• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇಬ್ಬರು ಉಗ್ರರು ಸೇರಿ 5 ಮಂದಿ ಬಂಧನ

|
Google Oneindia Kannada News

ಶ್ರೀನಗರ, ಏಪ್ರಿಲ್ 13: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು, ಮೂವರು ಶಂಕಿತ ಉಗ್ರರು ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ.

ಶೋಧದ ವೇಳೆ ಶೌಕತ್ ಅಹ್ಮದ್ ಗನಿ, ಮೊಹಮ್ಮದ್ ಯಾಸೀನ್ ರಾಥರ್ ಮತ್ತು ಗುಲಾಮ್ ನಬಿ ರಾಥರ್ ಎಂಬ ಮೂವರು ಸ್ಥಳೀಯ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರ; ಎನ್‌ಕೌಂಟರ್‌ನಲ್ಲಿ ಏಳು ಉಗ್ರರ ಹತ್ಯೆಜಮ್ಮು ಕಾಶ್ಮೀರ; ಎನ್‌ಕೌಂಟರ್‌ನಲ್ಲಿ ಏಳು ಉಗ್ರರ ಹತ್ಯೆ

ಕುಪ್ವಾರಾದ ಹಂದ್ವಾರದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಸುಳಿವು ಆಧರಿಸಿ ಭದ್ರತಾ ಪಡೆಗಳು ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಈ ವೇಳೆ ಉಗ್ರರಾದ ಸಲೀಂ ಯುಸೂಫ್ ರಾಥರ್ ಮತ್ತು ಇಕ್ಲಾಕ್ ಅಹ್ಮದ್ ಶೇಖ್ ನನ್ನು ಬಂಧಿಸಿದ್ದಾರೆ.

ಜಮ್ಮು ಕಾಶ್ಮೀರದ ಶೋಪಿಯಾನ್ ಹಾಗೂ ಪುಲ್ವಾಮಾ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆಸಿದ ಎರಡು ಎನ್‌ಕೌಂಟರ್‌ನಲ್ಲಿ ಭಯೋತ್ಪಾದನಾ ಸಂಘಟನೆ ಅನ್ಸಾರ್ ಘಜ್ವಾತುಲ್ ಹಿಂದ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಒಳಗೊಂಡಂತೆ ಏಳು ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಶೋಪಿಯಾನ್ ಪಟ್ಟಣದಲ್ಲಿ ಗುರುವಾರ ಸಂಜೆ ಭದ್ರತಾ ಪಡೆ ಎನ್‌ಕೌಂಟರ್ ನಡೆಸಿದ್ದು, ಐದು ಉಗ್ರರನ್ನು ಹತ್ಯೆ ಮಾಡಿತ್ತು. ಶುಕ್ರವಾರ ಇನ್ನಿಬ್ಬರನ್ನು ತ್ರಾಲ್ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದರು.

English summary
Police on Tuesday claimed to have arrested two local militants and three over ground workers in Handwara area of north-Kashmir’s Kupwara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X