India
 • search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್ ಮ್ಯಾನೇಜರ್ ಹತ್ಯೆಯಲ್ಲಿ ಶಾಮೀಲಾಗಿರುವ ಉಗ್ರನ ಹತ್ಯೆ: ಪೊಲೀಸ್

|
Google Oneindia Kannada News

ಶೋಪಿಯಾನ್‌, ಜೂನ್ 15: ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಇಬ್ಬರು ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್‌ನ ಹತ್ಯೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

''ಭಯೋತ್ಪಾದಕ ಸಂಘಟನೆ ಎಲ್ಇಟಿ ಜೊತೆ ನಂಟು ಹೊಂದಿರುವ ಇಬ್ಬರು ಭಯೋತ್ಪಾದಕರು ಕಳೆದ ರಾತ್ರಿ ಕೊಲ್ಲಲ್ಪಟ್ಟರು. ಇವರ ಗುರುತು ಪತ್ತೆಯಾಗುತ್ತಿದೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು" ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ಹತ್ಯೆಯಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಶೋಪಿಯಾನ್‌ನ ಜಾನ್ ಮೊಹಮ್ಮದ್ ಲೋನ್ ಎಂದು ಗುರುತಿಸಲಾಗಿದೆ. ಇತರ ಭಯೋತ್ಪಾದಕ ಅಪರಾಧಗಳ ಜೊತೆಗೆ, ಇತ್ತೀಚೆಗೆ ಕುಲ್ಗಾಮ್ ಜಿಲ್ಲೆಯಲ್ಲಿ ಜೂನ್ 2 ರಂದು ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಹತ್ಯೆಯಲ್ಲಿ ಅವನು ಭಾಗಿಯಾಗಿದ್ದಾನೆ" ಎಂದು ಪೊಲೀಸರು ಮತ್ತೊಂದು ಟ್ವೀಟ್‌ನಲ್ಲಿ ಸೇರಿಸಿದ್ದಾರೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಜಸ್ಥಾನದ ಹನುಮಾನ್‌ಗಢ ನಿವಾಸಿ ವಿಜಯ್‌ ಕುಮಾರ್‌ ಅವರು ಕಾಶ್ಮೀರದ ಕುಲ್ಗಾಮ್‌ನಲ್ಲಿ ತಮ್ಮ ಪೋಸ್ಟಿಂಗ್‌ಗೆ ಸೇರಿದ ಕೂಡಲೇ ಜೂನ್ 2 ರಂದು ಗುಂಡು ಹಾರಿಸಲಾಗಿತ್ತು. ರಾಜಸ್ಥಾನ ಮೂಲದವರಾದ ಎಲಾಖಹಿ ದೆಹಟಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಅರೇಹ್ ಬ್ರ್ಯಾಂಚ್‌ನ ಒಳಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬ್ಯಾಂಕ್ ಒಳಗೆ ಗ್ರಾಹಕನಂತೆ ಪ್ರವೇಶಿಸಿದ ಉಗ್ರನೊಬ್ಬ, ಗನ್‌ನಿಂದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಯದ ವಾತಾವರಣದಲ್ಲಿ ಜನಜೀವನ

ಭಯದ ವಾತಾವರಣದಲ್ಲಿ ಜನಜೀವನ

ಜಮ್ಮುವಿನ ಶಿಕ್ಷಕಿ ರಜನಿ ಬೇಲಾ ಅವರನ್ನು ಕುಲ್ಗಾಂನ ಶಾಲೆಯೊಂದರ ಹೊರಗೆ ಗುಂಡು ಹಾರಿಸಿ ಕೊಲೆ ಮಾಡಿದ ಬಳಿಕ, ಜಿಲ್ಲೆಯಲ್ಲಿ ನಡೆದ ಮತ್ತೊಬ್ಬ ಬ್ಯಾಂಕ್ ಮ್ಯಾನೇಜರ್ ಭೀಕರ ಕೃತ್ಯ ಜನರಲ್ಲಿ ಭಯ ಮೂಡಿಸಿತ್ತು. ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳು ಹೆಚ್ಚುತ್ತಿವೆ. ಇದು ಕಾಶ್ಮೀರಿ ಪಂಡಿತರ ಸಮುದಾಯದ ಪ್ರತಿಭಟನೆಗೆ ಕಾರಣವಾಗಿದೆ. ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಅವರು ಬೇಡಿಕೆ ಇರಿಸಿದ್ದಾರೆ.

ಸ್ಥಳಾಂತರಕ್ಕೆ ಮನವಿ

ಸ್ಥಳಾಂತರಕ್ಕೆ ಮನವಿ

ಈ ಕೊಲೆಯು ಕಣಿವೆಯಲ್ಲಿ ಉದ್ದೇಶಿತ ಹತ್ಯೆಗಳ ಸರಣಿಗೆ ಸೇರಿಸಿದ್ದರಿಂದ ಆಕ್ರೋಶವನ್ನು ಹುಟ್ಟುಹಾಕಿತ್ತು. ವಲಸೆ ಕಾರ್ಮಿಕರು ಮತ್ತು ಸ್ಥಳೀಯ ಅಲ್ಪಸಂಖ್ಯಾತರ ಮೇಲೆ ಉದ್ದೇಶಿತ ದಾಳಿಗಳು ಕಳೆದ ವರ್ಷ ಪ್ರಾರಂಭವಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ತಮ್ಮನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಶ್ಮೀರ ಪಂಡಿತರು ಸುರಕ್ಷತೆ ಬಗ್ಗೆ ಪ್ರಶ್ನೆ

ಕಾಶ್ಮೀರ ಪಂಡಿತರು ಸುರಕ್ಷತೆ ಬಗ್ಗೆ ಪ್ರಶ್ನೆ

ಕಳೆದ ತಿಂಗಳು ಬುದ್ಗಾಮ್‌ನ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು. ಇದರಿಂದ ಪ್ರಧಾನಿಯವರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಕಣಿವೆಯಲ್ಲಿ ಉದ್ಯೋಗದಲ್ಲಿರುವ ಸುಮಾರು 4,000 ಕಾಶ್ಮೀರ ಪಂಡಿತರು ಸುರಕ್ಷಿತವಾಗಿಲ್ಲದ ಕಾರಣ ಜಮ್ಮುವಿಗೆ ಸ್ಥಳಾಂತರಿಸಲಾಗಿದೆ.

   PM Kisan Samman Yajaneಯಿಂದ ಹಣ ಪಡೆದ ರೈತರು ಈಗ ವಾಪಸ್ ಕೊಡ್ಬೇಕು | Oneindia Kannada

   English summary
   The terrorist involved in the recent targeted killing of a bank manager in Kashmir was among two Lashkar-e-Toiba operatives gunned down in an encounter in Shopian last night, police have said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X