• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರದ ಬೀದಿ ನಿಶ್ಯಬ್ದವಾಗಿದೆ ಎಂದರೆ ಸಹಜ ಸ್ಥಿತಿ ಅಂತಲ್ಲ: ಶ್ರೀನಗರ ಮೇಯರ್

|

ಶ್ರೀನಗರ, ಸೆಪ್ಟೆಂಬರ್ 3: ಜಮ್ಮು ಕಾಶ್ಮೀರದ ಬೀದಿಗಳು ನಿಶ್ಯಬ್ದವಾಗಿದೆ, ಯಾರೂ ಓಡಾಡುತ್ತಿಲ್ಲ ಎಂದರೆ ಸಹಜ ಸ್ಥಿತಿಗೆ ಮರಳಿದೆ ಎಂದರ್ಥವಲ್ಲ ಎಂದು ಶ್ರೀನಗರ ಮೇಯರ್ ಜುನೈದ್ ಅಜೀಮ್ ಮಟ್ಟು ಹೇಳಿದ್ದಾರೆ.

ಬೀದಿಗಳಲ್ಲಿ ಜನರು ಕಾಣುತ್ತಿಲ್ಲ ಎಂದ ಮಾತ್ರಕ್ಕೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎಂದುಕೊಳ್ಳುವುದು ಮೂರ್ಖತನ ಎಂದರು.

ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ಸೇರಿದಂತೆ ಹಲವಾರು ದೇಶಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸುದೀರ್ಘವಾದ ಭದ್ರತಾ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ವಿಭಿನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ವಾರಗಳ ನಂತರ, ಶ್ರೀನಗರ ಮತ್ತು ಜಮ್ಮುವಿನ ಮೇಯರ್‌ಗಳಿಗೆ ಕೇಂದ್ರ ಆದೇಶದ ಮೂಲಕ ರಾಜ್ಯ ಸಚಿವರ ಸಮಾನ ಸ್ಥಾನಮಾನವನ್ನು ನೀಡಲಾಯಿತು ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವುದನ್ನು ಮಟ್ಟು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆ ಸಾಧ್ಯತೆ

ಯುರೋಪಿಯನ್ ಯೂನಿಯನ್ ವಿದೇಶಾಂಗ ನೀತಿ ಮುಖ್ಯಸ್ಥ ಫೆಡೆರಿಕಾ ಮೊಘೆರಿನಿ ಕೂಡ ಭಾರತ-ಪಾಕಿಸ್ತಾನ ಮಾತುಕತೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಕಾಶ್ಮೀರಿ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಪುನಃಸ್ಥಾಪಿಸುವ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದರು.

 ರಾಜಕಾರಣಿಗಳ ಬಂಧನಕ್ಕೆ ವಿರೋಧ

ರಾಜಕಾರಣಿಗಳ ಬಂಧನಕ್ಕೆ ವಿರೋಧ

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ (ಜೆಕೆಪಿಸಿ) ವಕ್ತಾರರೂ ಆಗಿರುವ ಶ್ರೀನಗರ ಮೇಯರ್ ಕಾಶ್ಮೀರದಲ್ಲಿ ಮುಖ್ಯವಾಹಿನಿಯ ರಾಜಕಾರಣಿಗಳನ್ನು ಬಂಧನಕ್ಕೆ ಒಳಪಡಿಸುವ ಕೇಂದ್ರದ ಕ್ರಮವನ್ನು ಖಂಡಿಸಿದರು.

 ಸಜ್ಜಾದ್ ಲೋನ್ ವಶಕ್ಕೆ

ಸಜ್ಜಾದ್ ಲೋನ್ ವಶಕ್ಕೆ

ಜಮ್ಮು ಮತ್ತು ಕಾಶ್ಮೀರದ ಕೇಂದ್ರದ ಕ್ರಮಕ್ಕೆ ಮುಂಚಿತವಾಗಿ ಜೆಕೆಪಿಸಿ ಮುಖ್ಯಸ್ಥ ಸಜ್ಜಾದ್ ಲೋನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

 ಜಮ್ಮು ಕಾಶ್ಮೀರಕ್ಕೆ ವಿಧಿಸಿದ್ದ ನಿರ್ಬಂಧ ಕ್ರಮೇಣ ಸಡಿಲಿಕೆ

ಜಮ್ಮು ಕಾಶ್ಮೀರಕ್ಕೆ ವಿಧಿಸಿದ್ದ ನಿರ್ಬಂಧ ಕ್ರಮೇಣ ಸಡಿಲಿಕೆ

ಜಮ್ಮು ಕಾಶ್ಮೀರಕ್ಕೆ ಹಾಕಿದ್ದ ನಿರ್ಬಂಧವನ್ನು ಕ್ರಮೇಣವಾಗಿ ಸಡಿಲಗೊಳಿಸಲಾಗುವುದು ಎಂದು ಕೇಂದ್ರ ಭರವಸೆ ನೀಡಿದೆ. ತಮ್ಮ ಪ್ರೀತಿಪಾತ್ರರೊಡನೆ ಸಂವಹನ ನಡೆಸಲು ಸಾಧ್ಯವಾಗದ ಕುಟುಂಬಗಳು ಇನ್ನೂ ಸಾಕಷ್ಟು ಇವೆ ಎಂದರು.

 ಅಸ್ತಿತ್ವವಾದದ ಬಿಕ್ಕಟ್ಟು

ಅಸ್ತಿತ್ವವಾದದ ಬಿಕ್ಕಟ್ಟು

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದರಿಂದ "ಅಸ್ತಿತ್ವವಾದದ ಬಿಕ್ಕಟ್ಟು" ಉಂಟಾಗಿದೆ ಎಂದು ಶ್ರೀನಗರ ಮೇಯರ್ ಹೇಳಿದ್ದಾರೆ.

ನಾವು ಹಿಂಸಾಚಾರ, ಬೆದರಿಕೆಯೊಂದಿಗೆ ಬದುಕಿದ್ದೇವೆ ಆದರೆ ಅದು ನಮಗೆ ಹೊಸದಲ್ಲ, ಆದರೆ ಮೂಲಭೂತ ಹಕ್ಕುಗಳನ್ನು ಹಿಂತೆಗೆದುಕೊಳ್ಳುವುದನ್ನು ಸಮರ್ಥಿಸಲು ಅದನ್ನು ಬಳಸುವುದು ಅದು ಕಾಶ್ಮೀರದಲ್ಲಿ ಪರಕೀಯತೆಯ ಅತ್ಯಂತ ಮುಖ್ಯ ಭಾಗವಾಗಿದೆ ಎಂದರು.

ಸಂದರ್ಶನವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನಿರ್ಬಂಧ ಹೇರುವ ಅಗತ್ಯವನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಮರ್ಥಿಸಿಕೊಂಡಿದ್ದು, ಭಯೋತ್ಪಾದಕರು ಸೇರ್ಪಡೆಗೊಳ್ಳುವುದನ್ನು ತಡೆಯಲು ಇಂತಹ ಕ್ರಮ ಅಗತ್ಯ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Srinagar Mayor Junaid Azim Mattu says that while there may not be any bodies littering the streets of Kashmir, assuming that it has returned to normal would be highly unrealistic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more