• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ಆತ್ಮಾಹುತಿ ದಾಳಿಯ ಮಾಸ್ಟರ್ ಮೈಂಡ್ ಹತ್ಯೆ

|
   Pulwama : ಪುಲ್ವಾಮಾ ದಾಳಿ ಹಿಂದಿನ ರೂವಾರಿಯನ್ನ ಹೊಡೆದು ಉರುಳಿಸಿದ ಭಾರತ ಸೇನೆ | Oneindia Kannada

   ಶ್ರೀನಗರ, ಮಾರ್ಚ್ 11: ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾ ಜಿಲ್ಲೆಯ ಆವಂತಿಪೊರ್ ನಲ್ಲಿ ನಡೆದ ಅತ್ಮಾಹುತಿ ದಾಳಿಯ ಹಿಂದಿನ ಸಂಚುಕೋರ ಜೈಷ್ ಎ ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ 'ಮೊಹಮ್ಮ ಭಾಯಿ' ಯನ್ನು ಭಾರತೀಯ ಸೈನಿಕರು ಟ್ರಾಲ್ ನ ನಡೆದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿರುವ ಸುದ್ದಿ ಬಂದಿದೆ.

   ಪುಲ್ವಾಮಾ ಆತ್ಮಾಹುತಿ ದಾಳಿಯ ಯೋಜನೆ ರೂಪಿಸಿದ್ದ 'ಮೊಹಮ್ಮದ್ ಭಾಯಿ' ದಾಳೀಗೆ ಬಳಸಿದ ಮಾರುತಿ ಎಕೋ ಕಾರು ನೀಡಿದ್ದ. ಪುಲ್ವಾಮಾ ದಾಳಿಯ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ 23 ವರ್ಷ ವಯಸ್ಸಿನ ಎಲೆಕ್ಟ್ರಿಷಿಯನ್ ಮುದಾಸಿರ್ ರೂಪಿಸಿದ್ದ ಸಂಚು ಹಾಗೂ ಆತ್ಮಾಹುತಿ ದಾಳಿ ನಡೆಸಿದ ಅಹ್ಮದ್ ದಾರ್ ನಡುವಿನ ಸಂಭಾಷಣೆಯ ವಿವರಗಳು ಸಿಕ್ಕಿವೆ.

   24 ವರ್ಷದವನಿದ್ದಾಗಲೇ ವಿಮಾನ ಹೈಜಾಕ್ ಮಾಡಿದ್ದ ಜೈಷ್ ಕಮಾಂಡರ್ ಅಸ್ಗರ್

   ಪುಲ್ವಾಮಾ ಜಿಲ್ಲೆಯವನಾದ ಮುದಾಸಿರ್ ಪದವೀಧರನಾಗಿದ್ದು, ಪುಲ್ವಾಮಾ ದಾಳಿಗೆ ಬೇಕಾದ ಸ್ಫೋಟಕ ವಸ್ತು ಹಾಗೂ ಕಾರನ್ನು ಪೂರೈಸಿದ್ದ. ಟ್ರಾಲ್ ಪ್ರದೇಶದ ಮಿರ್ ಮೊಹಲ್ಲಾಕ್ಕೆ ಸೇರಿದ ಮುದಾಸಿರ್ ಖಾನ್, ಜೈಷ್ ಎ ಮೊಹಮದ್ ಸೇರಿದ್ದು, 2017ರ ಸುಮಾರಿಗೆ ಎಂಬುದು ವಿಶೇಷ.

   ಕಣಿವೆ ರಾಜ್ಯದಲ್ಲಿ ಜೈಷ್ ಎ ಮೊಹಮ್ಮದ್ ಪ್ರಾಬಲ್ಯ ಹೆಚ್ಚಾಗಲು ಕಾರಣನಾದ ನೂರ್ ಮೊಹಮ್ಮದ್ ತಾಂತ್ರೆ ಅಲಿಯಾಸ್ ನೂರ್ ತ್ರಾಲಿ ಜತೆಗೂಡಿದ ಮುದಾಸಿರ್ ಖಾನ್, ವಿಧ್ವಂಸಕ ಕೃತ್ಯಗಳ ಸಂಚು ರೂಪಿಸುವಲ್ಲಿ ಪರಿಣಿತನಾದ.

   2017ರ ಡಿಸೆಂಬರ್ ನಲ್ಲಿ ತ್ರಾಲಿ ಸತ್ತ ಬಳಿಕ, ಮನೆ ತೊರೆದ ಮುದಾಸಿರ್, 2018ರ ಜನವರಿ 4ರಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿಬಿಟ್ಟ. ಐಟಿಐನಿಂದ ಒಂದು ವರ್ಷಗಳ ಕಾಲದ ಎಲೆಕ್ಟ್ರಿಷಿಯನ್ ಡಿಪ್ಲೋಮಾ ಕೋರ್ಸ್ ಮಾಡಿದ್ದ ಮುದಾಸಿರ್ ಅವರ ತಂದೆ ಕೂಲಿ ಕಾರ್ಮಿಕನಾಗಿದ್ದಾನೆ. ಫೆಬ್ರವರಿ 2018ರ ಸುಂಜಾವಾನ್ ಆರ್ಮಿ ಕ್ಯಾಂಪ್ ದಾಳಿ ಪ್ರಕರಣದಲ್ಲೂ ಮುದಾಸಿರ್ ಹೆಸರು ಕೇಳಿ ಬಂದಿತ್ತು.

   ಪಾಕ್ ನಲ್ಲಿ ಮಸೂದ್ ಅಜರ್ ಸಹೋದರ ಸೇರಿ 44 ಉಗ್ರರು ವಶಕ್ಕೆ

   ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರು ಬರುತ್ತಿದ್ದ ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ಕಾರು ನುಗ್ಗಿಸಿ ಸ್ಫೋಟಕ ನಡೆಸಲು ಬೇಕಾದ ಯೋಜನೆ, ಸಾಮಾಗ್ರಿ, ಸಲಕರಣೆಗಳನ್ನು ಮುದಾಸಿರ್ ಒದಗಿಸಿದ್ದ. ಮುದಾಸಿರ್ ನಿರ್ದೇಶನದಂತೆ ಆದಿಲ್ ಅಹ್ಮದ್ ದಾರ್ ಅಂದು ಸ್ಫೋಟಕಗಳನ್ನು ಹೊಂದಿದ್ದ ಮಾರುತಿ ಎಕೋ ಕಾರನ್ನು ಸಿಆರ್ ಪಿಎಫ್ ಬಸ್ ನತ್ತ ನುಗ್ಗಿಸಿ ಸ್ಫೋಟಿಸಿದ್ದ. ಈ ದುರ್ಘಟನೆಯಲ್ಲಿ 40ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Jaish-e-Mohammed terrorist Mudasir Ahmed Khan, alias 'Mohd Bhai', has been identified as the brains behind the Pulwama terror attack.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more