ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ವಿಮಾನ ನಿಲ್ದಾಣದಲ್ಲಿ 5 ನಿಮಿಷಗಳ ಅಂತರದಲ್ಲೇ ಎರಡು ಸ್ಫೋಟ

|
Google Oneindia Kannada News

ಶ್ರೀನಗರ್, ಜೂನ್ 27: ಜಮ್ಮು ವಿಮಾನ ನಿಲ್ದಾಣದಲ್ಲಿ ಕೇವಲ ಐದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಸ್ಫೋಟಗಳ ಬೆನ್ನಲ್ಲೇ ಡ್ರೋನ್ ದಾಳಿ ಬಗ್ಗೆ ಭಾರತೀಯ ವಾಯು ಪಡೆ ಸಿಬ್ಬಂದಿ ತನಿಖೆ ಶುರು ಮಾಡಿದ್ದಾರೆ.

ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಜಮ್ಮು ಕಾಶ್ಮೀರ ಎನ್‌ಕೌಂಟರ್: ಎಲ್ಇಟಿ ಉಗ್ರ ಮುದಾಸೀರ್ ಸೇರಿ ಮೂವರ ಹತ್ಯೆಜಮ್ಮು ಕಾಶ್ಮೀರ ಎನ್‌ಕೌಂಟರ್: ಎಲ್ಇಟಿ ಉಗ್ರ ಮುದಾಸೀರ್ ಸೇರಿ ಮೂವರ ಹತ್ಯೆ

ಭಾನುವಾರ ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿದೆ. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

Two Explosion At Jammu Airport: Minister Rajnath Singh Speaks To Vice Air Chief On The Incident

ಕೇಂದ್ರ ತನಿಖಾ ತಂಡದಿಂದ ವಿಚಾರಣೆ:

ಜಮ್ಮು ವಿಮಾನ ನಿಲ್ದಾಣದಲ್ಲಿ ನಡೆದಿರುವ ಎರಡು ಸ್ಫೋಟಗಳ ಗಂಭೀರತೆಯನ್ನು ಅರಿತುಕೊಂಡು ಕೇಂದ್ರ ತನಿಖಾ ತಂಡವೇ ಪ್ರಕರಣದ ತನಿಖೆಗೆ ಮುಂದಾಗಿದೆ. 'ವಾಯು ಪಡೆ ಮುಖ್ಯಸ್ಥ ಏರ್ ಮಾರ್ಷಲ್ ಹೆಚ್.ಎಸ್ ಅರೋರಾ ಮತ್ತು ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಜೊತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿದ್ದು, ಇಬ್ಬರು ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ,' ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.

Recommended Video

Virat Kohliಗೆ ಇಷ್ಟೊಂದು ಅವಮಾನ ಆಗ್ತಿರೋದು ಯಾಕೆ !! | Oneindia Kannada

ಸತ್ವಾರಿ ಪ್ರದೇಶದ ಜಮ್ಮು ವಿಮಾನ ನಿಲ್ದಾಣದ ರನ್ ವೇ ಮತ್ತು ವಾಯು ಸಂಚಾರವನ್ನು ಭಾರತೀಯ ವಾಯು ಪಡೆ ನಿಯಂತ್ರಿಸುತ್ತಿದೆ. ಪ್ರಯಾಣಿಕರನ್ನು ಹೊಂದಿರುವ ವಿಮಾನಗಳ ಹಾರಾಟವನ್ನು ಸಹ ನಿರ್ವಹಿಸಲಾಗುತ್ತದೆ.

English summary
Two Explosion At Jammu Airport: Defence Minister Rajnath Singh Speaks To Vice Air Chief On The Incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X