ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡಿಸಿ ಅಧ್ಯಕ್ಷರ ಸಭೆ ಮೇಲೆ ಉಗ್ರರ ದಾಳಿ: ಇಬ್ಬರ ಹತ್ಯೆ

|
Google Oneindia Kannada News

ಶ್ರೀನಗರ, ಮಾರ್ಚ್ 29: ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ಸೋಮವಾರ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್‌ನ (ಬಿಡಿಸಿ) ಅಧ್ಯಕ್ಷೆ ಫರೀದಾ ಖಾನ್ ಅವರಿದ್ದ ಸಭೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಫರೀದಾ ಖಾನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ಪೊಲೀಸರು ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಕೌನ್ಸಿಲರ್‌ಗಳ ಸಭೆಯ ವೇಳೆ ಈ ದಾಳಿ ನಡೆದಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ನಾಯಕಿ ಫರೀದಾ ಖಾನ್ ಯಾವುದೇ ಗಾಯಗಳಾಗದೆ ತಪ್ಪಿಸಿಕೊಂಡಿದ್ದಾರೆ. ಒಬ್ಬ ಕೌನ್ಸಿಲರ್ ಹಾಗೂ ಒಬ್ಬ ಪಿಎಸ್‌ಒ ಉಗ್ರರ ಆಕ್ರಮಣಕ್ಕೆ ಬಲಿಯಾಗಿದ್ದು, ಮತ್ತೊಬ್ಬ ಕೌನ್ಸಿಲರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಆರ್‌ಪಿಎಫ್ ಪಡೆ ಮೇಲೆ ಉಗ್ರರ ದಾಳಿ: ಒಬ್ಬ ಯೋಧ ಹುತಾತ್ಮಸಿಆರ್‌ಪಿಎಫ್ ಪಡೆ ಮೇಲೆ ಉಗ್ರರ ದಾಳಿ: ಒಬ್ಬ ಯೋಧ ಹುತಾತ್ಮ

ಸೋಪೋರ್‌ನ ಪಾಲಿಕೆ ಕಚೇರಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಶಫ್ತಾಖ್ ಅಹ್ಮದ್ ಮತ್ತು ಕೌನ್ಸಿಲರ್ ರಿಯಾಜ್ ಅಹ್ಮದ್ ಹುತಾತ್ಮರಾಗಿದ್ದಾರೆ. ಕೌನ್ಸಿಲರ್ ಶಮ್ಸುದ್ದೀನ್ ಪೀರ್ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Terrorists Attack BDC Councillors Meeting In Kashmirs Sopore: 2 Killed

ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಇಬ್ಬರು ಉಗ್ರರು ಸಮೀಪದ ಕಟ್ಟಡವೊಂದರಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

Recommended Video

ಪಂದ್ಯ ಗೆದ್ದ ಬಳಿಕ ತನ್ನ ಬೇಸರವನ್ನು ಹೊರ ಹಾಕಿದ ಕೊಹ್ಲಿ | Oneindia Kannada

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಕಾಶ್ಮೀರದ ಬುದ್ಗಾಂ ಜಿಲ್ಲೆಯ ಖಾಗ್‌ನಲ್ಲಿ ಬಿಡಿಸಿ ಅಧ್ಯಕ್ಷ ಬೂಪಿಂದರ್ ಸಿಂಗ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

English summary
An unidentified terrorists attacked BDC Councillors meeting chaired by Fareeda Khan in Kashmir's Sopore, 2 Killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X