• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎನ್‌ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಹತ್ಯೆ

|
Google Oneindia Kannada News

ಹಂದ್ವಾರ, ಜುಲೈ 07: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಸೇರಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಹುಕಾಲದಿಂದ ಉಗ್ರರ ಪಟ್ಟಿಯಲ್ಲಿದ್ದ ಮೆಹ್ರಾಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್, ಬುರ್ಹಾನ್ ವಾನಿ ಎಂಬ ಉಗ್ರರನ್ನು ಭದ್ರತಾ ಪಡೆಗಳು ಇಂದು ಹತ್ಯೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.

ಉಗ್ರ ಹಫೀಜ್ ನಿವಾಸದ ದಾಳಿ ಹಿಂದೆ ಭಾರತದ 'RAW' ಕೈವಾಡ: ಪಾಕಿಸ್ತಾನಉಗ್ರ ಹಫೀಜ್ ನಿವಾಸದ ದಾಳಿ ಹಿಂದೆ ಭಾರತದ 'RAW' ಕೈವಾಡ: ಪಾಕಿಸ್ತಾನ

ಇನ್ನು ಹತ್ಯೆಯಾಗಿರುವ ಮತ್ತೊಬ್ಬ ಉಗ್ರ ಬುರ್ಹಾನ್ ವಾನಿ ಕೂಡ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ದಕ್ಷಿಣ ಕಾಶ್ಮೀರದಲ್ಲಿ ಹಲವು ಅಧಿಕಾರಿಗಳು ಹಾಗೂ ನಾಗರೀಕರ ಹತ್ಯೆಯಲ್ಲಿ ಈತನ ಕೈವಾಡವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲ್ವಾಯಿನನ್ನು ಹತ್ಯೆ ಮಾಡಿರುವುದು ದೊಡ್ಡ ಯಶಸ್ಸು ಸಿಕ್ಕಂತಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ಹೇಳಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಾಗೂ ಹಳೆಯ ಉಗ್ರ ಈತನಾಗಿದ್ದಾನೆ. ಇಂದು ನಡೆದ ಎನ್‌ಕೌಂಟರ್ ನಲ್ಲಿ ಈತನನ್ನು ಹತ್ಯೆ ಮಾಡಲಾಗಿದೆ.

ಸಾಕಷ್ಟು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಈತ ತೊಡಗಿಕೊಂಡಿದ್ದ. ಈತನ ಹತ್ಯೆಯಿಂದ ದೊಡ್ಡ ಯಶಸ್ಸು ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

English summary
A top Hizbul Mujahideen commander was killed in an encounter with security forces in Jammu and Kashmir's Kupwara district on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X