ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ

|
Google Oneindia Kannada News

ಶ್ರೀನಗರ, ಡಿಸೆಂಬರ್ 10: ಕಣಿವೆ ರಾಜ್ಯದಲ್ಲಿ ದಿನೇ ದಿನೇ ಉಗ್ರರ ಉಪಟಳ ಹೆಚ್ಚಾಗಿದೆ. ಇಂದು ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ವಿಜಯ್ ಕುಮಾರ್ ಅವರು, 'ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುಲ್ಶನ್ ಚೌಕ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಅಪರಿಚಿತ ಉಗ್ರರು ಪೊಲೀಸ್ ಪಡೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ

ದಾಳಿಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು.ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

Terrorists Kill 2 Policemen In Jammu and Kashmir’s Bandipora

ಅಂತೆಯೇ ಘಟನಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುಲ್ಶಾನ್ ಚೌಕ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಮೊಹಮ್ಮದ್ ಸುಲ್ತಾನ್ ಮತ್ತು ಫಯಾಜ್ ಅಹ್ಮದ್ ಎಂಬ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರು ಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 10 ಹಿಜ್ಬುಲ್ ಮುಜಾಹಿದ್ದೀನ್, 17 ಲಷ್ಕರ್, 4 ಅಲಬ್ದಾರ್, 4 ಜೈಶ್ ಭಯೋತ್ಪಾದಕರು. ಇದಾದ ನಂತರ ಶೋಪಿಯಾನ್ ನಲ್ಲಿ ಒಟ್ಟು 24 ಸಕ್ರಿಯ ಭಯೋತ್ಪಾದಕರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಅದರಲ್ಲಿ 5 ಹಿಜ್ಬುಲ್ ಮುಜಾಹಿದ್ದೀನ್, 14 ಲಷ್ಕರ್ ಮತ್ತು ಒಟ್ಟು 5 ಅಲ್ಬದರ್ ಭಯೋತ್ಪಾದಕರು ಇದ್ದಾರೆ ಎನ್ನಲಾಗಿದೆ. ಇನ್ನು ಕುಲ್ಗಾಮ್‌ನಲ್ಲಿ 13, ಶ್ರೀನಗರದಲ್ಲಿ 8, ಅನಂತನಾಗ್‌ನಲ್ಲಿ 8 ಮತ್ತು ಬಾರಾಮುಲ್ಲಾದಲ್ಲಿ 5 ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಲ್ಲಾ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಭದ್ರತಾ ಏಜೆನ್ಸಿಗಳು ಸಿದ್ಧತೆಯಲ್ಲಿ ತೊಡಗಿವೆ.

ಪಾಕಿಸ್ತಾನದ ಐಎಸ್‌ಐ (ISI) ಯುವಕರನ್ನು ಭಯೋತ್ಪಾದನೆಯ ಹಾದಿಗೆ ತಳ್ಳುವುದರೊಂದಿಗೆ ಗಡಿ ನಿಯಂತ್ರಣ ರೇಖೆ (LOC) ಮೂಲಕ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ವರದಿಯೊಂದರ ಪ್ರಕಾರ, ಈ ವರ್ಷ ಇದುವರೆಗೆ 46 ಒಳನುಸುಳುವಿಕೆ ಯತ್ನಗಳು ನಡೆದಿವೆ.

ಇದರಲ್ಲಿ ಸುಮಾರು 17 ಭಯೋತ್ಪಾದಕರು ಒಳನುಸುಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ, ಇದುವರೆಗೆ ಎಷ್ಟು ಉಗ್ರರು ನುಸುಳಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿವೆ. ಈ ಪಟ್ಟಿಯ ಪ್ರಕಾರ, 38 ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರದಲ್ಲಿದ್ದಾರೆ, ಇದು ಕಾಶ್ಮೀರದ ಶಾಂತಿ ಮತ್ತು ನೆಮ್ಮದಿಗೆ ಅಪಾಯವಾಗಿ ಪರಿಣಮಿಸಲಿದೆ.

38 ಉಗ್ರರ ಪೈಕಿ 27 ಭಯೋತ್ಪಾದಕರು ಲಷ್ಕರ್ ಮತ್ತು ಉಳಿದ 11 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಯವರಾಗಿದ್ದಾರೆ. ಪಟ್ಟಿಯ ಪ್ರಕಾರ, ಈ ಪೈಕಿ 4 ಭಯೋತ್ಪಾದಕರು ಶ್ರೀನಗರದ ವಿವಿಧ ಪ್ರದೇಶಗಳಲ್ಲಿ, 3 ಕುಲ್ಗಾಮ್, 10 ಪುಲ್ವಾಮಾ, 10 ಬಾರಾಮುಲ್ಲಾ ಮತ್ತು 11 ಭಯೋತ್ಪಾದಕರು ಅಡಗಿಕೊಂಡಿರಬಹುದು ಎನ್ನಲಾಗಿದೆ.

ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ (POK) ಭಯೋತ್ಪಾದಕ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮಾಹಿತಿ ಪ್ರಕಾರ ಭಯೋತ್ಪಾದಕ ಶಿಬಿರಗಳಲ್ಲಿ 200-300 ಉಗ್ರರು ಇರುವ ಬಗ್ಗೆ ಮಾಹಿತಿ ಲಭಿಸಿದೆ.

Recommended Video

Rohit Sharmaಗೆ T20ಗಿಂತಲೂ ODI ನಾಯಕತ್ವದ ಮೇಲೆ ಕಾಣ್ತಿತ್ತು | Oneindia Kannada

English summary
In yet another brazen attack against India’s sovereignty in Jammu and Kashmir, terrorists killed two policemen in North Kashmir’s Bandipora area today evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X