಸಂಸ್ಕಾರಕ್ಕೆ ಕರೆದುಕೊಂಡು ಬಂದಿರಲಿಲ್ಲ.

English summary
Picture of a police who is carrying son of mrtyred police who lost life in anantnag terror attack, becomes viral now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X